ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿಕೆ ಹರಿಪ್ರಸಾದ್ 
ರಾಜಕೀಯ

ನಿಗಮ ಮಂಡಳಿ ನೇಮಕ ವಿವಾದ: ಅಚಾತುರ್ಯ ಆಗಿದೆ, RSS ನಂಟು ಹೊಂದಿದವರಿಗೆ ಗೇಟ್ ಪಾಸ್: ಬಿಕೆ ಹರಿಪ್ರಸಾದ್

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು, ಒಂದೆರಡು ಅಚಾತುರ್ಯ ಆಗಿರುತ್ತದೆ, ಅದನ್ನು ಸರಿ ಮಾಡಿಕೊಳ್ಳುತ್ತೇವೆ.

ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚಿಗೆ ಹಲವು ನಿಗಮ ಮಂಡಳಿಗಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿದ್ದು, ಹಲವು ಆರ್ ಎಸ್ಎಸ್ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು, ಒಂದೆರಡು ಅಚಾತುರ್ಯ ಆಗಿರುತ್ತದೆ, ಅದನ್ನು ಸರಿ ಮಾಡಿಕೊಳ್ಳುತ್ತೇವೆ. ಈ ಬಗ್ಗೆ ಈಗಾಗಲೇ ಕೆಲವರಿಗೆ ನಾವು ನಿರ್ದೇಶನ ನೀಡಿದ್ದೇವೆ. ಅವರು ಮುಂದೆ ರಾಜೀನಾಮೆ ಕೊಡಬೇಕು ಎಂದರು.

ಆರ್‌ಎಸ್‌ಎಸ್ ಹಿನ್ನೆಲೆ ಯಾರ್‍ಯಾರಿಗೆ ಇದೆ ಅಂತ ತನಿಖೆ ಮಾಡುತ್ತಿದ್ದೇವೆ. ಅಂತವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಸರ್ಕಾರವೇ ಅವರಿಗೆ ನೀಡಿರುವ ಸ್ಥಾನ ಮಾನ ರದ್ದು ಮಾಡಬೇಕು. ಆರ್‌ಎಸ್‌ಎಸ್‌ ನಂಟು ಇರುವಂತವರಿಗೆ ನೀಡಿರುವ ಹುದ್ದೆಯನ್ನು ವಾಪಸ್ ಪಡೆಯಬೇಕು ಎಂದು ನಾವು ಈಗಾಗಲೇ ಹೇಳಿದ್ದೀವೆ ಎಂದರು.

ನಾವು ಸುಮಾರು 400 ಕ್ಕೂ ಹೆಚ್ಚು ನೇಮಕ ಮಾಡಿದ್ದೀವಿ. ಒಂದೆರಡು ಅಚಾತುರ್ಯ ಆಗಿರುತ್ತದೆ, ಅದನ್ನು ಸರಿ ಮಾಡಿಕೊಳ್ಳುತ್ತೇವೆ. ಇನ್ನೂ ಎರಡು ಪಟ್ಟಿ ಬರುತ್ತದೆ, ಅದರಲ್ಲಿ ಎಲ್ಲರಿಗೂ ಸಹ ಅವಕಾಶ ಮಾಡತಕ್ಕಂತಹ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ vs ಕಾಂಗ್ರೆಸ್: ಪ್ರಧಾನಿ ಮೋದಿ ಮುಂದೆ ಮೇಕೆದಾಟು ಪ್ರಸ್ತಾಪಿಸಿದ CM ಡಿಕೆಶಿ; ಖಂಡಿಸಿದ ಮಾಣಿಕ್ಯಂ ಟ್ಯಾಗೋರ್!

ರಾಜಕೀಯ ಬದ್ಧವೈರಿ ನಿತೀಶ್ ಕುಮಾರ್ ಮನೆಯಲ್ಲಿ 'ಖೀರ್' ಸವಿಯಲು ಲಾಲು ಪುತ್ರಿ ರೋಹಿಣಿ ನಿರ್ಧಾರ!

'ಅತ್ಯಂತ ಅಮಾನವೀಯ, 70 ವರ್ಷ ಬದುಕಬೇಕಿದ್ದ ಆನೆ 30ನೇ ವಯಸ್ಸಿಗೇ ಸಾವು'; ದೇಗುಲದ ಆನೆಗಳ ಸಂಕಷ್ಟದ ಬಗ್ಗೆ ನಟಿ ರಮ್ಯಾ ಕಿಡಿ, Video

'ನಮಗೆ ಪಾಠ ಮಾಡುವ ಮೊದಲು ನಿಮ್ಮ ಪೂರ್ವಗ್ರಹ ಸರಿಪಡಿಸಿಕೊಳ್ಳಿ, ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ': ಅಮೆರಿಕಕ್ಕೆ ಭಾರತ ಖಡಕ್ ತಿರುಗೇಟು!

ಗೋಧ್ರಾ ಹತ್ಯಾಕಾಂಡ ತನಿಖೆ ಬಗ್ಗೆ ಸೋನಿಯಾ ಸಂದೇಹ: ಸಿಬಿಐ ಮಾಜಿ ಅಧಿಕಾರಿ ಹೇಳಿದ್ದೇನು? Video