ಆರೋಪಿ ವೈದ್ಯೆ ಮುಂದೆ ಕುಳಿತಿರುವುದು  
ದೇಶ

ಶಾಕಿಂಗ್ ವಿಡಿಯೊ: ವೈದ್ಯಕೀಯ ತಪಾಸಣೆಗೆ ಕರೆತಂದ ಆರೋಪಿಯಿಂದ ವೈದ್ಯೆಗೆ ಕಪಾಳಮೋಕ್ಷ ; ವ್ಯಾಪಕ ಖಂಡನೆ

ವರ್ಧಾ ಜಿಲ್ಲೆಯ ಆರ್ವಿ ತಾಲ್ಲೂಕಿನ ತಳೇಗಾಂವ್ ಶ್ಯಾಮಜಿ ಪಂತ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಡಾ. ಶ್ರದ್ಧಾ ಭುಮ್ರೆ ಅವರು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವರ್ಧಾ: ಮಹಾರಾಷ್ಟ್ರದ ವರ್ಧಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೊಲೀಸರ ಸಮ್ಮುಖದಲ್ಲೇ ಆರೋಪಿ ಮಹಿಳಾ ವೈದ್ಯಾಧಿಕಾರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಈ ಘಟನೆಯಿಂದ ವೈದ್ಯಕೀಯ ಸಮುದಾಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವರ್ಧಾ ಜಿಲ್ಲೆಯ ಆರ್ವಿ ತಾಲ್ಲೂಕಿನ ತಳೇಗಾಂವ್ ಶ್ಯಾಮಜಿ ಪಂತ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಡಾ. ಶ್ರದ್ಧಾ ಭುಮ್ರೆ ಅವರು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಆರೋಪಿಯ ವೈದ್ಯಕೀಯ ತಪಾಸಣೆ ನಡೆಸಲು ಪೊಲೀಸರು ಆತನನ್ನು ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು.

ವೈದ್ಯಕೀಯ ತಪಾಸಣೆ ಪೂರ್ಣಗೊಂಡು ಆರೋಪಿಯಿಂದ ಸಹಿ ಪಡೆದ ಬಳಿಕ, ಆತ ಏಕಾಏಕಿ ವೈದ್ಯೆಯ ಕೆನ್ನೆಗೆ ಹೊಡೆದಿದ್ದಾನೆ. ಆರೋಪಿ ಕಾದಿರ್ ಅಲಿ ರಜಾಕ್ ಅಲಿ ಸ್ಥಳೀಯ ನಿವಾಸಿಯಾಗಿದ್ದು, ಆತನ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ.

ಘಟನೆಯಿಂದ ಸ್ಥಳದಲ್ಲಿದ್ದ ಪೊಲೀಸರು ದಿಗ್ಭ್ರಮೆಗೊಂಡರು. ತಕ್ಷಣವೇ ಆರೋಪಿಯನ್ನು ಹಿಡಿದುಕೊಂಡರು. ಆದರೆ, ಈ ಘಟನೆ ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಸಿಬ್ಬಂದಿಯನ್ನೂ ಬೆಚ್ಚಿಬೀಳಿಸಿದೆ.

ವೈದ್ಯರ ಸಂಘದಿಂದ ಪ್ರತಿಭಟನೆ

ಈ ಘಟನೆಯನ್ನು ಸರ್ಕಾರಿ ವೈದ್ಯರ ಸಂಘ ತೀವ್ರವಾಗಿ ಖಂಡಿಸಿದೆ. ರಾಜಪತ್ರಿತ ವೈದ್ಯಾಧಿಕಾರಿಗಳ ಸಂಘದ ಪ್ರತಿನಿಧಿಗಳು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ದೂರು ಸಲ್ಲಿಸಿ, ಮನವಿ ಪತ್ರ ನೀಡಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಐವರು ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ವಹಿಸಿಲ್ಲ. ಇದು ಕರ್ತವ್ಯಲೋಪವಾಗಿದೆ ಎಂದು ಸಂಘದ ಪ್ರತಿನಿಧಿಗಳು ಆರೋಪಿಸಿದ್ದಾರೆ.

ಆರೋಪಿಯ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕು ಹಾಗೂ ಆತನನ್ನು ಆರೋಗ್ಯ ಕೇಂದ್ರಕ್ಕೆ ಕರೆತಂದ ಪೊಲೀಸರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ. ಈ ಬೇಡಿಕೆಗಳನ್ನು ಈಡೇರಿಸುವವರೆಗೆ ಹೊರರೋಗಿ ವಿಭಾಗದ (OPD) ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

ಈ ಘಟನೆಯ ಕುರಿತು ರಾಜ್ಯಮಟ್ಟದ ವೈದ್ಯರ ಸಂಘಟನೆ ಮ್ಯಾಗ್ಮೊ (MAGMO) ಗೂ ಮಾಹಿತಿ ನೀಡಲಾಗಿದೆ. ಸಂಘದ ಡಾ. ಶ್ರೀಧರ್ ತಾಮ್ಹಣ್ಕರ್, ಡಾ. ಅಮೋಲ್ ಯೆಳಣೆ ಮತ್ತು ಡಾ. ಸ್ನೇಹಲ್ ರಾಥೋಡ್ ಅವರು ಮಹಿಳಾ ವೈದ್ಯಾಧಿಕಾರಿಯ ಮೇಲೆ ನಡೆದ ಇಂತಹ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಿಬೆಟ್‌ನಲ್ಲಿ ಪ್ರಬಲ ಭೂಕಂಪ: ನೂರಾರು ಮನೆಗಳು ಧರಾಶಾಹಿ; ಕನಿಷ್ಟ 16 ಮಂದಿ ಸಾವು, 54ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ..!

ಇಸ್ರೋದ ಉಪಗ್ರಹ ಉಡಾವಣೆ ವೈಫಲ್ಯಕ್ಕಿಂತ ಕಾಂಗ್ರೆಸ್ ನಾಯಕನ ರೀ ಲಾಂಚ್ ಫೈಲ್ಯೂರ್ ಹೆಚ್ಚಾಗಿದೆ : ಪ್ರಧಾನಿ ಮೋದಿ ವ್ಯಂಗ್ಯ; Video

Namma Metro ಪ್ರಯಾಣಿಕರಿಗೆ Good News: ಮುಂದಿನ 4-5 ದಿನಗಳಲ್ಲಿ Pink Line ಮೆಟ್ರೋ ಸಂಚಾರಕ್ಕೆ ಅನುಮತಿ ಸಾಧ್ಯತೆ..!

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪ್ರಧಾನಿ ಮೋದಿ, ಸ್ಮಿತ್‌ ಮಚ್ಚಾರ್‌ಗೆ ನೆತನ್ಯಾಹು ಆಹ್ವಾನ!

ನೇಪಾಳದ ಭೀಕರ ಪ್ರವಾಹ ಮಾಸುವ ಮುನ್ನವೇ ಟಿಬೆಟ್​ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ: 2 ಬಾರಿ ಕಂಪಿಸಿದ ಭೂಮಿ!