ರಾಜಕೀಯ

ಆಪರೇಷನ್ ಗೆ ಒಂದಾಣೆ ಖರ್ಚು ಮಾಡಿಲ್ಲ ಅಂತ ಎದೆಮುಟ್ಟಿ ಹೇಳಿ-ಬಿಎಸ್​ವೈ ಸರ್ಕಾರಕ್ಕೆ 10 ಪ್ರಶ್ನೆ ಕೇಳಿದ ಕುಮಾರಸ್ವಾಮಿ

Raghavendra Adiga

ಬೆಂಗಳೂರು:  ಕಾಂಗ್ರೆಸ್ ಜೆಡಿಎಸ್,ಪಕ್ಷೇತರರನ್ನು ಖರೀದಿಸಿಲ್ಲ.ಶಾಸಕರ ಖರೀದಿಗೆ ಒಂದೂ ರೂಪಾಯಿ ಖರ್ಚು ಮಾಡಿಲ್ಲ ಎಂದು ಜನರ ಮುಂದೆ ಪ್ರಮಾಣ ಮಾಡಿ ಎಂದು ಹಾಲಿ ಮುಖ್ಯಮಂತ್ರಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಉಪ ಚುನಾವಣೆ ಹಿನ್ನಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವಅವರು ಬಿಜೆಪಿ ಸರ್ಕಾರಕ್ಕೆ 10 ಪ್ರಶ್ನೆಗಳನ್ನು ಕೇಳಿದ್ದಾರೆ.ಅಲ್ಲದೆ ಜನತೆ ಈ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿ ಸರ್ಕಾರದಿಂದ ಉತ್ತರ ಬಯಸಿ ದ್ದೇನೆ.ಉಪ ಚುನಾವಣೆಯಲ್ಲಿ ಮತ ನೀಡುವ ಮುನ್ನ ಮತದಾರರ ಇದನ್ನು ಗಮನದಲ್ಲಿಟ್ಟು ಕೊಂಡು ಮತ ಚಲಾಯಿಸಲಿದೆ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

"ನನ್ನ ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚನೆಯಾದ ಕೂಡಲೇ ಅತೃಪ್ತಗೊಂಡಿದ್ದ ಬಿಜೆಪಿ, ಅಧಿಕಾರದ ಹುಚ್ಚು ಹಿಡಿಸಿಕೊಂಡು ಕೂಗುಮಾರಿಯಂತಾಗಿತ್ತು. ನಾನು ಮಾಡದ ತಪ್ಪುಗಳಿಗೆ ನನ್ನನ್ನು ಬಿಗಿಯುತ್ತಾ, ಆಡಳಿತ ಮಾಡಲು ಬಿಡದ ಬಿಜೆಪಿ ಅನರ್ಹರ ಅಕ್ರಮ ಸಂಬಂಧದೊಂದಿಗೆ ಅನೈತಿಕ ಸರ್ಕಾರ ರಚಿಸಿ ಈಗ ರಾಜ್ಯವನ್ನು ಅನಾಹುತದ ಹಾದಿಯಲ್ಲಿ ಕರೆದೊಯ್ಯುತ್ತಿದೆ." ಎಂದಿರುವ ಕುಮಾರಸ್ವಾಮಿ ತಾವು ಜತ್ತು ಪ್ರಶ್ನೆಗಳ ಪತ್ರಿಕಾ ಪ್ರಕಟಣೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಕುಮಾರಸ್ವಾಮಿಯವರು ಬಿಜೆಪಿ ಸರ್ಕಾರಕ್ಕೆ ಕೇಳಿರುವ ಹತ್ತು ಪ್ರಶ್ನೆಗಳ ವಿವರಣೆ ಹೀಗಿದೆ-

SCROLL FOR NEXT