ಸಂಗ್ರಹ ಚಿತ್ರ 
ರಾಜಕೀಯ

ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದರ್ಶನ ಪಡೆಯೋ ರಾಹುಲ್ 'ಎಲೆಕ್ಷನ್ ಹಿಂದೂ': ಬಿಎಸ್ ಯಡಿಯೂರಪ್ಪ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕರ್ನಾಟಕ ಪ್ರವಾಸ ಮುಂದುವರೆದಿರುವಂತೆಯೇ ಅವರ ವಿರುದ್ಧ ಟ್ವೀಟ್ ವಾರ್ ಮುಂದವರೆಸಿರುವ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದರ್ಶನ ಪಡೆಯೋ ರಾಹುಲ್ 'ಎಲೆಕ್ಷನ್ ಹಿಂದೂ' ಎಂದು ವ್ಯಂಗ್ಯವಾಡಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕರ್ನಾಟಕ ಪ್ರವಾಸ ಮುಂದುವರೆದಿರುವಂತೆಯೇ ಅವರ ವಿರುದ್ಧ ಟ್ವೀಟ್ ವಾರ್ ಮುಂದವರೆಸಿರುವ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ಜವಾರಿ ಕೋಳಿ ತಿಂದು  ನರಸಿಂಹ ಸ್ವಾಮಿ ದರ್ಶನ ಪಡೆಯೋ ರಾಹುಲ್ 'ಎಲೆಕ್ಷನ್ ಹಿಂದೂ' ಎಂದು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ನಿನ್ನೆ ಟ್ವೀಟ್ ಮಾಡಿರುವ ಬಿಎಸ್ ಯಡಿಯೂರಪ್ಪ ಅವರು, ಪತ್ರಿಕೆಗಳ ಎರಡು ವರದಿಗಳನ್ನು ಹಿನ್ನಲೆಯಾಗಿಸಿಕೊಂಡು ಟ್ವೀಟ್ ಮಾಡಿದ್ದು, ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದರ್ಶನ ಪಡೆಯೋ ರಾಹುಲ್ 'ಎಲೆಕ್ಷನ್  ಹಿಂದೂ' ಎಂದು ಕಿಡಿಕಾರಿದ್ದಾರೆ. ಅಂತೆಯೇ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧವೂ ಹರಿಹಾಯ್ದಿರುವ ಬಿಎಸ್ ವೈ, ಮೀನು ತಿಂದು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪ್ರತಿ ಬಾರಿ ಏಕೆ ಹಿಂದೂಗಳ  ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
"ಮೀನು ತಿಂದು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯೋ ಸಿಎಂ ಸಿದ್ದರಾಮಯ್ಯ ಒಂದೆಡೆಯಾದರೆ, ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿಯ ದರ್ಶನ ಪಡೆಯೋ ಎಲೆಕ್ಷನ್ ಹಿಂದೂ ರಾಹುಲ್ ಗಾಂಧಿ ಮತ್ತೊಂದು ಕಡೆ.  ಪ್ರತಿ ಬಾರಿ ಏಕೆ ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್ ಧಕ್ಕೆ ತರುತ್ತಿದೆ? ಎಲ್ಲರನ್ನೂ ಸಮನಾಗಿ ಕಾಣುವುದು ಸಮಾಜವಾದ, ನಿಮ್ಮದು ಮಜಾವಾದ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಂಸಾಹಾರ ಸೇವಿಸಿರಲಿಲ್ಲ: ಉಸ್ತುವಾರಿ ಶಿವರಾಜ್ ತಂಗಡಗಿ ಸ್ಪಷ್ಟನೆ
ಇನ್ನು ಬಿಎಸ್ ಯಡಿಯೂರಪ್ಪ ಅವರ ಟ್ವೀಟ್ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಇದಕ್ಕೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಮುಖಂಡ ಶಿವರಾಜ್ ತಂಗಡಗಿ ಅವರು, ಬಿಜೆಪಿ ನಾಯಕರ ಆರೋಪದಲ್ಲಿ ಹುರುಳಿಲ್ಲ. ದೇವಸ್ಥಾನಕ್ಕೆ  ಹೋಗುವ ಮುನ್ನ ರಾಹುಲ್ ಮಾಂಸಾಹಾರ ಸೇವನೆ ಮಾಡಿರಲಿಲ್ಲ. ಅಂದು ಉಪಾಹಾರ ಕೂಟದಲ್ಲಿ ನಾನೂ ಇದ್ದೆ. ರಾಹುಲ್ ಗಾಂಧಿ ಉಪಾಹಾರಕ್ಕೆ ಚಪಾತಿ, ಆಲೂಗೆಡ್ಡೆ ಪಲ್ಯ, ದಾಲ್ ಮತ್ತು ಪಾಯಸ ಸೇವಿಸಿದ್ದರು ಎಂದು ಸ್ಪಷ್ಟನೆ  ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ