ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ 
ರಾಜಕೀಯ

ರಾಹುಲ್ ಗಾಂಧಿ ಓರ್ವ ಪಾರ್ಟ್'ಟೈಮ್ ರಾಜಕಾರಣಿ: ಸಂಸದ ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಓರ್ವ ಪಾರ್ಟ್ ಟೈಮ್ (ಅರೆಕಾಲಿಕ) ರಾಜಕಾರಣಿ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿಯವರು ಶನಿವಾರ ಹೇಳಿದ್ದಾರೆ...

ಕಲಬುರಗಿ; ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಓರ್ವ ಪಾರ್ಟ್ ಟೈಮ್ (ಅರೆಕಾಲಿಕ) ರಾಜಕಾರಣಿ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿಯವರು ಶನಿವಾರ ಹೇಳಿದ್ದಾರೆ. 
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸತ್ತವರೆಲ್ಲಾ ಬಿಜೆಪಿ ತಮ್ಮವರು ಎಂದು ಹೇಳುದ್ದಾರೆ. ಸತ್ತವರೆಲ್ಲಾ ಬಿಜೆಪಿಯವರಲ್ಲ. ಬಿಜೆಪಿಯವರು ಸತ್ತವರ ಮನೆಗೆ ಹೋಗಿ ಮರಣೋತ್ತರವಾಗಿ ಪಕ್ಷದ ಸದಸ್ಯತ್ವ ಮಾಡುತ್ತಾರ ಎಂಬ ರಾಮಲಿಂಗಾ ರೆಡ್ಡಿಯವರ ಹೇಳಿಕೆ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. 
ರಾಮಲಿಂಗಾರೆಡ್ಡಿಯವರೇ ನೀವು ರಾಜ್ಯ ಗೃಹ ಸಚಿವರೆನ್ನುವುದು ನೆನಪಿರಲಿ. ಗಲ್ಲಿ ನಾಯಕರಂತೆ ಮಾತನಾಡಬೇಡಿ. ಜವಾಬ್ದಾರಿಯುತ ಗೃಹ ಸಚಿವರ ಸ್ಥಾನದಲ್ಲಿದ್ದು, ತಮ್ಮ ಸ್ಥಾನಮಾನಕ್ಕೆ ಶೋಭೆ ತರುವಂತಹ ಮಾತುಗಳನ್ನಾಡಿ ಎಂದು ಟಾಂಗ್ ನೀಡಿದ್ದಾರೆ. 
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಹೇಳಿಕೆಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರಾಹುಲ್ ಗಾಂಧಿ ಕೊಡುವ ಪ್ರಮಾಣಪತ್ರ ನಮಗೆ ಬೇಕಿಲ್ಲ. ರಾಹುಲ್ ಓರ್ವ ಪಾರ್ಟ್ ಟೈಮ್ ರಾಜಕಾರಣಿ, ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್