ಸಿದ್ದರಾಮಯ್ಯ ಮತ್ತು ಪ್ರಹ್ಲಾದ್ ಜೋಶಿ 
ರಾಜಕೀಯ

ಮೋದಿ ವಿರೋಧಿಸುವ ಭರದಲ್ಲಿ ವಿಜ್ಞಾನಿಗಳಿಗೆ ಅಪಮಾನ: ಕ್ಷಮೆಯಾಚಿಸುವಂತೆ ಸಿಎಂ ಸಿದ್ದರಾಮಯ್ಯಗೆ ಪ್ರಹ್ಲಾದ್ ಜೋಶಿ ಆಗ್ರಹ

ದೇಶದಲ್ಲಿ ಕಾಂಗ್ರೆಸ್‌ ಪಕ್ಷ 60 ವರ್ಷ ಆಡಳಿತ ನಡೆಸಿದರೂ ಒಂದೇ ಒಂದು ಸ್ವದೇಶಿ ವ್ಯಾಕ್ಸಿನ್‌ ಸಿದ್ಧಪಡಿಸಲಿಲ್ಲ. ಇವರ ಕಾಲದಲ್ಲಿ ಎಲ್ಲವೂ ಆಮದಾಗುತ್ತಿತ್ತು.

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ದೇಶದ ಸಾಧನೆ ಹಾಗೂ ಸಂಶೋಧಕರು-ವಿಜ್ಞಾನಿಗಳ ಸಮೂಹವನ್ನೇ ಕಾಂಗ್ರೆಸ್ ಅವಮಾನಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಶುಕ್ರವಾರ ಆಗ್ರಹಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಹಾಗೂ ಆ ಪಕ್ಷದ ನಾಯಕರು ಯಾವುದೇ ಆಧಾರವಿಲ್ಲದೆ ಕೋವಿಡ್‌ ಲಸಿಕೆಯನ್ನು ಅನುಮಾನಿಸುತ್ತಿದ್ದಾರೆ. ಕೋಟ್ಯಾಂತರ ಜನರ ಜೀವ ಉಳಿಸಿದ ವಿಜ್ಞಾನಿಗಳ ಸಮುದಾಯಕ್ಕೆ ಅಪಮಾನ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಕಾಂಗ್ರೆಸ್‌ ಪಕ್ಷ 60 ವರ್ಷ ಆಡಳಿತ ನಡೆಸಿದರೂ ಒಂದೇ ಒಂದು ಸ್ವದೇಶಿ ವ್ಯಾಕ್ಸಿನ್‌ ಸಿದ್ಧಪಡಿಸಲಿಲ್ಲ. ಇವರ ಕಾಲದಲ್ಲಿ ಎಲ್ಲವೂ ಆಮದಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

ಕೋವಿಡ್‌ ವೇಳೆ ಕೇಂದ್ರ ಸರ್ಕಾರ ಸ್ವದೇಶಿ ವ್ಯಾಕ್ಸಿನ್‌ ಸಿದ್ಧಪಡಿಸಿ ದೇಶದ ಜನರಿಗೆ 240 ಕೋಟಿ ಡೋಸ್‌ ನೀಡಿದೆ. 110 ರಿಂದ 120 ಕೋಟಿ ಜನರು ವ್ಯಾಕ್ಸಿನ್‌ ಪಡೆದಿದ್ದಾರೆ. ಅಲ್ಲದೇ, 150 ದೇಶಗಳಿಗೆ ಭಾರತ ವ್ಯಾಕ್ಸಿನ್‌ ಪೂರೈಸಿದೆ. ಭಾರತದ ಈ ಸಾಧನೆಯನ್ನು ಮುಕ್ತವಾಗಿ ಪ್ರಶಂಶಿಸಬೇಕು. ಆದರೆ, ಕಾಂಗ್ರೆಸ್‌ ಮಾಡುತ್ತಿರುವುದೇನು. ಇದು ದೇಶದ ಬಗ್ಗೆ ಕಾಂಗ್ರೆಸ್‌ಗಿರುವ ಮನಸ್ಥಿತಿಯನ್ನು ತೋರ್ಪಡಿಸುತ್ತಿದೆ ಎಂದು ಟೀಕಿಸಿದರು.

ಆರ್‌ಡಿಪಿಆರ್ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆರ್‌ಎಸ್‌ಎಸ್ ನಿಷೇಧ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, ಖರ್ಗೆ ಅವರ ನಾಯಕ ರಾಹುಲ್ ಗಾಂಧಿ ಕುಟುಂಬ ಆರ್‌ಎಸ್‌ಎಸ್ ಅನ್ನು ನಿಷೇಧಿಸಲು ಪ್ರಯತ್ನಿಸಿತು, ಆದರೆ, ಅದು ವಿಫಲವಾಯಿತು. ಆರ್‌ಎಸ್‌ಎಸ್ ಇನ್ನೂ ದೊಡ್ಡದಾಗಿ ಬೆಳೆಯುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

ಕೇಂದ್ರದಿಂದ ಅಸಹಕಾರ, ಮಲತಾಯಿ ಧೋರಣೆ, ಆದರೂ ವಿತ್ತೀಯ ಶಿಸ್ತು ಪಾಲನೆ: CM ಸಿದ್ದರಾಮಯ್ಯ

UPSC ಪರೀಕ್ಷೆ ಫಲಿತಾಂಶ ಪ್ರಕಟ: ಕಿರಣ್ ಕಾಮತೆ ರಾಜ್ಯಕ್ಕೆ ಟಾಪರ್; ಕರ್ನಾಟಕದ 22 ಅಭ್ಯರ್ಥಿಗಳು ಪಾಸ್

ಯುದ್ಧ ಕೊನೆಗೊಳಿಸಲು ಕೆಲವು ರಾಷ್ಟ್ರಗಳು 'ಮಧ್ಯಸ್ಥಿಕೆ' ಬಯಸುತ್ತಿವೆ: ಭೀಕರ ದಾಳಿಗಳ ನಡುವೆ ಇರಾನ್ ಅಧ್ಯಕ್ಷರ ಸ್ಫೋಟಕ ಹೇಳಿಕೆ!

ಸುಖೋಯ್ ವಿಮಾನ ದುರಂತ: Op Sindoor ನಲ್ಲಿ ಪಾಕ್ ಗೆ ನಡುಕ ಹುಟ್ಟಿಸಿದ್ದ ಹುತಾತ್ಮ ಪೈಲಟ್ Purvesh Duragkar

SCROLL FOR NEXT