ಕಾಗೋಡು ವಿರುದ್ಧ ಕೆ.ಎಸ್.ಈಶ್ವರಪ್ಪ ಕಿಡಿ 
ರಾಜಕೀಯ

ಕಾಗೋಡು ವಿರುದ್ಧ ಕೆ.ಎಸ್.ಈಶ್ವರಪ್ಪ ಕಿಡಿ

ಕಾಗೋಡು ತಿಮ್ಮಪ್ಪ ಸ್ವೀಕರ್ ಹುದ್ದೆ ದುರ್ಬಳಕೆ ಮಾಡಿಕೊಂಡು ವಿಧಾನ ಪರಿಷತ್ತಿಗೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಈಶ್ವರಪ್ಪ ಆಪಾದಿಸಿದರು...

ವಿಧಾನ ಪರಿಷತ್: ಕಾಗೋಡು ತಿಮ್ಮಪ್ಪ ಸ್ವೀಕರ್ ಹುದ್ದೆ ದುರ್ಬಳಕೆ ಮಾಡಿಕೊಂಡು ವಿಧಾನ ಪರಿಷತ್ತಿಗೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಈಶ್ವರಪ್ಪ ಆಪಾದಿಸಿದರು.

ಕಾಗೋಡು ತಿಮ್ಮಪ್ಪ ಬೇಕಿದ್ದರೆ ಅವರ ಸದನದಲ್ಲಿ ಪ್ರತಿಪಕ್ಷದವರಂತೆ ಮಾತನಾಡಲಿ. ಪರಿಷತ್‍ಗೆ ಕೈ ಹಾಕುವುದು ಸರಿಯಲ್ಲ. ಸ್ವೀಕರ್ ತಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳಬೇಕು. ಅವರೇನೂ ಸರ್ವಾಧಿಕಾರಿಯಲ್ಲ. ಅವರು ಹೇಳಿದಂತೆ ಕೇಳುವುದಕ್ಕೆ ಪರಿಷತ್ ಸದಸ್ಯರೇನೂ ಕುರಿಗಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂಪಿ ವಿಭಜನೆ ಕುರಿತ ಮಹಾನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕವನ್ನು ತಿರಸ್ಕರಿಸಿದ ಪರಿಷತ್ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ವೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಈಶ್ವರಪ್ಪ ಗುರುವಾರ ಸದನದಲ್ಲಿ ಈ ರೀತಿ ತಿರುಗೇಟು ನೀಡಿದರು.

ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ವಿಧೇಯಕವನ್ನು ಮತ್ತೆ ಪರಿಷತ್ತಿನಲ್ಲಿ ಮಂಡಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಪರಿಷತ್ತಿನ ಪರಂಪರೆ, ಹಿರಿಮೆ ವಿಚಾರ ಪ್ರಸ್ತಾಪಿಸಿದರು. ಆಗ ಸಿಟ್ಟಿಗೆದ್ದ ಈಶ್ವರಪ್ಪ, ವಿಧಾನಪರಿಷತ್ ಸದಸ್ಯರು ಪಾಲಿಕೆಗಳ ತಿದ್ದುಪಡಿ ವಿಧೇಯಕ ವನ್ನು ವಾಪಸ್ ಕಳುಹಿಸಿವುದಕ್ಕೆ ಸ್ವೀಕರ್ ಕಾಗೋಡು ತಿಮ್ಮಪ್ಪ, ಪರಿಷತ್ತಿನ ಬಗ್ಗೆ ಬಹಳ ಹಗುರವಾಗಿ ಮಾತನಾಡಿ ಅಪಮಾನ ಮಾಡಿದ್ದಾರೆ. ವಿಧೇಯಕ ವಾಪಸ್ ಬಂದಿರುವುದು ವಿಧಾನಸಭೆಗೆ ಅಗೌರವ ಎಂದಿದ್ದಾರೆ. ಅಷ್ಟೇ ಅಲ್ಲ. ವಿಧಾನಸಭೆಯಿಂದ ಪರಿಷತ್ ರಚನೆಯಾಗಿರುವುದರಿಂದ ವಾಪಸ್ ಕಳುಹಿಸಿದ್ದು ಸರಿಯಲ್ಲ ಎಂದು ಹೇಳಿದ್ದಾರೆ. ಇದು ಸದನದ ಬಗ್ಗೆ ಲಘುವಾಗಿ ಮಾತನಾಡಿ, ಅಪಮಾನಿಸಿದಂತಾಗಿದೆ ಎಂದು ನೋವು ವ್ಯಕ್ತಪಡಿಸಿದರು.

ಪರಿಷತ್ ಎಂದರೆ ತಹಸೀಲ್ದಾರ್ ಕಚೇರಿಯಲ್ಲಿ ಗ್ರಾಮಲೆಕ್ಕಗರಿದ್ದಂತೆ ಅಲ್ಲ. ಇದು ಪರಂಪರೆ ಇರುವ ಹೆಮ್ಮೆಯ ಸದನ. ಅಷ್ಟಕ್ಕೂ ಇದು ಸಂವಿಧಾನ ಬದ್ಧವಾಗಿ ರಚನೆಯಾಗಿರುವುದು. ಆದ್ದರಿಂದ ಸದಸ್ಯರಿಗೆ ಸಿಕ್ಕಿರುವ ಹಕ್ಕು ಸಂವಿಧಾನ ಬದ್ಧವಾಗಿದೆ. ಇದೇನೂ ನಮಗೆ ಸಿಕ್ಕಿರುವ ಬಿಕ್ಷೆಯಲ್ಲ. ಇದನ್ನು ಸ್ಪೀಕರ್ ಅರ್ಥ ಮಾಡಿಕೊಳ್ಳಬೇಕು. ಏನೇ ಆಗಲಿ. ಸ್ವೀಕರ್ ಪರಿಷತ್‍ಗೆ ಅಪಮಾನ ಮಾಡಿದ್ದಾರೆ. ಹಾಗೆಂದು ಅವರ ಕ್ಷಮೆಯಾಚಿಸಬೇಕೆಂದು ಕೇಳುವುದಿಲ್ಲ. ಆದರೆ ಇನ್ನುಮುಂದೆ ಇದು ಮರುಕಳಿಸಬಾರದು ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು. ಮಹತ್ವ ಅರಿತು ಮಾತನಾಡಲಿ: ಇದಕ್ಕೆ ದನಿಗೂಡಿಸಿದ ಜೆಡಿಎಸ್‍ನ ಬಸವರಾಜ ಹೊರಟ್ಟಿ, ಕಾಗೋಡು ತಿಮ್ಮಪ್ಪ ಅವರು 1979ರಲ್ಲಿ ಪರಿಷತ್ ರದ್ದುಗೊಳಿಸಬೇಕೆಂದು ವಿಧಾನಸಭೆಯಲ್ಲಿ ದನಿ ಎತ್ತಿದ್ದರು. ಆದರೆ 1981ರಲ್ಲಿ ಅವರೇ ಪರಿಷತ್ ಸದಸ್ಯರಾದರು. ಆದ್ದರಿಂದ ಸ್ವೀಕರ್ ಅವರು ಪರಿಷತ್ ಮಹತ್ವ ಅರಿತು ಮÁತನಾಡಬೇಕು ಎಂದು ಚುಚ್ಚಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೆಸ್ಸಿ ಕಾರ್ಯಕ್ರಮದಲ್ಲಿ ದಾಂಧಲೆ: ಪಶ್ಚಿಮ ಬಂಗಾಳ ಕ್ರೀಡಾ ಸಚಿವರ ತಲೆದಂಡ; ಅರೂಪ್ ಬಿಸ್ವಾಸ್ ರಾಜೀನಾಮೆ!

ಬೋಂಡಿ ಬೀಚ್ ನಲ್ಲಿ ಗುಂಡಿನ ದಾಳಿ: ಓರ್ವ ಉಗ್ರ 'ಹೈದರಾಬಾದಿನವ': ಸ್ಫೋಟಕ ಮಾಹಿತಿ ಹಂಚಿಕೊಂಡ ತೆಲಂಗಾಣ ಪೊಲೀಸರು!

'ಅಣ್ಣಾ ಕಾಪಾಡಿ ಪ್ಲೀಸ್'.. ರಸ್ತೆಯಲ್ಲೇ ಪತಿಗೆ Heart Attack, ಜೀವ ಉಳಿಸಲು ಅಂಗಲಾಚಿದ ಪತ್ನಿ.. ಒದ್ದಾಡಿ ಪ್ರಾಣಬಿಟ್ಟ ವ್ಯಕ್ತಿ!

Lawrence Bishnoi ಜೊತೆ ನಂಟು: ಸೆಲ್ಫಿ ನೆಪದಲ್ಲಿ ಬಂಬಿಹಾ ಗ್ಯಾಂಗ್‌ನಿಂದ ಕಬಡ್ಡಿ ಆಟಗಾರ ರಾಣಾಗೆ ಗುಂಡಿಕ್ಕಿ ಬರ್ಬರ ಹತ್ಯೆ!

IPL Auction 2025: RCB ತೆಕ್ಕೆಗೆ ಮತ್ತೋರ್ವ ಆಲ್ರೌಂಡರ್, 7 ಕೋಟಿಗೆ Venkatesh Iyer ಸೇಲ್, ಕಿವೀಸ್ ಸ್ಟಾರ್ ವೇಗಿಯೂ ಬೆಂಗಳೂರು ಪಾಲು!

SCROLL FOR NEXT