ಬಿ.ಕೆ ಹರಿಪ್ರಸಾದ್ ಮತ್ತು ಆರ್. ಅಶೋಕ 
ರಾಜಕೀಯ

ನಿಮ್ಮದೇ ಪಕ್ಷದ ಹಿರಿಯ ನಾಯಕರು ನಿಷ್ಪಕ್ಷಪಾತ ತನಿಖೆ ಬಗ್ಗೆ ಪ್ರಶ್ನೆ ಎತ್ತುತ್ತಿರುವಾಗ, ರಾಜ್ಯದ ಜನತೆ ಸರ್ಕಾರದ ಮೇಲೆ ವಿಶ್ವಾಸವಿಡಲು ಸಾಧ್ಯವೇ?

ಇನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿಪ್ರಾಯವೇನು? ಇತರರಿಗೆ ಪಾಠ ಹೇಳಲು ಸದಾ ಮುಂದಿರುವ ಅವರು, ಈಗ ತಮ್ಮದೇ ಸರ್ಕಾರದ ಕುರಿತಾದ ಕೆಲವು ಕಠಿಣ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ.

ಬೆಂಗಳೂರು: ಕಾಂಗ್ರೆಸ್‌ನಿಂದಲೇ ತನ್ನದೇ ಮುಖ್ಯಮಂತ್ರಿಯ ವಿರುದ್ಧ ಅವಿಶ್ವಾಸ, ಆಡಳಿತಾರೂಢ ಸರ್ಕಾರವು ತನ್ನದೇ ನಾಯಕರ ವಿಶ್ವಾಸವನ್ನು ಕಳೆದುಕೊಂಡಾಗ, ಅದು ಕರ್ನಾಟಕವನ್ನು ಆಳುವ ಹಕ್ಕನ್ನೇ ಕಳೆದುಕೊಳ್ಳುತ್ತದೆ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಲೇವಡಿ ಮಾಜಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಕಾತೆಯಲ್ಲಿ ಬರೆದುಕೊಂಡಿರುವ ಅಶೋಕ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರದ ವಿರುದ್ಧದ ಅತ್ಯಂತ ಗಂಭೀರವಾದ ಟೀಕೆ ಬರುತ್ತಿರುವುದು ವಿರೋಧ ಪಕ್ಷದಿಂದಲ್ಲ, ಬದಲಾಗಿ ನಿಮ್ಮದೇ ಆದ ಕಾಂಗ್ರೆಸ್ ಪಕ್ಷದ ಒಳಗಿನಿಂದಲೇ.

ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅತೃಪ್ತಿ ಹೊಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಒಪ್ಪಿಕೊಂಡಿದ್ದಾರೆ. ಅಲ್ಲದೆ, 'ಸ್ಟಿಂಗ್ ಆಪರೇಷನ್' ಕುರಿತ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ನಿಮ್ಮದೇ ಪಕ್ಷದ ಹಿರಿಯ ನಾಯಕರು ತನಿಖೆಯ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವಾಗ, ಕರ್ನಾಟಕದ ಜನತೆಗೆ ನಿಮ್ಮ ಸರ್ಕಾರದ ಮೇಲೆ ಯಾವ ವಿಶ್ವಾಸವಿರಲು ಸಾಧ್ಯ? ಎಂದಿದ್ದಾರೆ.

ಇನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಭಿಪ್ರಾಯವೇನು? ಇತರರಿಗೆ ಪಾಠ ಹೇಳಲು ಸದಾ ಮುಂದಿರುವ ಅವರು, ಈಗ ತಮ್ಮದೇ ಸರ್ಕಾರದ ಕುರಿತಾದ ಕೆಲವು ಕಠಿಣ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಸ್ವತಃ ಕಾಂಗ್ರೆಸ್ ನಾಯಕರೇ ತನಿಖೆಯ ವಿಶ್ವಾಸಾರ್ಹತೆಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವಾಗ, ಅಲ್ಲಿ ನಿಷ್ಪಕ್ಷಪಾತ ತನಿಖೆಯ ಭರವಸೆ ಎಲ್ಲಿಂದ ಬರಬೇಕು? ಗೃಹ ಸಚಿವರೋ, ಅಥವಾ ಕಾಂಗ್ರೆಸ್‌ನ ಆಂತರಿಕ ಕಾದಾಟದಲ್ಲಿ ಸಿಲುಕಿದ ಅಸಹಾಯಕ ದಾಳವೋ? ಎಂದು ಕಿಡಿಕಾರಿದ್ದಾರೆ.

ಪಕ್ಷದೊಳಗೆ ಭಿನ್ನಾಭಿಪ್ರಾಯ, ಹೈಕಮಾಂಡ್ ಅತೃಪ್ತಿ, ಹಿರಿಯ ನಾಯಕರು ಸಾರ್ವಜನಿಕವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿರುವುದು ಮತ್ತು ಸರ್ಕಾರದ ವಿಶ್ವಾಸಾರ್ಹತೆ ಕುಸಿಯುತ್ತಿರುವುದು - ಇವೆಲ್ಲವೂ ಎದ್ದು ಕಾಣುತ್ತಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ವಿಧಾನಸಭೆಯಲ್ಲಿ ನಿಮ್ಮ ಬಳಿ ಬಹುಮತದ ಸಂಖ್ಯೆಗಳಿರಬಹುದು, ಆದರೆ ಕೇವಲ ಸಂಖ್ಯೆಗಳಿಂದ ಪಕ್ಷದ ಒಳಗಿನ ವಿಶ್ವಾಸದ ಬಿಕ್ಕಟ್ಟನ್ನು ಬಗೆಹರಿಸಲು ಸಾಧ್ಯವಿಲ್ಲ.

ಕರ್ನಾಟಕಕ್ಕೆ ಬೇಕಿರುವುದು ಆಡಳಿತ, ಕಾಂಗ್ರೆಸ್‌ನ ಅಧಿಕಾರಕ್ಕಾಗಿನ ಆಂತರಿಕ ಜಗಳವಲ್ಲ. ಇಲ್ಲಿ ಬೇಕಿರುವುದು ಹೊಣೆಗಾರಿಕೆ, ಬಣಗಳ ನಡುವಿನ ಸಂಘರ್ಷವಲ್ಲ. ತನ್ನ ಸ್ವಂತ ಮನೆಯನ್ನೇ (ಪಕ್ಷವನ್ನೇ) ಸರಿಪಡಿಸಿಕೊಳ್ಳಲಾಗದ ಕಾಂಗ್ರೆಸ್, ಕರ್ನಾಟಕವನ್ನು ಆಳುವ ನೈತಿಕ ಹಕ್ಕನ್ನು ಹೇಗೆ ಹೊಂದಿರಲು ಸಾಧ್ಯ? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: 482ಕ್ಕೆ ತಲುಪಿದ ವಾಯು ಗುಣಮಟ್ಟ ಸೂಚಿ, ಪರಿಸ್ಥಿತಿ ಮತ್ತಷ್ಟು ಗಂಭೀರ..!

'ಬಹುಮಟ್ಟಿಗೆ ನಿಜ': ಮಧ್ಯಂತರ ಚುನಾವಣೆ ಮೇಲೆ ಇರಾನ್ ಯುದ್ಧ ಪರಿಣಾಮ ಬೀರಿದೆ, ಆದರೆ ಅನಿವಾರ್ಯವಾಗಿತ್ತು': ಡೊನಾಲ್ಡ್ ಟ್ರಂಪ್

ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ: ಜಲ ಸಂರಕ್ಷಣೆ, ಬರ ನಿರ್ವಹಣೆಗೆ ಕೇಂದ್ರ-ರಾಜ್ಯ ಒಗ್ಗೂಡಿ ಕೆಲಸ ಮಾಡೋಣ: ಸಿಎಂ ಡಿಕೆಶಿಗೆ ಪ್ರಧಾನಿ ಮೋದಿ ಪತ್ರ..!

ಆಡಳಿತ ವ್ಯವಸ್ಥೆ ನಿದ್ದೆಗೆ ಜಾರಿದೆಯೇ..? ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ರಸ್ತೆಗಿಳಿದ ವಿದ್ಯಾರ್ಥಿಗಳು; ಕೈಯಲ್ಲಿ ಸಲಿಕೆ ಹಿಡಿದು ತಾವೇ ಗುಂಡಿ ಮುಚ್ಚಿದ ಮಕ್ಕಳು..!

ಹಾಲಿನ ದರ ಏರಿಕೆಯ ₹8ರಲ್ಲಿ ₹7 ರೈತರಿಗೇ ಸಿಗಲಿದೆ, ರೈತರ ಹಿತಕ್ಕಾಗಿ ಬೆಲೆ ಏರಿಕೆ ಅನಿವಾರ್ಯ: ಬೆಲೆ ಏರಿಕೆ ಸಮರ್ಥಿಸಿಕೊಂಡ ಡಿಕೆ ಸುರೇಶ್