ಬಾಗಲಕೋಟೆ: ಉಪ ಚುನಾವಣೆಯಲ್ಲಿ ಬಿಜೆಪಿ ಪರ ಮತ ಹಾಕದಿದ್ದರೆ ಮುಂದೆ ಪರೀಕ್ಷೆಗಳಲ್ಲಿ ನಿಮಗೆ ತೊಂದರೆ ಮಾಡ್ತೇವೆ ಎಂದು ಬಿಜೆಪಿಗರೇ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ತಮ್ಮ ರಾಜ್ಯ ಮತ್ತು ಬಾಗಲಕೋಟೆಯಲ್ಲೂ ಮತದಾರರ ಪಟ್ಟಿಯಲ್ಲಿದ್ದಾರೆ. ಮತದಾನ ಪವಿತ್ರ ಹಕ್ಕು. ಅದಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರಬೇಕು. ಆದರೆ, ಒಬ್ಬನೇ ವ್ಯಕ್ತಿ ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಇರಬಾರದು.
ಆದರೆ, ಬಾಗಲಕೋಟೆ ನಗರದ ವಿದ್ಯಾರ್ಥಿಗಳು ಎರಡೆರಡು ಊರುಗಳಲ್ಲಿ ಓಟರ್ ಕಾರ್ಡ್ ಹೊಂದಿದ್ದಾರೆ. ಈ ಕುರಿತು ನಾವು ಚುನಾವಣೆ ಆಯೋಗಕ್ಕೆ, ಜಿಲ್ಲಾಧಿಕಾರಿಗೆ ದೂರು ಕೊಡುತ್ತೇವೆ. ಇದನ್ನು ಪರಿಶೀಲನೆ ಮಾಡಲು ನಮ್ಮ ಪ್ರತ್ಯೇಕ ತಂಡ ರಚಿಸಲಾಗಿದೆ. ನಿಮ್ಮ ಊರಲ್ಲಿನ ನಿಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದು ಪರೋಕ್ಷವಾಗಿ, ಬಿಜೆಪಿ ಅಭ್ಯರ್ಥಿ ಚರಂತಿಮಠ ಕಾರ್ಯಾಧ್ಯಕ್ಷರಾಗಿರುವ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜುಗಳ ವಿದ್ಯಾರ್ಥಿಗಳ ಕುರಿತು ಪ್ರಸ್ತಾಪಿಸಿದರು.
ಉಪ ಚುನಾವಣೆಲ್ಲಿ ಬಿಜೆಪಿಗೆ ಮತ ಹಾಕದಿದ್ದರೆ ಪರೀಕ್ಷೆಯಲ್ಲಿ ಫೇಲ್ ಮಾಡುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಹೆದರಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಹಾಗಂತ ವಿದ್ಯಾರ್ಥಿಗಳು ಎರಡೆರಡು ಕಡೆ ಮತದಾನ ಮಾಡಬಾರದು. ನಿಮ್ಮ ಊರಲ್ಲಿನ ನಿಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದು ಪರೋಕ್ಷವಾಗಿ, ಬಿಜೆಪಿ ಅಭ್ಯರ್ಥಿ ಚರಂತಿಮಠ ಕಾರ್ಯಾಧ್ಯಕ್ಷರಾಗಿರುವ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜುಗಳ ವಿದ್ಯಾರ್ಥಿಗಳ ಕುರಿತು ಪ್ರಸ್ತಾಪಿಸಿದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪಿವೆಯೇ ಎಂದು ಕೇಳುತ್ತಿದ್ದಾರೆ. ಇದನ್ನೇ ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಬಾಗಲಕೋಟೆ, ದಾವಣಗೆರೆ ನಗರಗಳಲ್ಲಿ ಜನ ದೊಡ್ಡ ಬದಲಾವಣೆ ಬಯಸಿದ್ದಾರೆ.
ಬೆಲೆ ಏರಿಕೆ ಕಷ್ಟ ಕಾಲದಲ್ಲಿ ಗ್ಯಾರಂಟಿ ಆಸರೆಯಾಗಿವೆ. ಕರ್ನಾಟಕ ಅಷ್ಟೇ ಅಲ್ಲ, ದೇಶಾದ್ಯಂತ ಇಂದಿನಿಂದ ಎಲ್ಲ ಬೆಲೆ ಏರಿಕೆಯಾಗಿವೆ. ಇದು ಜನರಿಗೆ ಹೊರೆಯಾಗಿದೆ. ಅಚ್ಛೇ ದಿನ್ ಕೂಡ ಹೋಗಿದೆ. ಈಗ ಸೌಧೆ ಭಾಗ್ಯ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಈ ಬೆಲೆ ಏರಿಕೆ ನೀತಿ ವಿರುದ್ಧ ಜನ ಬದಲಾವಣೆ ಬಯಸಿದ್ದು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದರು.
ಬಾಗಲಕೋಟೆ ನಗರದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಎರೆಡೆರಡು ಕಡೆ ಮತದಾರರ ಚೀಟಿ ಇವೆ. ಇಲ್ಲೂ ಓಟ್ ಇದೆ, ಅವರ ಊರಲ್ಲೂ ಓಟ್ ಇದೆ. ಈ ಬಗ್ಗೆ ಡಿಸಿ ಅವರಿಗೆ ದೂರು ಕೊಡಲು ಹೇಳಿದ್ದೇವೆ. ವಿದ್ಯಾರ್ಥಿಗಳು ಡಬಲ್ ಒಟ್ ಇದ್ದರೆ ಅದನ್ನು ಸರಿ ಮಾಡಿಕೊಳ್ಳಿ. ನಿಮ್ಮ ಊರಲ್ಲಿ ನಿಮ್ಮ ಓಟ್ ಉಳಿಸಿಕೊಳ್ಳಿ. ಇಂತಹ ಡಬಲ್ ಓಟ್ ತಡೆಯೋದಕ್ಕೆ ಪ್ರತ್ಯೇಕ ತಂಡವನ್ನು ರಚನೆ ಮಾಡಿದ್ದೇನೆ.
ಹೆಚ್.ವೈ ಮೇಟಿ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ. ಈ ಭಾಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡಲಾಗಿದೆ. ಪ್ರಣಾಳಿಕೆಯಲ್ಲಿ ಭರವಸೆ ನೀಡದಿದ್ದರೂ ನಮ್ಮ ಸರ್ಕಾರ ಯುಕೆಪಿ 3ನೇ ಹಂತದ ಯೋಜನೆಯಲ್ಲಿ ಭೂ ಸಂತ್ರಸ್ತರಾಗಿರುವ ಗ್ರಾಮೀಣ ಭಾಗದ ರೈತರಿಗೆ ಪರಿಹಾರ ವಿತರಣೆ ಮಾಡಿದ್ದೇವೆ. ಬೊಮ್ಮಾಯಿ ಅವರ ಸರ್ಕಾರ ಇದನ್ನು ನೀಡಲು ವಿಫಲವಾಗಿದ್ದರೂ ನಾವು ನೀಡಿದ್ದೇವೆ. ಆಲಮಟ್ಟಿ ಅಣೆಕಟ್ಟು ಎತ್ತರ ವಿಚಾರವಾಗಿ ಸದನದಲ್ಲಿ ನಿರ್ಣಯ ಮಂಡಿಸಿದ್ದು, ಈ ಯೋಜನೆ ಜಾರಿಗೆ ನಮ್ಮ ಬದ್ಧತೆ ತೋರಿದ್ದೇವೆ” ಎಂದು ತಿಳಿಸಿದರು.
ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳು ತಲುಪುತ್ತಿದೆಯೇ ಇಲ್ಲವೇ ಎಂದು ಮನೆ ಮನೆಗೆ ಹೋಗಿ ಪರೀಕ್ಷೆ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ಇದನ್ನು ಟೀಕೆ ಮಾಡುತ್ತಿದ್ದಾರೆ. ಆದರೆ ಈ ಯೋಜನೆ ಫಲಾನುಭವಿಗಳು ನಾವು ಈ ಹಿಂದೆ ಬಿಜೆಪಿಗೆ ಮತ ಹಾಕಿದ್ದಾಗ ನಮಗೆ ಯಾವುದೇ ನೆರವಾಗಿರಲಿಲ್ಲ. ಆದರೆ ಮುಂದೆ ನಿಮ್ಮ ಋಣ ತೀರಿಸುತ್ತೇವೆ ಎಂದು ಉಪಕಾರ ಸ್ಮರಣೆ ಮಾಡುತ್ತಿದ್ದಾರೆ. ಇದು ನಮಗೆ ಸಂತೋಷದ ವಿಚಾರ. ದಾವಣಗೆರೆಯಾಗಲಿ, ಬಾಗಲಕೋಟೆಯಾಗಲಿ ನಗರ ಪ್ರದೇಶಗಳಲ್ಲಿ ಜನ ನಮಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ನಮ್ಮ ಕಾರ್ಯಕರ್ತರಿಗೆ ಅಭಿನಂದಿಸುತ್ತೇನೆ” ಎಂದರು.