ಮದ್ರಾಸ್ ಹೈಕೋರ್ಟ್ ಆದೇಶ: ತಮಿಳು ನಾಡಿನಲ್ಲಿ ಕಂಡಿಯೂರಿನಲ್ಲಿ ಪೆರಿಯಾರ್ ಪ್ರತಿಮೆ 36 ವರ್ಷ ಬಳಿಕ ತೆರವು
ಪ್ರತಿಮೆಯನ್ನು ಸೂಕ್ತ ಪರ್ಯಾಯ ಸ್ಥಳಕ್ಕೆ ನಾಲ್ಕು ವಾರಗಳೊಳಗೆ ಸ್ಥಳಾಂತರಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ, ಬಿಗಿ ಪೊಲೀಸ್ ಭದ್ರತೆಯ ನಡುವೆ ಅಧಿಕಾರಿಗಳು ರಾತ್ರೋರಾತ್ರಿ ಪ್ರತಿಮೆಯನ್ನು ತೆರವುಗೊಳಿಸಿ ಸ್ಥಳಾಂತರಿಸಿದ್ದಾರೆ.
ತಮಿಳುನಾಡಿನ ಕಂಡಿಯೂರಿನ ಬ್ರಹ್ಮಶಿರಕಂಡೀಶ್ವರರ್ ದೇವಸ್ಥಾನದ ಹೊರಭಾಗದಲ್ಲಿ ದ್ರಾವಿಡರ್ ಕಳಗಂ ಸಂಘಟನೆ 1990ರಲ್ಲಿ ಸ್ಥಾಪಿಸಿದ್ದ ಪೆರಿಯಾರ್ ಪ್ರತಿಮೆಯನ್ನು 36 ವರ್ಷಗಳ ಬಳಿಕ ತೆರವುಗೊಳಿಸಲಾಗಿದೆ.
ಪ್ರತಿಮೆಯನ್ನು ದೇವಸ್ಥಾನದ ಜಮೀನಿನಲ್ಲಿ ಯಾವುದೇ ಅಧಿಕೃತ ಅನುಮತಿ ಪಡೆಯದೆ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಮಟ್ಟದ ಸರ್ವೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ತೆರವಿಗೆ ಆದೇಶ ನೀಡಿತ್ತು.
ಪ್ರತಿಮೆಯನ್ನು ಸೂಕ್ತ ಪರ್ಯಾಯ ಸ್ಥಳಕ್ಕೆ ನಾಲ್ಕು ವಾರಗಳೊಳಗೆ ಸ್ಥಳಾಂತರಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅದರಂತೆ, ಬಿಗಿ ಪೊಲೀಸ್ ಭದ್ರತೆಯ ನಡುವೆ ಅಧಿಕಾರಿಗಳು ರಾತ್ರೋರಾತ್ರಿ ಪ್ರತಿಮೆಯನ್ನು ತೆರವುಗೊಳಿಸಿ ಸ್ಥಳಾಂತರಿಸಿದ್ದಾರೆ.
ದ್ರಾವಿಡರ್ ಕಳಗಂ ಸಂಘಟನೆ 1990ರಲ್ಲಿ ದೇವಸ್ಥಾನದ ಹೊರಭಾಗದಲ್ಲಿ ಪೆರಿಯಾರ್ ಪ್ರತಿಮೆಯನ್ನು ಸ್ಥಾಪಿಸಿತ್ತು. ಕಳೆದ ಅಕ್ಟೋಬರ್ 30ರಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಪ್ರತಿಮೆಯನ್ನು ಸುರಕ್ಷಿತವಾಗಿ ತೆರವುಗೊಳಿಸಿ ನಾಲ್ಕು ವಾರಗಳೊಳಗೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವಂತೆ ತಂಜಾವೂರು ಜಿಲ್ಲಾಧಿಕಾರಿಗೆ ಆದೇಶಿಸಿತ್ತು.
ಜಿಲ್ಲಾಧಿಕಾರಿಗಳ ವರದಿ ಪ್ರಕಾರ, ಪ್ರತಿಮೆ ಸರ್ಕಾರಿ ಪುರಂಬೋಕ್ ಜಮೀನಿನಲ್ಲಿರದೆ ದೇವಸ್ಥಾನಕ್ಕೆ ಸೇರಿದ ಜಮೀನಿನಲ್ಲಿತ್ತು. ಅಲ್ಲದೆ, ದೇವಸ್ಥಾನದ ಆಡಳಿತ ಮಂಡಳಿ, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ (HR&CE) ಅಥವಾ ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆದಿರಲಿಲ್ಲ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಮೊನ್ನೆ ನವೆಂಬರ್ 22ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ (SLP) ಸಲ್ಲಿಸಿದೆ.