ತೀವ್ರ ಕುತೂಹಲ ಕೆರಳಿಸಿದ್ದ ಟಾಲಿವುಡ್ ನಟ ವರುಣ್ ತೇಜ್ ಮದುವೆಗೆ ಕೊನೆಗೂ ತೆರೆ ಬಿದ್ದಿದ್ದು, ನಟಿ ಲಾವಣ್ಯ ತ್ರಿಪಾಠಿಯೊಂದಿಗೆ ನಟ ವರುಣ್ ತೇಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 
ಸಿನಿಮಾ

ಟಾಲಿವುಡ್ ಮೆಗಾ ಫ್ಯಾಮಿಲಿಯಲ್ಲಿ ಮತ್ತೊಂದು ಸಂಭ್ರಮ: ನಟ ವರುಣ್ ತೇಜ್-ನಟಿ ಲಾವಣ್ಯ ತ್ರಿಪಾಠಿ ಎಂಗೇಜ್ಡ್!

ತೀವ್ರ ಕುತೂಹಲ ಕೆರಳಿಸಿದ್ದ ಟಾಲಿವುಡ್ ನಟ ವರುಣ್ ತೇಜ್ ಮದುವೆಗೆ ಕೊನೆಗೂ ತೆರೆ ಬಿದ್ದಿದ್ದು, ನಟಿ ಲಾವಣ್ಯ ತ್ರಿಪಾಠಿಯೊಂದಿಗೆ ನಟ ವರುಣ್ ತೇಜ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಟಾಲಿವುಡ್‌ನ ʼಮಿಸ್ಟರ್ʼ ಮತ್ತು ʼಅಂತರಿಕ್ಷಂʼ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ಜೋಡಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಶುಕ್ರವಾರ ರಾತ್ರಿ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮಣಿಕೊಂಡದಲ್ಲಿರುವ ನಾಗಬಾಬು ಅವರ ಮನೆಯಲ್ಲಿ ಮೆಗಾ ಸೋದರಸಂಬಂಧಿಗಳು, ಆಪ್ತರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಹಣೆಮಣೆ ಏರಲು ಸಜ್ಜಾಗಿದ್ದಾರೆ.
ವರುಣ್‌ ತಂದೆ ನಾಗಬಾಬು ಹಾಗೂ ಅವರ ತಾಯಿ ಅಂಜನಾ ದೇವಿ, ಚಿರಂಜೀವಿ ಮತ್ತು ಕುಟುಂಬ, ಪವನ್ ಕಲ್ಯಾಣ್, ರಾಮ್ ಚರಣ್ ಮತ್ತು ಕುಟುಂಬ, ಅಲ್ಲು ಅರವಿಂದ್ ಮತ್ತು ಕುಟುಂಬ, ಅಲ್ಲು ಅರ್ಜುನ್ ಮತ್ತು ಕುಟುಂಬ, ಅಲ್ಲು ಬಾಬಿ ಮತ್ತು ಕುಟುಂಬ, ಅಲ್ಲು ಸಿರಿಶ್, ವೈದ್ಯ ವೆಂಕಟೇಶ್ವರ ರಾವ್ ಮತ್ತು ಕುಟುಂಬದವರು, ಸಾಯಿ ಧರಮ್ ತೇಜ
ಈ ಜೋಡಿ ಮದುವೆ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ.
ಈ ಕುರಿತು ವರುಣ್ ತೇಜ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ, ಲಾವಣ್ಯ ಕೂಡ ಅದೇ ಚಿತ್ರಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಈ ಸುಂದರ ಜೋಡಿಗೆ ಅವರ ಅಭಿಮಾನಿಗಳು, ನಟ- ನಟಿಯರು ಶುಭ ಕೋರುತ್ತಿದ್ದಾರೆ.
ನಟಿ ಲಾವಣ್ಯ ತ್ರಿಪಾಠಿಯೊಂದಿಗೆ ನಟ ವರುಣ್ ತೇಜ್ ನಿಶ್ಚಿತಾರ್ಥ
ನಟ ವರುಣ್ ತೇಜ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

'ಮಟನ್ ಹಾಕ್ತೀವಿ ಅಂತ ಹೇಳಿ ಚಿಕನ್ ಕೊಟ್ರು': ರಣಾಂಗಣವಾಯ್ತು 'ನಿಕಾಹ್ ಸಮಾರಂಭ', 12 ಮಂದಿಗೆ ಗಾಯ, Video

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!