ಖಾಸಗಿ ವಿಮಾನ ಹಾರಾಟಕ್ಕೆ ಅನುಮತಿ ನೀಡದ ಡಿಜಿಸಿಎ: ಜೆಡಿಎಸ್ ಆರೋಪ 
ರಾಜಕೀಯ

ಖಾಸಗಿ ವಿಮಾನ ಹಾರಾಟಕ್ಕೆ ಅನುಮತಿ ನೀಡದ ಡಿಜಿಸಿಎ: ಜೆಡಿಎಸ್ ಆರೋಪ

ರಾತ್ರೋರಾತ್ರಿ ಬಿಡದಿಯ ಈಗಲ್"ಟನ್ ರೆಸಾರ್ಟ್ ಖಾಲಿ ಮಾಡಿ ಕೇರಳದ ಕೊಚ್ಚಿಗೆ ಖಾಸಗಿ ವಿಮಾನದ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನು ಸ್ಥಳಾಂತರ ಮಾಡುವ ನಾಯಕರ ಯತ್ನಕ್ಕೆ ವಿಮಾನಯಾನ ಸಚಿವಾಲಯ ಬ್ರೇಕ್ ಹಾಕಿದ್ದು...

ಬೆಂಗಳೂರು: ರಾತ್ರೋರಾತ್ರಿ ಬಿಡದಿಯ ಈಗಲ್"ಟನ್ ರೆಸಾರ್ಟ್ ಖಾಲಿ ಮಾಡಿ ಕೇರಳದ ಕೊಚ್ಚಿಗೆ ಖಾಸಗಿ ವಿಮಾನದ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನು ಸ್ಥಳಾಂತರ ಮಾಡುವ ನಾಯಕರ ಯತ್ನಕ್ಕೆ ವಿಮಾನಯಾನ ಸಚಿವಾಲಯ ಬ್ರೇಕ್ ಹಾಕಿದ್ದು, ಇದು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. 
ಬಿಡದಿಯ ರೆಸಾರ್ಟ್ ನಿಂದ ಕೊಚ್ಚಿಗೆ ತೆರಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಎರಡು ಬಸ್ ಗಳ ಮೂಲಕ ಹೆಚ್ಎಎಲ್ ವಿಮಾನಕ್ಕೆ ಆಗಮಿಸಿದ್ದರು. ಕೊಚ್ಚಿಗೆ ತೆರಳಲು ಎರಡು ಖಾಸಗಿ ವಿಮಾನಗಳನ್ನು ತರಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ವಿಮಾನದ ಹಾರಾಟಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕುವ ಮೂಲಕ ರಾತ್ರೋರಾತ್ರಿ ಕೊಚ್ಚಿಗೆ ಶಾಸಕರನ್ನು ಸ್ಥಳಾಂತರ ಮಾಡುವ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಆಸೆಗೆ ತಣ್ಣೀರೆರಚಿತ್ತು. 
ಶಾಸಕರು ಇನ್ನೇನು ವಿಮಾನದಲ್ಲಿ ಹೊರಡಬೇಕು ಎನ್ನುವಷ್ಟರಲ್ಲಿ ಕೇಂದ್ರ ವಿಮಾನಯಾನ ಸಚಿವಾಲಯ ಬೆಂಗಳೂರಿನ ಹೆಚ್ಎಎಲ್ ಹಾಗೂ ಕೊಚ್ಚಿಯ ಏರ್ ಟ್ರಾಫಿಕ್ ಕಂಟ್ರೋಲ್'ಗೆ ಇಂದು ರಾತ್ರಿ ಯಾವುದೇ ಖಾಸಗಿ ವಿಮಾನ ಹಾರಾಟಕ್ಕೆ ಅವಕಾಶ ನೀಡದಂತೆ ಕಟ್ಟಪ್ಪಣೆ ಹೊರಡಿಸಿದೆ ಎಂದು ವರದಿಗಳು ತಿಳಿಸಿವೆ. ಈ ಹಿನ್ನಲೆಯಲ್ಲಿ ವಿಶೇಷ ವಿಮಾನಗಳು ಕಳೆದ ರಾತ್ರಿ ಹಾರಾಡಲಿಲ್ಲ. ಇದರಿಂದ ಶಾಸಕರು ಕೊಚ್ಚಿಗೆ ತೆರಳಲೂ ಸಾಧ್ಯವಾಗಲಿಲ್ಲ. 
ನಾಗರೀಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ವಿಮಾನ ಕಾರ್ಯಾಚರಣೆಗಳಿಗೆ ಡಿಜಿಸಿಎ ಅನುಮತಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 
ಶಾಸಕರ ಕೊಚ್ಚಿ ಪ್ರವಾಸ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಮೂಲಗಳು, ಶಾಸಕರನ್ನು ಸ್ಥಳಾಂತರ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಈ ನಡುವಲ್ಲೇ ಎಲ್ಲಾ ವಿಮಾನ ಹಾರಾಟಗಳಿಗೂ ನಿರ್ಬಂಧ ಹೇರಲಾಗಿತ್ತು. ಶಾಸಕರನ್ನು ಸ್ಥಳಾಂತರ ಮಾಡಲು ವಿಮಾನಗಳು ಬುಕ್ ಆಗಿದ್ದವು. ಕೊನೆಯ ಕ್ಷಣದಲ್ಲಿ ಸಮಸ್ಯೆ ಎದುರಾಯಿತು ಎಂದು ಹೇಳಿದ್ದಾರೆ. 
ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಬ್ಬರೂ ಒಟ್ಟಿಗೆ ಪ್ರಯಾಣ ಬೆಳೆಸುತ್ತಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆಗಳಿದ್ದವು. ಆದರೆ ಎಲ್ಲಾ ಪ್ರಯತ್ನಗಳೂ ವಿಫಲಗೊಂಡವು ಎಂದು ತಿಳಿಸಿದ್ದಾರೆ. 
ವಿಮಾನ ಹಾರಾಟಕ್ಕೆ ಅನುಮತಿ ದೊರೆಯದ ಹಿನ್ನಲೆಯಲ್ಲಿ ಮತ್ತೆ ಜೆಡಿಎಸ್ ಶಾಸಕರನ್ನು ಬೆಂಗಳೂರಿನ ಹೋಟೆಲ್ ಹಾಗೂ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್'ಗೆ ಕರೆ ತರಲಾಯಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!

ಮಲೆನಾಡು, ಕರಾವಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ: ಕೇಂದ್ರ ಸಚಿವ ವಿ. ಸೋಮಣ್ಣ