ಡಿಕೆ ಶಿವಕುಮಾರ್  
ರಾಜಕೀಯ

'ಇಂದೇ ಬರೆದಿಟ್ಕೊಳಿ, 2028ಕ್ಕೆ ಇದೇ ಡಿ.ಕೆ ಶಿವಕುಮಾರ್, ಇದೇ ಸರ್ಕಾರ': ಪವರ್​ ಶೇರಿಂಗ್​ ನಡುವೆಯೇ DCM ಬಿಗ್ ಸಂದೇಶ

ಆದಾಗ್ಯೂ, ಸಿಎಂ ಆಗುವ ಕುರಿತ ಪ್ರಶ್ನೆಗೆ ಉತ್ತರಿಸದೆ ಮೌನವಾದ ಡಿಸಿಎಂ, ಇನ್ನು, ದೇಶದಲ್ಲಿನ ದರ ಏರಿಕೆ ಕುರಿತು ಉಲ್ಲೇಖಿಸಿ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು.

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಮತ್ತೆ ಸದ್ದು ಮಾಡುತ್ತಿದ್ದು, ಅಧಿಕಾರ ಹಂಚಿಕೆ ಗೊಂದಲದ ನಡುವೆಯೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸೋಮವಾರ ಪ್ರತಿಪಕ್ಷಗಳಿಗೆ ದೊಡ್ಡ ಸಂದೇಶ ನೀಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಇಂದೇ ಪೇಪರ್​​ನಲ್ಲಿ ಬರೆದಿಟ್ಕೊಳಿ ಮುಂದೇನು ನಮ್ದೇ ಸರ್ಕಾರ. 'ಇದೇ ಡಿಕೆ ಶಿವಕುಮಾರ್, ಇದೇ ಕಾಂಗ್ರೆಸ್ ಸರ್ಕಾರ' ಇರುತ್ತದೆ ಎಂದು ಹೇಳಿದರು.

''ಪೇಪರ್​​ನಲ್ಲಿ ಬರೆದಿಟ್ಕೊಳಿ, ಈ ಹಿಂದೆ ನಾನು 136 ಸ್ಥಾನ ಬರುತ್ತದೆ ಅಂತ ಹೇಳಿದ್ದೆ, ಈಗಲೂ ಬರೆದಿಟ್ಕೊಳ್ಳಿ, 2028ಕ್ಕೆ ಇದೇ ಡಿಕೆ ಶಿವಕುಮಾರ್, ಇದೇ ಕಾಂಗ್ರೆಸ್ ಸರ್ಕಾರ ಇರುತ್ತದೆ. 2028ರ ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರವೇ ಆಧಿಕಾರಕ್ಕೆ ಬರಲಿದೆ'' ಎಂದು ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

2023ರಲ್ಲಿ ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯದಲ್ಲಿ ಬಿಜೆಪಿಗೆ 122 ಸೀಟು ಬರುತ್ತೆ ಎಂದಿದ್ರು. ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು, ಬರೆದಿಟ್ಟುಕೊಳ್ಳಿ 136 ಸೀಟುಗಳ ಮೂಲಕ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ ಎಂದಿದ್ದರು. ಈ ಭವಿಷ್ಯ ನಿಜವಾಗಿತ್ತು. ಇದೀಗ ಮತ್ತೊಂದು ಭವಿಷ್ಯ ನುಡಿದಿರುವ ಡಿಕೆಶಿ, 2028ರ ವಿಧಾನಸಭಾ ಚುನಾವನೆಯಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದಿದ್ದಾರೆ.

ಆದಾಗ್ಯೂ, ಸಿಎಂ ಆಗುವ ಕುರಿತ ಪ್ರಶ್ನೆಗೆ ಉತ್ತರಿಸದೆ ಮೌನವಾದ ಡಿಸಿಎಂ, ಇನ್ನು, ದೇಶದಲ್ಲಿನ ದರ ಏರಿಕೆ ಕುರಿತು ಉಲ್ಲೇಖಿಸಿ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು. ಮೇ.30ಕ್ಕೆ ಪ್ರತಿಭಟನೆ ನಡೆಸ್ತೀವಿ ಎಂದರು.

ಇದೇ ಸಂದರ್ಭದಲ್ಲಿ ದೆಹಲಿಗೆ ಹೋಗುತ್ತಿದ್ದೀರಾ? ಎಂಬ ಪ್ರಶ್ನೆಗೆ, ಹೈಕಮಾಂಡ್ ನಾಯಕರು ಕರೆದರೆ ಮಾತ್ರ ಹೋಗುತ್ತೇನೆ ಎಂದು ಡಿಸಿಎಂ ಉತ್ತರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

ಅದ್ಧೂರಿಯಾಗಿ ನಡೆಯಲಿದೆ ಶರ್ಮಿಳಾ ಮಾಂಡ್ರೆ ಮದುವೆ; ದಿನಾಂಕ, ಸ್ಥಳ ಫಿಕ್ಸ್; ಗ್ಲಾಮರಸ್‌ ನಟಿಯ ಮ್ಯಾರೇಜ್ ಎಲ್ಲಿ ಗೊತ್ತಾ?

ನಟ ಪ್ರಕಾಶ್ ರೈಗೆ ಜಾಮೀನು ಮಂಜೂರು; ಬಂಧನ ಭೀತಿಯಿಂದ ಪಾರು!

ಬ್ಯಾಕ್ ಟು ಬ್ಯಾಕ್ ಸರಣಿ ಸೋಲು: ಕೋಚ್ Gautam Gambhir ರೆಕ್ಕೆಪುಕ್ಕ ಕಟ್? BCCI ಮಹತ್ವದ ರೀವ್ಯೂ ಮೀಟಿಂಗ್!

ರಾಕೆಟ್ ಮರು ಬಳಕೆ: SpaceX ಬಳಿಕ ಇದೀಗ ಹೊಸ ಮೈಲುಗಲ್ಲು ತಲುಪಿದ ಚೀನಾ!