ಕೇಂದ್ರ ಸಚಿವ ವಿ. ಸೋಮಣ್ಣ 
ರಾಜಕೀಯ

ಸಿಎಂ ಸಿದ್ದರಾಮಯ್ಯ ಸುಳ್ಳಿನ ರಾಜ : ಕೇಂದ್ರ ಸಚಿವ ಸೋಮಣ್ಣ ವಾಗ್ದಾಳಿ

ಸಿದ್ದರಾಮಯ್ಯನವರು ತಮ್ಮ ಆಡಳಿತದಲ್ಲಿ ಆಗಿರುವ ಒಂದೇ ಒಂದು ಅಪಚಾರದ ಬಗ್ಗೆಯೂ ಮಾತನಾಡುತ್ತಿಲ್ಲ. ಕಾಂಗ್ರೆಸ್ ಪಕ್ಷವು ಮುಂದೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂಬಂತೆ ವರ್ತಿಸುತ್ತಿದೆ.

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಕೇವಲ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ, ಅವರು ಸುಳ್ಳಿನ ರಾಜ,” ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ತಮ್ಮ ಆಡಳಿತದಲ್ಲಿ ಆಗಿರುವ ಒಂದೇ ಒಂದು ಅಪಚಾರದ ಬಗ್ಗೆಯೂ ಮಾತನಾಡುತ್ತಿಲ್ಲ. ಕಾಂಗ್ರೆಸ್ ಪಕ್ಷವು ಮುಂದೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಕಿಡಿಕಾರಿದರು.

ಬೆಂಗಳೂರು ಮೆಟ್ರೋ ವಿಚಾರವಾಗಿ ಮಾತನಾಡಿ, “ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಮೆಟ್ರೋ ಯೋಜನೆಗೆ ಅಡಿಪಾಯ ಹಾಕಲಾಗಿತ್ತು. ಇಂದು ಲಕ್ಷಾಂತರ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಜನಸಂದಣಿ ನಿಯಂತ್ರಿಸಲು ಕೇಂದ್ರ ಸರ್ಕಾರವು ಮೆಟ್ರೋ ಯೋಜನೆಗೆ ಭರಪೂರ ನೆರವು ನೀಡುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರವು ಕೇಂದ್ರದ ಯೋಜನೆಗಳ ಕ್ರೆಡಿಟ್ ಪಡೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಹಾದಿ ತಪ್ಪಿಸುವ ವರ್ತನೆಗಳಿಗೆ ಜನರೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಎಂದು ಗುಡುಗಿದರು.

ರೈಲ್ವೇ ಭೂಸ್ವಾಧೀನ ವಿಳಂಬ: ಕಾನೂನು ಕ್ರಮದ ಎಚ್ಚರಿಕೆ

ಇದೇ ವೇಳೆ ರೈಲ್ವೇ ಯೋಜನೆಗಳಿಗೆ ಅಗತ್ಯವಿರುವ ಭೂಸ್ವಾಧೀನದಲ್ಲಿ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಸೋಮಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿದರು.

ರೈಲ್ವೇ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಅವರು,ರೈಲ್ವೆ ಸೇರಿ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ. ಆದರೆ, ರಾಜ್ಯ ಸರ್ಕಾರ ನಿಗದಿತ ಭೂಮಿ ಸ್ವಾಧೀನ ಮಾಡಿ ಕೊಡುವಲ್ಲಿ ಹಿಂದೇಟು ಹಾಕುತ್ತಿದೆ. ಇದರಿಂದ ಯೋಜನೆಗಳು ಕುಂಟುತ್ತ ಸಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬೇಳಗಾವಿಯಿಂದ ಧಾರವಾಡ ಸಮೀಪದ ಮುಮ್ಮಿಗಟ್ಟಿ ವರೆಗೆ ಹಳಿ ಅಭಿವೃದ್ಧಿಗೆ ಕೇವಲ 55 ಎಕರೆ ಭೂಮಿ ಬೇಕಾಗಿದೆ. ಆದರೆ, ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿದರು. ಇದೇ ವೇಳೆ ಸಮಸ್ಯೆ ಶೀಘ್ರ ಪರಿಹಾರವಾಗದಿದ್ದರೆ ಕಾನೂನಿನ ಪ್ರಕಾರ ಮುಂದುವರಿಯಬೇಕಾಗುತ್ತದೆ ಎಂದೂ ಎಚ್ಚರಿಸಿದರು.

ಬೇಳಗಾವಿಯ ನಾಲ್ಕನೇ ರೈಲ್ವೇ ಗೇಟ್ ಬಳಿ ಅಂಡರ್‌ಪಾಸ್ ನಿರ್ಮಾಣದ ಪ್ರಸ್ತಾಪವಿದ್ದು, ದೇಸೂರು–ಬೇಳಗಾವಿ ನಡುವೆ ರೂ.32 ಕೋಟಿ ಮೊತ್ತದ ರೈಲ್ವೇ ಅಭಿವೃದ್ಧಿ ಕಾಮಗಾರಿಗಳಿಗೆ ಆಕ್ಷೇಪಣೆಗಳು ಬಂದಿವೆ ಎಂದು ಹೇಳಿದರು.

ಸಾಂಬ್ರಾದಲ್ಲಿ ರೂ.40 ಕೋಟಿ ಮತ್ತು ಖಾನಾಪುರ–ದೇಸೂರು ನಡುವೆ ರೂ.17 ಕೋಟಿ ಮೊತ್ತದ ಯೋಜನೆಗಳು ಕೈಗೊಳ್ಳಲಾಗುತ್ತಿದ್ದು, ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು. ಏಳು ರೈಲ್ವೇ ಗೇಟ್‌ಗಳಲ್ಲಿ ಎರಡು ಉದ್ಘಾಟನೆಯಾಗಿದ್ದು, ಐದು ಕಾಮಗಾರಿ ಹಂತದಲ್ಲಿವೆ ಎಂದು ವಿವರಿಸಿದರು.

ರೈಲ್ವೇ ಪರೀಕ್ಷೆಗಳಲ್ಲಿ ಭಾಷಾ ವಿವಾದದ ಕುರಿತು ಸ್ಪಷ್ಟನೆ ನೀಡಿದ ಅವರು, ಇತ್ತೀಚಿನ ಪರೀಕ್ಷೆಯು ಉದ್ಯೋಗ ಬಡ್ತಿಗೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರವು ಈಗಾಗಲೇ ಅಭ್ಯರ್ಥಿಗಳಿಗೆ ತಮ್ಮ ರಾಜ್ಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಅನೇಕರು ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಮೂಲಕ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಆದಾಗ್ಯೂ, ರೈಲ್ವೇ ಬೋರ್ಡ್‌ನ ಆಡಳಿತಾತ್ಮಕ ಕಾರ್ಯವೈಖರಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಯುತ್ತಿರುವುದರಿಂದ ಅಧಿಕಾರಿಗಳು ಈ ಭಾಷೆಗಳನ್ನು ಕಲಿಯಬೇಕಿದೆ. ಇಲ್ಲದಿದ್ದರೆ ಬಡ್ತಿ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Parliament special session: ಕ್ಷೇತ್ರ ಪುನರ್ ವಿಂಗಡಣೆ-ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಕುರಿತು ಚರ್ಚೆಗೆ 15 ಗಂಟೆ ನಿಗದಿ; ನಾಳೆ ಸಂಜೆ 4 ಗಂಟೆಗೆ ಮತದಾನ..!

ನಾಳೆ ರಾಜ್ಯಸಭೆ ಉಪಸಭಾಪತಿ ಚುನಾವಣೆ, ವಿಪಕ್ಷಗಳ ಬಹಿಷ್ಕಾರ: ಮೂರು ಕಾರಣ ಕೊಟ್ಟ ಜೈರಾಮ್ ರಮೇಶ್!

ಕ್ಷೇತ್ರ ಪುನರ್ವಿಂಗಡಣೆ ಕುರಿತು ವದಂತಿಗಳ ಹರಡದಿರಿ: ವಿಪಕ್ಷಗಳಿಗೆ ಕಿರಣ್ ರಿಜಿಜು ಮನವಿ

ಇರಾನ್ ವಿರುದ್ಧ ಪ್ರತೀಕಾರ: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ; ಜಾಗತಿಕ ಮಾರುಕಟ್ಟೆಗೆ ಶಾಕ್, ಭಾರತದ ಮೇಲೂ ಪರಿಣಾಮ ಸಾಧ್ಯತೆ..!

ಹಾರ್ಮುಜ್ ಜಲಸಂಧಿ ದಿಗ್ಬಂಧನ: ಹಿಂದೆ ಸರಿಯದಿದ್ದರೆ ಗಲ್ಪ್ ವ್ಯಾಪಾರ ಸಂಪೂರ್ಣ ಅಸ್ತವ್ಯಸ್ತ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ..!

SCROLL FOR NEXT