ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜಕೀಯ

'ಆಪರೇಷನ್ ಕಮಲ'ಕ್ಕೆ ಸೆಡ್ಡು ಹೊಡೆದ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟು: ತಂತ್ರಗಾರಿಕೆ ಯಶಸ್ವಿಯಾಗಿದ್ದು ಹೇಗೆ?

ಅಪರೂಪಕ್ಕೆ ಕಾಂಗ್ರೆಸ್-ಜೆಡಿಎಸ್ ಪಡೆ ಒಗ್ಗೂಡಿ ಪಕ್ಕಾ ತಂತ್ರಗಾರಿಕೆ ರೂಪಿಸಿ ಅದನ್ನು ಶೇ.100ರಷ್ಟು ನಿಖರವಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಬಿಜೆಪಿಯ ಆಪರೇಷನ್ ಕಮಲದಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು...

'ಆಪರೇಷನ್ ಕಮಲ'ಕ್ಕೆ ಸೆಡ್ಡು ಹೊಡೆದ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟು: ತಂತ್ರಗಾರಿಕೆ ಯಶಸ್ವಿಯಾಗಿದ್ದು ಹೇಗೆ?
Manjula VN
Updated On : 20 May 2018, 9:08 am
ಬೆಂಗಳೂರು; ಅಪರೂಪಕ್ಕೆ ಕಾಂಗ್ರೆಸ್-ಜೆಡಿಎಸ್ ಪಡೆ ಒಗ್ಗೂಡಿ ಪಕ್ಕಾ ತಂತ್ರಗಾರಿಕೆ ರೂಪಿಸಿ ಅದನ್ನು ಶೇ.100ರಷ್ಟು ನಿಖರವಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಬಿಜೆಪಿಯ ಆಪರೇಷನ್ ಕಮಲದಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. 
ಇದರಲ್ಲಿ ಸ್ವಲ್ಪ ಯಡವಟ್ಟುಗಳಾದರೂ ಯಡಿಯೂರಪ್ಪ ಅವರ ವಿಶ್ವಾಸಮತ ಪ್ರಸ್ತಾಪ ಪ್ರಕರಣವೂ ಬೇರೆಯೇ ತಿರುವು ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿತ್ತು. ಆದರೆ, ಕಾಂಗ್ರೆಸ್-ಜೆಡಿಎಸ್ ನಾಯಕರು ಅತ್ಯಂತ ಮುಂಜಾಗ್ರತೆವಹಿಸಿದ್ದು ಮತ್ತು ಪ್ರತಿದಾಳಗಳನ್ನು ನಿಖರವಾಗಿ ಉರುಳಿಸಿದ್ದರಿಂದ ಬಹುಮತಕ್ಕೆ ಶಾಸಕರನ್ನು ಹೊಂದಿಸಲು ಸಾಧ್ಯವಾಗದೇ ಬಿಜೆಪಿ ನಾಯಕರು ಕೈಚೆಲ್ಲುವಂತೆ ಮಾಡಿದರು. 
ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ಸಾಧ್ಯವಿಲ್ಲ ಎಂಬ ಸಂದೇಶ ದೊರೆದ ದಿನದಿಂದ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಾಗದೆ ರಾಜಿನಾಮೆ ನೀಡುವ ಕ್ಷಣದರವರೆಗೆ ಕಾಂಗ್ರೆಸ್ ಒಂದು ತಂಡವಾಗಿ ಒಗ್ಗೂಡಿ ಕೆಲಸ ಮಾಡಿತು. ಶುಕ್ರವಾರವಂತೂ ಈ ಕಾರ್ಯತತ್ಪರತೆ ಪರಾಕಾಷ್ಠೆ ಮುಟ್ಟಿತ್ತು. 

Advertisement

Advertisement

ಒಂದು ಕಡೆ ಶಾಸಕರು ಬಿಜೆಪಿಯ ವಶವಾಗದಂತೆ ಎಚ್ಚರವಹಿಸುವುದು ಹಾಗೂ ಮತ್ತೊಂದು ಕಡೆ ಬಿಜೆಪಿಯು ನಡೆಸಿದ ಆಪರೇಷನ್ ಕಮಲ ಪ್ರಯತ್ನದ ಆಡಿಯೋಗಳನ್ನು ಸಮರ್ಪಕ ಮಧ್ಯಂತರದಲ್ಲಿ ಮಾಧ್ಯಗಳಿಗೆ ಬಿಡುಗಡೆ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಮೇಲೆ ಒತ್ತಡ ನಿರ್ಮಾಣವಾಗುವಂತೆ ನೋಡಿಕೊಳ್ಳಲಾಯಿತು. 
ಹಿರಿಯ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ತಂತ್ರಗಾರಿಕೆ ರೂಪಿಸಿದರು. ಅದನ್ನು ಕಾರ್ಯಗತಗೊಳಿಸಲು ಡಿ.ಕೆ.ಶಿವಕುಮಾರ್, ವಿ.ಎಸ್.ಉಗ್ರಪ್ಪ ಹಾಗೂ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು. ಅದರಲ್ಲೂ ನಿರ್ಣಾಯಕ ದಿನವಾದ ಶುಕ್ರವಾರ ಹಿರಿಯ ನಾಯಕರು ಮಾತ್ರವಲ್ಲ. ಪಕ್ಷದ ಕಿರಿಯ ನಾಯಕರು, ಮೊದಲ ಬಾರಿ ಶಾಸಕರಾದವರು, ಅಷ್ಟೇ ಏಕೆ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರವರೆಗೂ ಕಾಂಗ್ರೆಸ್'ನ ಪ್ರತಿಯೊಬ್ಬರೂ ತಮಗೆವಹಿಸಿದ ಕೆಲಸವನ್ನು ಅತ್ಯಂತ ನಿಖರವಾಗಿ ನಿರ್ವಹಿಸಿದ್ದು ಕಂಡು ಬಂತು. 
ಹೈದರಾಬಾದ್'ನಿಂದ ವಿಧಾನಸಭೆಗೆ ಶಾಸಕರನ್ನು ಕರೆತಂದ ನಂತರ ಅವರು ಬಿಜೆಪಿಯ ಶಾಸಕರು ಹಾಗೂ ನಾಯಕರ ನೇರ ಸಂಪರ್ಕಕ್ಕೆ ಬರುವ ಸಾಧ್ಯತೆ ದಟ್ಟವಾಗಿತ್ತು. ಹೈದರಾಬಾದ್ ಹಾಗೂ ರೆಸಾರ್ಟ್ ಗಳಲ್ಲಿ ಶಾಸಕರ ಮೇಲೆ ಕಣ್ಗಾವಲಿಡಲು ಕಾರ್ಯಕರ್ತರನ್ನು ಬಳಸಬಹುದಾಗಿತ್ತು. ಆದರೆ, ವಿಧಾನಸಭೆ ಹಾಗೂ ಮೊಗಸಾಲೆಗೆ ಕಾರ್ಯಕರ್ತರು ಬರಲು ಅವಕಾಶವಿರಲಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರು ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರನ್ನು ಈ ಕಾರ್ಯಕ್ಕೆ ಬಳಸಿದರು. ಎಲ್ಲಾ ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ನಿರ್ದಿಷ್ಟವಾಗಿ ಇಂತಿಂತಹ ಶಾಸಕರ ಮೇಲೆ ಕಣ್ಗಾವಲಿಡಬೇಕು ಎಂದು ನಿರ್ದೇಶನ ನೀಡಲಾಗಿತ್ತು. 
ಈ ನಾಯಕರು ಶಾಸಕರ ಮೇಲೆ ಕಣ್ಣಿಟ್ಟು ಅತ್ಯಂತ ಕ್ರಿಯಾಶೀಲವಾಗಿ ಓಡಾಡಿದರು. ಬಿಜೆಪಿ ನಾಯಕರೊಂದಿಗೆ ಅವರು ಮಾತನಾಡದಂತೆ, ಯಾರ ಆಮಿಷಕ್ಕೂ ಬಲಿಯಾಗದಂತೆ ನೋಡಿಕೊಂಡರು. 
ನಮ್ಮ ಒಬ್ಬ ಸದಸ್ಯರೇನಾದರೂ ಬಿಜೆಪಿ ಜೊತೆಗೆ ಕೈಜೋಡಿಸಿದ್ದರೆ ಸರ್ಕಾರ ರಚನೆಗೆ ಬಹಳ ಕಷ್ಟವಾಗುತ್ತಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 
ಹೈದರಾಬಾದ್'ಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಮ್ಮ ಶಾಸಕ ರಾಜಶೇಖರ್ ಪಾಟೀಲ್ ಅವರು ಇಬ್ಬರು ಅನಾಮಧೇಯ ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದುದ್ದನ್ನು ನಾನು ನೋಡಿದ್ದೆವು. ಮಾತುಕತೆ ನಡೆಸುತ್ತಿದ್ದ ವ್ಯಕ್ತಿಗಳು ನಮ್ಮ ಶಾಸಕನ ಕಾರಿಗೆ ಹಣವನ್ನಿಟ್ಟು, ಅವರನ್ನು ಕರೆದುಕೊಂಡು ಹೋಗಲು ಸಿದ್ಧರಾಗುತ್ತಿದ್ದರು. ಆದರೆ, ಈ ವೇಳೆ ನಮ್ಮ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಶಾಸಕನನ್ನು ಹಿಂದಕ್ಕೆ ಕರೆತಂದಿದ್ದರು. ಹಲವು ಶಾಸಕರು ಬಸ್ ಹತ್ತಿ ಕುಳಿತಿದ್ದರೆ, ರಾಜಶೇಕರ್ ಮಾತ್ರ ಬಸ್ ನಿಂದ ಕೆಳಗೆ ಇಳಿದಿದ್ದರು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement