ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ 
ರಾಜಕೀಯ

ಜನರು ಜೆಡಿಎಸ್'ನ್ನು ಮರೆತು ಹೋಗಿದ್ದರು, ದೇವರ ಅನುಗ್ರಹದಿಂದ ಸಿಎಂ ಆದೆ: ಹೆಚ್'ಡಿಕೆ

ವಿಧಾನಸಭಾ ಚುನಾವಣೆ ಮತ ಹಾಕುವಾಗ ಜನರು ಜೆಡಿಎಸ್ ಪಕ್ಷವನ್ನು ಮರೆತು ಹೋಗಿದ್ದರು, ದೇವರ ಅನುಗ್ರಹದಿಂದ ನಾನು ರಾಜ್ಯದ ಮುಖಅಯಮಂತ್ರಿಯಾಗಿದ್ದೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಹೇಳಿದ್ದಾರೆ...

ಬೆಂಗಳೂರು: ವಿಧಾನಸಭಾ ಚುನಾವಣೆ ಮತ ಹಾಕುವಾಗ ಜನರು ಜೆಡಿಎಸ್ ಪಕ್ಷವನ್ನು ಮರೆತು ಹೋಗಿದ್ದರು, ದೇವರ ಅನುಗ್ರಹದಿಂದ ನಾನು ರಾಜ್ಯದ ಮುಖಅಯಮಂತ್ರಿಯಾಗಿದ್ದೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೋಮವಾರ ಹೇಳಿದ್ದಾರೆ. 
ವಿಜಯನಗರದ ಕಾಸಿಯಾ ಸಭಾಂಗಣದಲ್ಲಿ ನಿನ್ನೆ ಕಾಸಿಯಾ ಶ್ರೇಷ್ಠತೆ ಮತ್ತು ನಾವೀನ್ಯತೆ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಿರ್ಧಾರ ಕೈಗೊಳ್ಳಲು ನಾನು ಸ್ವತಂತ್ರನಲ್ಲ. ಜೆಡಿಎಸ್ ಸ್ವಂತವಾಗಿ ಸರ್ಕಾರ ರಚನೆ ಮಾಡಿದ್ದರೆ, ನಿರ್ಧಾರ ಕೈಗೊಳ್ಳಬಹುದಿತ್ತು. ಡಾಬಸ್ಪೇಟ್ ಕೈಗಾರಿಕಾ ಕೇಂದ್ರವನ್ನು 4.5ಎಕರೆ ಜಾಗದಲ್ಲಿ ಸ್ಥಾಪನೆ ಮಾಡಲು ಯೋಜನೆ ರೂಪಿಸಲಾಗಿದ್ದು, ಯೋಜನೆಯಂತೆ ಈ ಕೇಂದ್ರದಲ್ಲಿ ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರ, ಅಂತರಾಷ್ಟ್ರೀಯ ಮಾರುಕಟ್ಟೆ ಮತ್ತು ಆರ್ ಆ್ಯಂಡ್ ಡಿ ಪರೀಕ್ಷಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ. 
ಚುನಾವಣೆಯಲ್ಲಿ ಮತದಾನ ಮಾಡುವಾಗ ಜನರು ಜೆಡಿಎಸ್ ಪಕ್ಷವನ್ನು ಮರೆತುಬಿಟ್ಟಿದ್ದರು. ದೇವರ ಅನುಗ್ರಹದಿಂದ ನಾನು ಮುಖ್ಯಮಂತ್ರಿಯಾಗಿದ್ದಾನೆ. ನಾನು ಅದೃಷ್ಟವಂತ ರಾಜಕಾರಣಿ. ಒಳ್ಳೆ ಕೆಲ ಮಾಡಲಿ ಎಂದು ದೇವರು ನನ್ನನ್ನು ಮುಖ್ಯಮಂತ್ರಿ ಮಾಡಿದ್ದಾನೆ. ಆದರೆ, ಕೆಲವರು ಕುಮಾರಸ್ವಾಮಿ ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತಾರೆ ಏನೋ, ಬೇಗ ಬೇಗೆ ಕೆಲಸ ಮಾಡಿಕೊಳ್ಳಬೇಕು ಎಂಬ ಆತುರದಲ್ಲಿದ್ದಾರೆ. ನೀವು ತಿಳಿದಂತೆ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದು ಅಷ್ಟು ಸುಲಭವಲ್ಲ. 2004ರ ಜೆಡಿಎಸ್-ಕಾಂಗ್ರೆಸ್ ಗಿಂತಲೂ ಈ ಬಾರಿಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಭಿನ್ನವಾಗಿದೆ ಎಂದು ತಿಳಿಸಿದ್ದಾರೆ. 
ನನ್ನ ಪರಿಸ್ಥಿತಿಯನ್ನು ಯಾರೂ ಅರ್ಧ ಮಾಡಿಕೊಳ್ಳುತ್ತಿಲ್ಲ. ಸ್ವತಂತ್ರವಾಗಿ ನಾವು ಸರ್ಕಾರ ರಚನೆ ಮಾಡಿದ್ದೇವೆಯೇ? ನಾನು ಬಹುಮತದಿಂದ ಸರ್ಕಾರ ರಚನೆ ಮಾಡಿದ್ದರೆ, ಎಲ್ಲದರ ನಿರ್ಧಾರವನ್ನು ಸ್ವಂತವಾಗಿ ತೆಗೆದುಕೊಳ್ಳಬಹುದಿತ್ತು. 2004ರ ಹಣಕಾಸಿನ ಹೊಣೆಗಾರಿಕಾ ಕಾಯ್ದೆಯನ್ನೂ ನಾನು ಪರಿಗಣಿಸಬೇಕಿದೆ. ಕಳೆದ 8-10 ವರ್ಷಗಳಿಂದ ರಾಜ್ಯದ ಹೆಚ್ಚುವರಿ ಬಜೆಟ್ ಗಳನ್ನು ನೋಡಿಕೊಂಡು ಬಜೆಟ್ ತಯಾರಿಸಲಾಗುತ್ತಿತ್ತು. ಆದರೆ ಆ ರೀತಿ ನಾನು ಮಾಡುವುದಿಲ್ಲ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ