ಬೆಂಗಳೂರು: ಅಕ್ಟೋಬರ್ 23 ರಂದು ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಸ್ಪರ್ಧೆಯು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಒಗ್ಗಟ್ಟು ಹಾಗೂ ಮತಗಳ ವರ್ಗಾವಣೆ ಎಷ್ಟು ಪರಿಣಾಮಕಾರಿಯಾಗಿ ನಡೆಯುತ್ತದೆ ಎಂಬುದಕ್ಕೆ ನಿಜವಾದ ಪರೀಕ್ಷೆಯಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿಗ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಲಾಗುವುದು ಒಂದು ಕ್ಷೇತ್ರದಲ್ಲಿ ಬಿಜೆಪಿಯ ಮತಬ್ಯಾಂಕ್ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಳಿಕೊಳ್ಳಲಾಗುವುದು. ಈ ಮತ ವರ್ಗಾವಣೆ ಪ್ರಕ್ರಿಯೆ ಸುಗಮವಾಗಿ ನಡೆಯುತ್ತದೆಯೇ ಎಂಬುದನ್ನು ಎಲ್ಲಾ ಪಕ್ಷಗಳ ನಾಯಕರು ಗಮನಿಸುತ್ತಿದ್ದಾರೆ.
ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಎಂ. ಸುರೇಶ್ ಅವರು ಕಾಂಗ್ರೆಸ್‌ನ ಶಶಿ ಹುಲಿಕುಂಟೆಮಠ್ ವಿರುದ್ಧ ಸ್ಪರ್ಧಿಸಿದ್ದಾರೆ. ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ ಅವರು ಕಾಂಗ್ರೆಸ್‌ನ ಮೋಹನ್ ಲಿಂಬಿಕಾಯಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಶಶಿಲ್ ನಮೋಶಿ ಅವರು ಕಾಂಗ್ರೆಸ್‌ನ ಶರಣಪ್ಪ ಮಥೂರ್ ವಿರುದ್ಧ ಕಣಕ್ಕಿಳಿದಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ, ಕಾಂಗ್ರೆಸ್‌ನ ಪುಟ್ಟಣ್ಣ ಅವರ ವಿರುದ್ಧ ಎನ್‌ಡಿಎ (NDA) ಜೆಡಿಎಸ್‌ನ ಎ.ಪಿ. ರಂಗನಾಥ್ ಅವರನ್ನು ಕಣಕ್ಕಿಳಿಸಿದೆ. ಈ ನಾಲ್ಕು ಸ್ಥಾನಗಳ ಪೈಕಿ ಎನ್‌ಡಿಎ ಮೂರು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಹೊಂದಿವೆ, ಹೀಗಾಗಿ ಉಭಯ ಪಕ್ಷಗಳ ಮೇಲಿನ ಒತ್ತಡ ಸಮಾನವಾಗಿಲ್ಲ. ಎನ್‌ಡಿಎ ಪಾಲಿಗೆ ತನ್ನಲ್ಲಿರುವ ಸ್ಥಾನಗಳನ್ನು ಉಳಿಸಿಕೊಳ್ಳುವುದು ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿರುವಂತೆ ನಾಲ್ಕೂ ಸ್ಥಾನಗಳನ್ನು ಗೆಲ್ಲುವುದು ಸವಾಲಾಗಿದೆ.
ಕಾಂಗ್ರೆಸ್‌ಗೆ ಹೆಚ್ಚುವರಿಯಾಗಿ ಸಿಗುವ ಯಾವುದೇ ಸ್ಥಾನವು ಲಾಭದಾಯಕವೇ (ಬೋನಸ್) ಆಗಿರುತ್ತದೆ. ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳು ಸಾಂಪ್ರದಾಯಿಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿವೆ, ಹೀಗಾಗಿ ಬಿಜೆಪಿಯ ಮತಬ್ಯಾಂಕ್ ಎನ್‌ಡಿಎಗೆ ದೊಡ್ಡ ಆಸ್ತಿಯಾಗಿದೆ. ಬಿಜೆಪಿ ತನ್ನ ಮಿತ್ರಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಮತ್ತು ತನ್ನ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ವರ್ಗಾಯಿಸಬೇಕಾಗಿದೆ. ದೊಡ್ಡ ಪ್ರಮಾಣದಲ್ಲಿ ಮತ ವರ್ಗಾವಣೆಯಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ರಂಗನಾಥ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ (TNIE) ಗೆ ತಿಳಿಸಿದರು.
ಆಗ್ನೇಯ ಪದವೀಧರರ, ಪಶ್ಚಿಮ ಪದವೀಧರರ ಮತ್ತು ಈಶಾನ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಮುಖ ಪಾಲುದಾರ ಪಕ್ಷವಾಗಿದ್ದು, ಜೆಡಿಎಸ್ ಮತಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಇವು ಎನ್‌ಡಿಎ ಈಗಾಗಲೇ ಹೊಂದಿರುವ ಸ್ಥಾನಗಳಾಗಿರುವುದರಿಂದ, ಇಲ್ಲಿ ಯಾವುದೇ ಎಡವಟ್ಟು ಸಂಭವಿಸಿದರೂ ಅದು ಪಕ್ಷಕ್ಕೆ ನಷ್ಟವನ್ನುಂಟುಮಾಡುತ್ತದೆ.
ಅಧಿಕಾರದಲ್ಲಿದ್ದಾಗ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಶಿಕ್ಷಣ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದೆ ಎಂದು ಕುಮಾರಸ್ವಾಮಿ ಹೇಳಿದರು. ಅಲ್ಲದೆ, ಕೆಪಿಎಸ್‌ಸಿ (KPSC) ಹಗರಣಗಳ ಕಾರಣದಿಂದಾಗಿ ಶಿಕ್ಷಕರು, ಪದವೀಧರರು ಮತ್ತು ಯುವ ಮತದಾರರು ಸರ್ಕಾರದ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ಅವರು ನಿರೀಕ್ಷಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಿಗೆ ಜೆಡಿಎಸ್ ಮತಗಳಾಗಿ ಪರಿವರ್ತನೆಗೊಳ್ಳುತ್ತದೆಯೇ ಎಂಬುದನ್ನು ಈ ಮೂರು ಕ್ಷೇತ್ರಗಳ ಫಲಿತಾಂಶಗಳು ತೋರಿಸಿಕೊಡಲಿವೆ. ಈ ಕ್ಷೇತ್ರಗಳು ವಿಶಿಷ್ಟವಾದ ರಾಜಕೀಯ ಸ್ವರೂಪವನ್ನು ಹೊಂದಿವೆ ಎಂದು ಪ್ರೊ. ಸಂದೀಪ್ ಶಾಸ್ತ್ರಿ ಹೇಳಿದರು.
ಪದವೀಧರರು ಮತ್ತು ಶಿಕ್ಷಕರ ನೋಂದಣಿಯನ್ನು ಖಚಿತಪಡಿಸಿಕೊಳ್ಳುವಲ್ಲಿ ಯಾರು ಹೆಚ್ಚು ಯಶಸ್ವಿಯಾಗುತ್ತಾರೋ, ಅವರು ಮೇಲುಗೈ ಸಾಧಿಸುತ್ತಾರೆ ಎಂಬುದು ಹಿಂದಿನ ಅನುಭವದಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ. ಇಲ್ಲಿಯವರೆಗೆ ಘೋಷಿಸಲಾದ ಅಭ್ಯರ್ಥಿಗಳು ನೋಂದಣಿ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಸಂಘಟಿಸಿದ ಹಿನ್ನೆಲೆಯನ್ನು ಹೊಂದಿದ್ದಾರೆ. ಮತಗಳ ವರ್ಗಾವಣೆಯು "ಒಂದು ವೇಳೆ ವಿಧಾನಸಭೆ ಚುನಾವಣೆಗೂ ಈ ಮೈತ್ರಿ ಮುಂದುವರಿದರೆ ಏನಾಗಬಹುದು ಎಂಬುದಕ್ಕೆ ಯಾವುದೇ ಸೂಚನೆಯಾಗುವುದಿಲ್ಲ ಎಂದು ಅವರು ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯು ಹಿಂದೆ ಯಾವಾಗಲೂ ಸಂಪೂರ್ಣವಾಗಿ ಲಾಭದಾಯಕ ಫಲಿತಾಂಶಗಳನ್ನು ನೀಡಿಲ್ಲ. ಮುಂಬರುವ ಎಂಎಲ್‌ಸಿ (MLC) ಚುನಾವಣೆಯು ಎನ್‌ಡಿಎ (NDA) ಮೈತ್ರಿಕೂಟಕ್ಕೆ ತನ್ನದೇ ಆದ ಸವಾಲುಗಳನ್ನು ಒಡ್ಡಲಿದೆ. ವಿವಿಧ ಸಾಮಾಜಿಕ ವರ್ಗಗಳ ಮತಗಳು ಮತ್ತು ಅವುಗಳಲ್ಲಿ ಉಂಟಾಗಬಹುದಾದ ವಿಭಜನೆಯೂ ನಿರ್ಣಾಯಕವಾಗಲಿದೆ. ಇದರ ಫಲಿತಾಂಶ ಏನಾಗಬಹುದು ಎಂಬುದನ್ನು ಊಹಿಸುವುದು ಕಷ್ಟ, ಎಂದು ರಾಜಕೀಯ ವಿಶ್ಲೇಷಕ ಪಿ.ಎಸ್. ಜಯರಾಮು ಹೇಳಿದರು.