ರಾಜಕೀಯ

ಆರು ಬಾರಿ ಕ್ಷಮಾಪಣೆ ಪತ್ರ ಕೊಟ್ಟು ಬ್ರಿಟಿಷರ ತಟ್ಟೆ ಕಾಸಿನಲ್ಲಿ ಜೀವನ ಮಾಡಿದವರು ಸಾವರ್ಕರ್: ಬಿ.ಕೆ ಹರಿಪ್ರಸಾದ್

Shilpa D

ಬೆಳಗಾವಿ:  ನಾವು ನಾಗಪುರ ಯುನಿವರ್ಸಿಟಿಯವರಲ್ಲ, ನಾವು ಜನಸಾಮಾನ್ಯರ ವಿಶ್ವ ವಿದ್ಯಾನಿಲಯದವರು, ನಮ್ಮಲ್ಲಿ ದ್ವಂದ್ವ ಇಲ್ಲ, ಸಾವರ್ಕರ್ ವಿಚಾರವಾಗಿ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಬೇರೆ ಬೇರೆ ರೀತಿಯಲ್ಲಿ ವಿರೋಧ ಮಾಡುತ್ತಾರೆ. ನಮ್ಮಲ್ಲಿ ಮತ ಭೇಧ ಇರುತ್ತೆ, ಇರಬೇಕು ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಸುವರ್ಣ ಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ಸಾವರ್ಕರ್ ಕೊಲೆ ಮಾಡಿ ಜೈಲಿಗೆ ಹೋದವರೇ ವಿನಹಃ, ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿಲ್ಲ. ಆರು ಬಾರಿ ಕ್ಷಮಾಪಣೆ ಪತ್ರ ಕೊಟ್ಟು ಬ್ರಿಟಿಷರ ತಟ್ಟೆ ಕಾಸಿನಲ್ಲಿ ಜೀವನ ಮಾಡಿದವರು.‌ ಅವರ ಫೋಟೋ ಹಾಕಿರುವುದು ಕರ್ನಾಟಕದ ಜನರಿಗೆ ಅವಮಾನ.‌

ಗಡಿ ವಿವಾದ ಇರುವಾಗ ಆ ಪ್ರದೇಶದ ಹಾಗೂ ಸ್ವಾತಂತ್ರ್ಯ ಹೋರಾಟದ ವಿರುದ್ಧ ಇದ್ದ ವ್ಯಕ್ತಿಯ ಫೋಟೋ ಹಾಕಿರುವುದು ನೋಡಿದಾಗ ನಗಬೇಕೋ‌ ಅಳಬೇಕೋ ಗೊತ್ತಾಗುತ್ತಿಲ್ಲ.‌ ಬಿಜೆಪಿಗೆ ಪ್ರಜಾಪ್ರಭುತ್ವ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಇಡಿ ಅಂದ್ರೆ ಬಿಜೆಪಿ ಎಲೆಕ್ಷನ್ ಡಿಪಾರ್ಟ್ಮೆಂಟ್, ಐಟಿ ಅಂದ್ರೆ ಇಂಟಲಿಜೆನ್ಸ್ ಡಿಪಾರ್ಟ್ಮೆಂಟ್ ಹಾಗೂ ಸಿಬಿಐ ಬಿಜೆಪಿ ಮುಂಚೂಣಿ ಘಟಕವಾಗಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.

SCROLL FOR NEXT