ಎಚ್.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್ 
ರಾಜಕೀಯ

ಎಚ್.ಡಿ ಕುಮಾರಸ್ವಾಮಿಗೆ ಒಳ್ಳೆ ಲಾಟರಿ: ಅವರ ಸೇಲ್ ಡೀಡ್ ತೆಗೆದು ನೋಡಿ; ಡಿಕೆ ಶಿವಕುಮಾರ್

ಕುಮಾರಸ್ವಾಮಿ ಅವರು ಈಗ ನಾನೇ ಮಾಡಿದ್ದು 8 ಸಾವಿರ ಅಡಿ ಕೊಡುತ್ತೇನೆ ಎಂದು ಹೇಳಿದ್ದೆ ಎಂದು ದೆಹಲಿಯಲ್ಲಿ ಕುಳಿತು ಈಗ ಹೇಳುತ್ತಿದ್ದಾರೆ. ಅವರ ಕ್ಷೇತ್ರ ಆದ ಕಾರಣ ಡಿನೋಟಿಫೈ ಮಾಡಬೇಕಿತ್ತು.

ಬೆಂಗಳೂರು: ಬಿಡದಿ ಟೌನ್ ಶಿಪ್ ಯೋಜನೆಯಿಂದ ಕುಮಾರಸ್ವಾಮಿ ಅವರಿಗೆ ಒಳ್ಳೆ ಲಾಟರಿ ಬರಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಯೋಜನೆಗೆ ಸಂಪುಟ ಅನುಮೋದನೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ತುಂಗಭದ್ರಾ ಗೇಟ್ ವಿಚಾರವಾಗಿ ಟೀಕೆ ಮಾಡುತ್ತಿದ್ದರು ಈಗ ಏನಾಗಿದೆ. ನಾವು ಟೀಕೆ ಮೀರಿ ಕೆಲಸ ಮಾಡಿದ್ದೇವೆ.

ಕುಮಾರಸ್ವಾಮಿ ಅವರು ಈಗ ನಾನೇ ಮಾಡಿದ್ದು 8 ಸಾವಿರ ಅಡಿ ಕೊಡುತ್ತೇನೆ ಎಂದು ಹೇಳಿದ್ದೆ ಎಂದು ದೆಹಲಿಯಲ್ಲಿ ಕುಳಿತು ಈಗ ಹೇಳುತ್ತಿದ್ದಾರೆ. ಅವರ ಕ್ಷೇತ್ರ ಆದ ಕಾರಣ ಡಿನೋಟಿಫೈ ಮಾಡಬೇಕಿತ್ತು. ಅವರದ್ದೇ ಜಮೀನು ಇದೆಯಲ್ಲ. ಈಗ ಹಣ ಪಡೆಯಲಿ ನೋಡೋಣ. ದುಡ್ಡು ಬೇಡ ಎಂದು ಕೊಟ್ಟು ಬಿಡಲಿ. ಅವರು ಎಷ್ಟಕ್ಕೆ ತೆಗೆದುಕೊಂಡಿದ್ದರು.

ಈಗ ಎಷ್ಟಕ್ಕೆ ಹೋಗುತ್ತದೆ ಎಂದು ಗೊತ್ತಿಲ್ಲವೇ? ಅವರ ಸೇಲ್ ಡೀಡ್ ತೆಗೆದು ನೋಡಿ. ಈಗ ಒಳ್ಳೆ ಲಾಟರಿ ಬರುತ್ತಿದೆ ಅವರಿಗೆ. ಅವರು ಯಾರಿಗೋ ಜಿಪಿಎ ನೀಡಿದ್ದರು. ನನಗೆ ಹಣ ನೀಡಿ ಎಂದು ಅವರು ಹೇಳಿದ್ದಾರೆ. ಏನಾದರೂ ಹೆಚ್ಚು ಕಡಿಮೆ ಆಗುತ್ತದೆ ಅಂತ ನಾನು ಭೂಮಿ ಮಾಲೀಕರಿಗೆ ನೀಡಿ ಎಂದು ನಾನೇ ಹೇಳಿದ್ದೇನೆ ಎಂದರು.

ಭೂ ಮಾಲೀಕರು ನನ್ನ ಮೇಲೆ ವಿಶ್ವಾಸ ಇಡಿ‌. ನಿಮ್ಮ ಭೂಮಿ ಉಳಿಸಿಕೊಳ್ಳಿ‌. ನಿಮಗೆ ಸಾಕಷ್ಟು ಲಾಭ ಸಿಗಲಿದೆ. ರೈತರು ಹೋರಾಟ ಮಾಡುತ್ತಾರೆ. ವಿಪಕ್ಷಗಳು ಎತ್ತಿ ಕಟ್ಟುತ್ತಾರೆ. ಏನು ಮಾಡುವುದು?. ಟೀಕೆ ಟಿಪ್ಪಣಿ ಇದ್ದೇ ಇರುತ್ತದೆ ಏನು ಮಾಡುವುದು ಎಂದರು.

ಎಕ್ಸಿಟ್ ಪೋಲ್‌ಗಳ ಬಗ್ಗೆ ಕೇಳಿದಾಗ, ನನಗೆ ಎಕ್ಸಿಟ್ ಪೋಲ್‌ಗಳ ಬಗ್ಗೆ ನಂಬಿಕೆಯಿಲ್ಲ. ಇದರಲ್ಲಿ ಸತ್ಯ, ಸುಳ್ಳು ಇರಬಹುದು ಆದರೆ ನನಗೆ ವೈಯಕ್ತಿಕವಾಗಿ ನಂಬಿಕೆಯಿಲ್ಲ. ನಾನು ರಾಜಕೀಯದಲ್ಲಿ ವಿಶೇಷ ಅನುಭವ ಹೊಂದಿರುವೆ. ನಾವು ಕಾರ್ಯಕರ್ತರ ಹಾಗೂ ನಾಯಕರ ಮೇಲೆ ನಂಬಿಕೆ ಇಟ್ಟಿದ್ದೇನೆ" ಎಂದರು.

ಕೇರಳದಲ್ಲಿ ಯುಡಿಎಫ್ ಅಧಿಕಾರಕ್ಕೆ ಬರುವ ಭವಿಷ್ಯದ ಬಗ್ಗೆ ಕೇಳಿದಾಗ, ಈ ದೇಶ ಬದಲಾವಣೆ ಬಯಸುತ್ತಿದೆ. ಹೊಸ ಆಡಳಿತ ಬೇಕಿದೆ. ಬದಲಾವಣೆಗಾಗಿ ಇಂಡಿಯಾ ಒಕ್ಕೂಟ ಗೆಲ್ಲಲಿದೆ ಎಂದರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಣ್ವಸ್ತ್ರ ಒತ್ತಡಕ್ಕೆ ಮಣಿಯದ ಅಮೆರಿಕಾ: ಶಾಂತಿ ಪ್ರಸ್ತಾವನೆಗೆ ನಕಾರ; ಷರತ್ತುಗಳು ಅತಿಯಾಯ್ತು-ಸಮಯ ವ್ಯರ್ಥ ಮಾಡುತ್ತಿದ್ದಾರೆ; ಇರಾನ್ ವಿರುದ್ಧ ಟ್ರಂಪ್ ತೀವ್ರ ಕಿಡಿ

ಕದನ ವಿರಾಮ ನಡುವಲ್ಲೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ: 10 ಮಂದಿ ಸಾವು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಬೇಸಿಗೆಯಲ್ಲಿ ಬಾಡದಿರಲಿ ಚರ್ಮ (ಕುಶಲವೇ ಕ್ಷೇಮವೇ)

ಅಮೆರಿಕ ಜೊತೆ ಮಾತುಕತೆ ನಡೆಸಲು ಪಾಕಿಸ್ತಾನಿ ಮಧ್ಯವರ್ತಿಗಳಿಗೆ ಹೊಸ ಪ್ರಸ್ತಾವನೆ ಕಳುಹಿಸಿದ ಇರಾನ್!

ನಾಯಕತ್ವ ಬದಲಾವಣೆ ಚರ್ಚೆ ನಡುವೆ ಕೌತುಕ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ-ಬಿ.ಕೆ ಹರಿಪ್ರಸಾದ್ ಮಾತುಕತೆ! Video

SCROLL FOR NEXT