ಕಾಂಗ್ರೆಸ್-ಜೆಡಿಎಸ್ ಮೈತ್ರಿ: ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಮೌನದಿಂದಲೇ ಕಾದು ನೋಡುತ್ತಿದೆ ಬಿಜೆಪಿ
ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಸಲುವಾಗಿ ಸಾಕಷ್ಟು ಹೋರಾಟ ನಡೆಸಿ ವಿಫಲಗೊಂಡ ಬಿಜೆಪಿ ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಸರ್ಕಾರ ರಚಿಸಲು ಮಾಡುತ್ತಿರುವ ಕಸರತ್ತುಗಳನ್ನು ದೂರದಿಂದಲೇ ಮೌನದಿಂದ ಕಾದು ನೋಡುತ್ತಿದೆ...
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಸಲುವಾಗಿ ಸಾಕಷ್ಟು ಹೋರಾಟ ನಡೆಸಿ ವಿಫಲಗೊಂಡ ಬಿಜೆಪಿ ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಸರ್ಕಾರ ರಚಿಸಲು ಮಾಡುತ್ತಿರುವ ಕಸರತ್ತುಗಳನ್ನು ದೂರದಿಂದಲೇ ಮೌನದಿಂದ ಕಾದು ನೋಡುತ್ತಿದೆ.
ಸಚಿವ ಸಂಪುಟ ರಚನೆ ಕುರಿತು ಮೈತ್ರಿಪಕ್ಷಗಳಲ್ಲಿ ಭಾರೀ ಬಿಕ್ಕಟ್ಟು ಎದುರಾಗಲಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಬಿಜೆಪಿ ಕಾದುನೋಡುತ್ತಿದೆ. ವೈಯಕ್ತಿಕ ಪೈಪೋಟಿ, ಅಹಂ ನಡುವಿನ ಘರ್ಷಣೆ, ಸಮ್ಮಿಶ್ರ ಸರ್ಕಾರದಲ್ಲಿ ಎದುರಾಗುವ ಭಿನ್ನತೆಗಳು ಸರ್ಕಾರ ಬೀಳಸಿದಲಿದ್ದು, ಪ್ರಸ್ತುತ ಅಧಿಕಾರಕ್ಕೆ ಬರುತ್ತಿರುವ ಸಮ್ಮಿಶ್ರ ಸರ್ಕಾರ 3 ತಿಂಗಳೂ ಕೂಡ ಇರುವುದಿಲ್ಲ ಎಂದು ಬಿಜೆಪಿ ಮಾಜಿ ಸಚಿವರೊಬ್ಬರು ಹೇಳಿದ್ದಾರೆ.
ಜಯನಗರ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ಕ್ಷೇತ್ರಗಳತ್ತ ಗಮನಹರಿಸುವಂತೆ ಪಕ್ಷ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.