ಬೆಂಗಳೂರು: ಡಿಕೆ ಶಿವಕುಮಾರ್ ಅವರು ಮನಸ್ಸು ಮಾಡಿದ್ರೆ, ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ರೈತರ ಸಾಲ ಮನ್ನಾಗೆ ಆಗ್ರಹಿಸಿದರು. ಡಿಕೆ ಶಿವಕುಮಾರ್ ಅವರು ಮನಸು ಮಾಡಿದ್ರೆ, ತಮ್ಮ ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು. ರೈತರು ಸಾಲಮನ್ನಾ ಆಗಬೇಕು ಅಂತ ಹೇಳ್ತಿದ್ದಾರೆ.
ಸಿಎಂ ಕೂಡಾ ಸಿದ್ದರಾಮಯ್ಯ, ಕುಮಾರಸ್ವಾಮಿ ಕಾಲದಲ್ಲಿ ಸಾಲ ಮನ್ನಾ ಆಗಿದೆ. ನಾನು ಸಾಲಮನ್ನಾ ಮಾಡಿಲ್ಲ ಅಂದ್ರೆ 2028 ಚುನಾವಣೆಗೆ ಕಷ್ಟ ಆಗುತ್ತೆ ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್ ಮನಸು ಮಾಡಿದ್ರೆ ಸಾಲ ಮನ್ನಾ ಮಾಡೋಕೆ ಆರ್ಥಿಕ ಇಲಾಖೆ ಬೇಕಿಲ್ಲ ಎಂದು ಕುಟುಕಿದರು.
ಸಾಲಮನ್ನಾಗೆ ಮೋದಿ ಸಹಕಾರ ಬೇಕು ಎಂದ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಎರಡು ಬಾರಿ ಸಾಲಮನ್ನಾ ಮಾಡಿದಾಗ ಮೋದಿ, ಮನಮೋಹನ್ ಸಿಂಗ್ ಅವರ ಬಳಿ ಹಣ ಕೊಡಿ ಅಂತ ಕೇಳಿದ್ನಾ? ನಮ್ಮ ತೆರಿಗೆ ಹಣದಿಂದ ಸಾಲಮನ್ನಾ ಮಾಡಿದ್ದೇನೆ. ಪೊಳ್ಳು ಘೋಷಣೆಗಳನ್ನ ಸಿಎಂ ಮೊದಲು ಬಿಡಲಿ. ಎಷ್ಟು ಕೆಲಸ ಆಗುತ್ತೋ ಅಷ್ಟು ಸಾಲ ಮಾಡಿ ಎಂದು ಒತ್ತಾಯಿಸಿದರು.
ಬೆಂಗಳೂರು ಸುತ್ತಮುತ್ತ ಸಾವಿರಾರು ಕೋಟಿ ಆಸ್ತಿ ನುಂಗಲು ಹೊರಟಿದ್ದಾರೆ. ʻನೈಸ್ʼ ಹೆಸರಿನಲ್ಲಿ ಸಾವಿರಾರು ಕೋಟಿ ನುಂಗೋಕೆ ಹೊರಟಿದ್ದಾರೆ. ಮನಸ್ಸು ಮಾಡಿದ್ರೆ ಡಿಕೆಶಿ ತಮ್ಮ ಕೈಯಿಂದಲೇ ಸಾಲ ಮನ್ನಾ ಮಾಡಬಹುದು. ವೈಯಕ್ತಿಕವಾಗಿಯೇ ಸಾಲ ಮನ್ನಾ ಮಾಡಬಹುದು.
ಇತ್ತೀಚೆಗೆ ಬಹಳ ಬದಲಾವಣೆ ಆಗಿರೋ ರೀತಿ ತೋರಿಸ್ತಾ ಇದ್ದಾರೆ. ಅದು ಕಾರ್ಯ ರೂಪಕ್ಕೆ ಇಲ್ಲಿವರೆಗೂ ಹಲವಾರು ರೀತಿ ಸಂಪಾದನೆ ಮಾಡಿರೋ ಹಣವನ್ನ ಜನರ ಪರವಾಗಿ ಕೊಟ್ಟರೆ 2028ಕ್ಕೂ, ಮುಂದೆಯೂ ನಾನೇ ಸಿಎಂ ಅಂತ ಹೇಳ್ತಾ ಇದ್ದಾರೆ. ಇದು ಮಾಡಿದ್ರೆ ಅದೂ ಆಗಬಹುದು ಎಂದು ಭವಿಷ್ಯ ನುಡಿದರು.