ಸುಪ್ರೀಂ ಮೇಲೆ ಸಂಪೂರ್ಣ ನಂಬಿಕೆಯಿದೆ, ರಾಜ್ಯಪಾಲರಂತೆ ನ್ಯಾಯಾಲಯ ತಪ್ಪು ಮಾಡುವುದಿಲ್ಲ: ಕಾಂಗ್ರೆಸ್
ಸುಪ್ರೀಂಕೋರ್ಟ್ ಮೇಲೆ ಸಂಪೂರ್ಣ ನಂಬಿಕೆಯಿದ್ದು, ಕರ್ನಾಟಕ ರಾಜ್ಯಪಾಲರು ಮಾಡಿದ ತಪ್ಪನ್ನು ನ್ಯಾಯಾಲಯ ಮಾಡುವುದಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದೆ...
ಬೆಂಗಳೂರು; ಸುಪ್ರೀಂಕೋರ್ಟ್ ಮೇಲೆ ಸಂಪೂರ್ಣ ನಂಬಿಕೆಯಿದ್ದು, ಕರ್ನಾಟಕ ರಾಜ್ಯಪಾಲರು ಮಾಡಿದ ತಪ್ಪನ್ನು ನ್ಯಾಯಾಲಯ ಮಾಡುವುದಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು, ಸುಪ್ರೀಂಕೋರ್ಟ್ ನಮೇಲೆ ಸಂಪೂರ್ಣ ನಂಬಿಕೆಯಿದೆ. ರಾಜ್ಯಪಾಲರಂತೆ ನ್ಯಾಯಾಲಯ ತಪ್ಪನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಬೆಂಗಳೂರು ರೆಸಾರ್ಟ್ ನಿಂದ ಶಾಸಕರನ್ನು ಸ್ಥಳಾಂತರ ಮಾಡುತ್ತಿರುವುದರ ಪ್ರಶ್ನೆಗೆ ಉತ್ತರಿಸಿರುವ ಅವರು, ಪ್ರಸ್ತುತ ಶಾಸಕರೆಲ್ಲರೂ ಬೆಂಗಳೂರಿನಲ್ಲಿಯೇ ಇದ್ದಾರೆಂದಿದ್ದಾರೆ.
ಬಳಿಕ ಆರೋಪಗಳ ವಿರುದ್ದ ಕಿಡಿಕಾರಿರುವ ಅವರು, ಹಿಂದೊಮ್ಮೆ ಬಿಜೆಪಿ ಕೂಡ ನಕಲಿ ಮಾಡಿತ್ತು. ಅಪರಾಧ ಮಾಡಿದವರೇ ಜೋರಾಗಿ ಕೂಗಿ ಇತರರು ಕಳ್ಳರೆಂದು ಹೇಳುತ್ತಾರೆಂದಿದ್ದಾರೆ.