ಮಕ್ಕಳು ಕಾಯಿಲೆ ಬಿದ್ದರೆ ದೇವರು ಕೂಡ ದುಃಖಿಸುತ್ತಾನೆ ಎಂದ ಸುಪ್ರೀಂ ಕೋರ್ಟ್ Online Desk
ದೇಶ

ಪಟಾಕಿಗೂ ಧರ್ಮಕ್ಕೂ ಏನು ಸಂಬಂಧ? ಮಕ್ಕಳು ಕಾಯಿಲೆ ಬಿದ್ದರೆ ದೇವರು ಕೂಡ ದುಃಖಿಸುತ್ತಾನೆ ಎಂದ ಸುಪ್ರೀಂ ಕೋರ್ಟ್

ದೆಹಲಿ-ಎನ್‌ಸಿಆರ್ ವಲಯದಲ್ಲಿ ಹಬ್ಬಗಳ ಸಂದರ್ಭದಲ್ಲಿ ಉಂಟಾಗುವ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್, "ಪಟಾಕಿ ಸಿಡಿಸುವುದಕ್ಕೂ ಧರ್ಮಕ್ಕೂ ಏನು ಸಂಬಂಧ? ಧಾರ್ಮಿಕ ಆಚರಣೆಗಳಲ್ಲಿ ಪಟಾಕಿಗಳ ಪಾತ್ರವೇನಿದೆ?" ಎಂದು ಪ್ರಶ್ನಿಸಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ದೀಪಾವಳಿ ಹಬ್ಬಕೆ ಇನ್ನೇನೂ ಕೆಲವೇ ದಿನಗಳೂ ಬಾಕಿ ಇದೆ. ಇದರ ನಡುವೆಯೇ, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಮಾಲಿನ್ಯದ ಭೀತಿ ಮತ್ತೆ ತಲೆದೋರಿದೆ. ಈ ಸಂದರ್ಭದಲ್ಲೇ ಪಟಾಕಿ ನಿಷೇಧ ಹಾಗೂ ಹಬ್ಬದ ಆಚರಣೆಯ ಕುರಿತು ಸುಪ್ರೀಂ ಕೋರ್ಟ್ ನಡೆಸಿರುವ ವಿಚಾರಣೆ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಅದರಲ್ಲೂ, ಪಟಾಕಿ ಸಿಡಿಸುವುದಕ್ಕೂ ಧರ್ಮಕ್ಕೂ ನಿಜವಾಗಿಯೂ ಏನು ನಂಟು ಎಂದು ನೇರವಾಗಿ ಪ್ರಶ್ನಿಸಿರುವ ನ್ಯಾಯಪೀಠ, ಧಾರ್ಮಿಕ ಭಾವನೆಗಳಿಗಿಂತ ಜನರ ಮತ್ತು ವಿಶೇಷವಾಗಿ ಪುಟ್ಟ ಮಕ್ಕಳ ಆರೋಗ್ಯವೇ ಮುಖ್ಯ ಎಂದು ಎಚ್ಚರಿಸಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ದೆಹಲಿ-ಎನ್‌ಸಿಆರ್ ವಲಯದಲ್ಲಿ ಪ್ರತಿ ವರ್ಷ ಚಳಿಗಾಲದ ಆರಂಭದಲ್ಲಿ ಉಂಟಾಗುವ ಭೀಕರ ವಾಯುಮಾಲಿನ್ಯ ಮತ್ತು ವಿಷಕಾರಿ ದಟ್ಟ ಹೊಗೆಯನ್ನು ನಿಯಂತ್ರಿಸುವ ಕುರಿತಾದ ದೀರ್ಘಕಾಲದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠವು ನಡೆಸುತ್ತಿದೆ. ಈ ವೇಳೆ, ಹಿರಿಯ ವಕೀಲೆ ಅಪರಾಜಿತಾ ಸಿಂಗ್ ಅವರು, "ಪಟಾಕಿ ಬಳಕೆಯ ಪರವಾಗಿ ಪ್ರತಿ ಬಾರಿ ಧಾರ್ಮಿಕ ಆಚರಣೆಗಳನ್ನು ಉಲ್ಲೇಖಿಸಲಾಗುತ್ತಿದೆ. ಪಟಾಕಿಗಳಿಂದಾಗಿ ಮಕ್ಕಳು, ವೃದ್ಧರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ" ಎಂದು ಕೋರ್ಟ್ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಜಾಯ್‌ಮಲ್ಯ ಬಾಗ್ಚಿ ಅವರು, "ಪಟಾಕಿ ಸಿಡಿಸುವುದರಲ್ಲಿ ಧಾರ್ಮಿಕತೆ ಏನಿದೆ? ಪಟಾಕಿಗಳಿಗೂ ಧರ್ಮಕ್ಕೂ ಏನು ಸಂಬಂಧ?" ಎಂದು ನೇರ ಪ್ರಶ್ನೆ ಎತ್ತಿದರು.

ದೇವರೇ ಆಶ್ಚರ್ಯಚಕಿತರಾಗುತ್ತಾರೆ

ಯಾವುದೇ ಧರ್ಮವು ವಾಯುಮಾಲಿನ್ಯವನ್ನು ಉಂಟುಮಾಡುವ ಅಥವಾ ಜನರ ಆರೋಗ್ಯಕ್ಕೆ ಹಾನಿ ಮಾಡುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಿಲ್ಲ. ಧರ್ಮದ ಹೆಸರಿನಲ್ಲಿ ಹೀಗೆ ವಾಯುಮಾಲಿನ್ಯ ಮಾಡಿದರೆ ಸ್ವತಃ ದೇವರೂ ಆಶ್ಚರ್ಯಚಕಿತರಾಗಬಹುದು ಎಂದು ಮಾರ್ಮಿಕವಾಗಿ ಹೇಳಿದ ಕೋರ್ಟ್, ದೀಪಾವಳಿ ಹಬ್ಬದ ನಿಜವಾದ ಆಚರಣೆಯು ದೀಪಗಳನ್ನು ಬೆಳಗಿಸುವುದರಲ್ಲಿದೆ. ಪಟಾಕಿಗಳನ್ನು ಸಿಡಿಸಿ ಪರಿಸರ ಹಾಳುಮಾಡುವ ಬದಲು, ಹಣತೆಗಳನ್ನು ಹಚ್ಚುವ ನಮ್ಮ ಮೂಲ ಸಂಸ್ಕೃತಿಗೆ ಜನರು ಸ್ವಯಂಪ್ರೇರಿತರಾಗಿ ಮರಳಬೇಕು ಎಂದು ಕರೆ ನೀಡಿತು.

ಸಂಪೂರ್ಣ ನಿಷೇಧವಿಲ್ಲ, ನಿಯಂತ್ರಣಕ್ಕೆ ಒಲವು

ಮುಂದುವರೆದು, ಕೋರ್ಟ್ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಬಯಸುವುದಿಲ್ಲ. ಕೇವಲ ನಿಷೇಧದ ಆದೇಶಗಳು ಜನರಿಗೆ ಶಿಕ್ಷೆಯಂತೆ ಕಾಣುತ್ತವೆ. ಆದ್ದರಿಂದ ಸಂಪೂರ್ಣ ನಿಷೇಧ ಹೇರುವ ಬದಲು, ಕಡಿಮೆ ಮಾಲಿನ್ಯಕಾರಕ (ಹಸಿರು ಪಟಾಕಿ)ಗಳನ್ನು ಬಳಸಲು ಪ್ರೇರೇಪಿಸುವುದು ಮತ್ತು ನಿಗದಿತ ಅವಧಿಯಲ್ಲಿ ಮಾತ್ರ ಪಟಾಕಿ ಸಿಡಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಸೂಕ್ತ ಎಂದು ಪೀಠ ಅಭಿಪ್ರಾಯಪಟ್ಟಿದೆ. ಜೊತೆಗೆ,  ಸಂವಿಧಾನದ ವಿಧಿ 25 ರ ಅಡಿಯಲ್ಲಿರುವ ಧಾರ್ಮಿಕ ಹಕ್ಕಿಗಿಂತ, ವಿಧಿ 21 ರ ಅಡಿಯಲ್ಲಿ ನಾಗರಿಕರಿಗೆ ಸಿಗುವ 'ಆರೋಗ್ಯಕರ ಜೀವನದ ಮೂಲಭೂತ ಹಕ್ಕು' ಅತ್ಯಂತ ಪ್ರಮುಖವಾಗಿದೆ ಎಂದು ಕೋರ್ಟ್ ಪುನರುಚ್ಚರಿಸಿದೆ. ಇದಕ್ಕೂ ಮುನ್ನ ಕಳೆದ ವರ್ಷದ ವಿಚಾರಣೆಗಳಲ್ಲೂ ಸುಪ್ರೀಂ ಕೋರ್ಟ್, "ಯಾವ ಧರ್ಮವೂ ವಾಯುಮಾಲಿನ್ಯವನ್ನು ಉಂಟುಮಾಡುವ ಚಟುವಟಿಕೆಯನ್ನು ಪ್ರೋತ್ಸಾಹಿಸುವುದಿಲ್ಲ" ಎಂದು ಸ್ಪಷ್ಟಪಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!