ಜಗದೀಶ್ ಶೆಟ್ಟರ್ 
ರಾಜಕೀಯ

ಕಾಂಗ್ರೆಸ್ ಪಕ್ಷದ ಒಳಜಗಳವೇ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ: ಜಗದೀಶ್ ಶೆಟ್ಟರ್

ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳಗಳಿವೆ, ಸಿದ್ದರಾಮಯ್ಯನವರದ್ದು ಒಂದು ಬಣ ಡಿಕೆ ಶಿವಕುಮಾರ್ ಅವರದ್ದೊಂದು ಬಣ ಅಂತ ಬಹಳ ಮೊದಲೇ ಹೇಳಿದ್ದೆ, ಈಗ ಅದು ಬಯಲಿಗೆ ಬರುತ್ತಿದೆ.

ಬೆಳಗಾವಿ: ರಾಜ್ಯ ಕಾಂಗ್ರೆಸ್‌ನಲ್ಲಿ ವಿವಿಧ ಗುಂಪುಗಳ ನಾಯಕರ ನಡುವೆ ನಡೆಯುತ್ತಿರುವ ಆಂತರಿಕ ಘರ್ಷಣೆಗಳು ಮತ್ತು ಭೋಜನ ಕೂಟಗಳಿಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹಾಗೂ ಹಾಲಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಪಕ್ಷದ ಒಳಜಗಳವೇ ಸರ್ಕಾರ ಪತನಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಶನಿವಾರ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶೆಟ್ಟರ್, 'ಮುಖ್ಯಮಂತ್ರಿ ಹುದ್ದೆಗಾಗಿ ರಾಜ್ಯದ ಕಾಂಗ್ರೆಸ್ ನಾಯಕರ ನಡುವಿನ ಹೋರಾಟ ತೀವ್ರಗೊಂಡಿದೆ. ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಾಗಿ ಘರ್ಷಣೆ ಖಂಡಿತವಾಗಿಯೂ ಉಲ್ಬಣಗೊಂಡು ಸರ್ಕಾರದ ಪತನಕ್ಕೆ ಕಾರಣವಾಗುತ್ತದೆ ಎಂದು ಶೆಟ್ಟರ್ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳಗಳಿವೆ, ಸಿದ್ದರಾಮಯ್ಯನವರದ್ದು ಒಂದು ಬಣ ಡಿಕೆ ಶಿವಕುಮಾರ್ ಅವರದ್ದೊಂದು ಬಣ ಅಂತ ಬಹಳ ಮೊದಲೇ ಹೇಳಿದ್ದೆ, ಈಗ ಅದು ಬಯಲಿಗೆ ಬರುತ್ತಿದೆ, ಇದು ಬೀದಿ ರಂಪಾಟಕ್ಕೆ ಹೋದರೂ ಅಚ್ಚರಿಯಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.

'ತನ್ನ ವಿರುದ್ಧ ಏನೋ ಷಡ್ಯಂತ್ರ ನಡೆಯುತ್ತಿದೆ ಅಂತ ಶಿವಕುಮಾರ್​ಗೆ ಮನವರಿಕೆಯಾಗಿದೆ, ಹಾಗಾಗೇ ಅವರು ಜಿ ಪರಮೇಶ್ವರ್ ಕರೆದಿದ್ದ ಡಿನ್ನರ್ ಮೀಟಿಂಗ್ ಗೆ ಬ್ರೇಕ್ ಹಾಕಿದ್ದಾರೆ ಮತ್ತು ತಾವು ಶತ್ರು ಸಂಹಾರ ಯಾಗ ಮಾಡುತ್ತ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರದ ಅಂತ್ಯ ಹತ್ತಿರವಾಗಿದೆ ಎಂದು ಶೆಟ್ಟರ್ ಹೇಳಿದರು.

"ಊಟಕ್ಕೆ ಕರೆ ಕೊಟ್ಟವರು ಸ್ಪಷ್ಟೀಕರಣ ನೀಡಿದ್ದಾರೆ. ನಮ್ಮಲ್ಲಿ ಸಮಸ್ಯೆ ಇದೆ. ಆದರೆ, ಅದನ್ನು ಸರಿ ಮಾಡುವ ಕೆಲಸ ಹೈಕಮಾಂಡ್‌ನವರು ಮಾಡ್ತಾರೆ. ಎಸ್‌ಸಿ, ಎಸ್‌ಟಿ ಸಮಸ್ಯೆಗಳ ಕುರಿತು ಚರ್ಚಿಸಲು ಔತಣಕೂಟ ಸೇರಿದ್ದೇವೆ ಅಂತ ರಾಜಣ್ಣ ಹೇಳುತ್ತಾರೆ. ಈ ರೀತಿಯ ಸಮಸ್ಯೆಗಳನ್ನು ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡಬೇಕು. ಇದನ್ನು ಚರ್ಚೆ ಮಾಡೋಕೆ ಮಂತ್ರಿಗಳು ಸೇರಿದ್ರೆ ಜನ ನಂಬುತ್ತಾರಾ?. ಎಸ್‌ಸಿ, ಎಸ್‌ಟಿ ಜನರ ಮೇಲೆ ಅವರಿಗೆ ಕಾಳಜಿಯೇ ಇಲ್ಲ. ರಾಜಣ್ಣ ಹೇಳಿಕೆ ನೋಡಿದ್ರೆ ರಾಜಕೀಯ ಸಲುವಾಗಿ ಮಾಡ್ತಿದ್ದಾರೆ. ಎಸ್‌ಸಿ, ಎಸ್‌ಟಿ ಕಲ್ಯಾಣಕ್ಕಾಗಿ ಅಲ್ಲ ಎಂದು ತಿಳಿಯುತ್ತದೆ. ಎಸ್‌ಸಿ, ಎಸ್‌ಟಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ಡಿನ್ನರ್ ಮೀಟಿಂಗ್ ಮಾಡುವ ಅವಶ್ಯಕತೆಯೇ ಇರಲಿಲ್ಲ" ಎಂದು ಹೇಳಿದರು.

ಪರಮೇಶ್ವರ್​ ಡಿನ್ನರ್ ಮೀಟಿಂಗ್ ರದ್ದಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, "ಇದರ ಹಿಂದೆ ರಾಜಕೀಯ ಇದೆ. ಡಿ. ಕೆ. ಶಿವಕುಮಾರ್‌ಗೆ ತಮ್ಮ ವಿರುದ್ಧ ಷಡ್ಯಂತ್ರ ನಡೀತಾ ಇದೆ ಅಂತ ಅನಿಸಿದೆ. ಹೀಗಾಗಿ ಶತ್ರು ಸಂಹಾರದ ಪೂಜೆ ಪುನಸ್ಕಾರ ಆರಂಭಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಬಯಲಲ್ಲೇ ಗುದ್ದಾಟ ನಡೆಯುತ್ತದೆ" ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

ಕಾರುಗಳ ಬೆಲೆಯಲ್ಲಿ ಆಗಲಿದೆ ಭಾರಿ ಇಳಿಕೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!

IADWS: ಭಾರತೀಯ ಸೇನೆ ಬತ್ತಳಿಕೆಗೆ 'ಲೇಸರ್ ನಿರ್ದೇಶಿತ ಹೊಸ ಅಸ್ತ್ರ': ದಂಗಾದ ಚೀನಾ, ಹೇಳಿದ್ದು ಏನು?

ಗೌರಿ-ಗಣೇಶ ಹಬ್ಬ: ಪರಿಸರ ಕಾಳಜಿ ಮರೆಯದಿರೋಣ, ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ! Video

SCROLL FOR NEXT