ಸಿಎಂ ಡಿಕೆ.ಶಿವಕುಮಾರ್ 
ರಾಜಕೀಯ

ಸ್ವಪಕ್ಷದ ಶಾಸಕರಿಂದಲೇ ಛೀ... ಥೂ... ಅಂತ ಉಗಿಸಿಕೊಳ್ಳುತ್ತಿದ್ದೀರಿ, ಇನ್ಯಾವ ಮುಖವಿಟ್ಟುಕೊಂಡು ಆ ಕುರ್ಚಿಯಲ್ಲಿ ಕುಳಿತ್ತಿದ್ದೀರಿ...?

ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆದು ಸರ್ಕಾರವನ್ನು ದಿವಾಳಿ ಮಾಡಿರುವ ಸಿಎಂ ಡಿಕೆ.ಶಿವಕುಮಾರ್ ಅವರೇ, ಈಗ ನಿಮ್ಮ ಸ್ವಂತ ಪಕ್ಷದ ಶಾಸಕರೇ ನಿಮ್ಮ ದರಿದ್ರ ಸರ್ಕಾರದ ಮುಖಕ್ಕೆ ಉಗಿದು ರಾಜೀನಾಮೆ ಎಸೆಯುತ್ತಿದ್ದಾರೆ.

ಬೆಂಗಳೂರು: ಸ್ವಪಕ್ಷದ ಶಾಸಕರಿಂದಲೇ ಛೀ... ಥೂ... ಅಂತ ಉಗಿಸಿಕೊಳ್ಳುತ್ತಿದ್ದೀರಿ, ಇನ್ಯಾವ ಮುಖವಿಟ್ಟುಕೊಂಡು ಆ ಕುರ್ಚಿಯಲ್ಲಿ ಕುಳಿತ್ತಿದ್ದೀರಿ? ತಕ್ಷಣವೇ ಇಂಡಿ ಸೇರಿದಂತೆ ಬಿಟ್ಟುಹೋದ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಪರಿಹಾರ ನೀಡಿ, ಇಲ್ಲದಿದ್ದರೆ ನಿಮ್ಮನ್ನ ನಿಮ್ಮ ಪಕ್ಷದ ಶಾಸಕರೇ ಕುರ್ಚಿಯಿಂದ ಕೆಳಗಿಳಿಸಲಿದ್ದಾರೆಂದು ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದ ಹಿನ್ನೆಲೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆದು ಸರ್ಕಾರವನ್ನು ದಿವಾಳಿ ಮಾಡಿರುವ ಸಿಎಂ ಡಿಕೆ.ಶಿವಕುಮಾರ್ ಅವರೇ, ಈಗ ನಿಮ್ಮ ಸ್ವಂತ ಪಕ್ಷದ ಶಾಸಕರೇ ನಿಮ್ಮ ದರಿದ್ರ ಸರ್ಕಾರದ ಮುಖಕ್ಕೆ ಉಗಿದು ರಾಜೀನಾಮೆ ಎಸೆಯುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರವನ್ನು ಭೀಕರ ಬರಪೀಡಿತ ಪಟ್ಟಿಯಿಂದ ಕೈಬಿಟ್ಟು, ರೈತರ ಹೊಟ್ಟೆಗೆ ಹೊಡೆದಿರುವ ನಿಮ್ಮ ನಿರ್ದಯಿ ನಿಮ್ಮದೇ ಕಾಂಗ್ರೆಸ್ ಪಕ್ಷದ ಶಾಸಕ ಯಶವಂತರಾಯಗೌಡ ಪಾಟೀಲ ಅವರೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿಮ್ಮ ಲಜ್ಜೆಗೆಟ್ಟ ಸರ್ಕಾರದ ಮುಖವಾಡವನ್ನು ಬಿಚ್ಚಿಟ್ಟಿದ್ದಾರೆಂದು ಹೇಳಿದ್ದಾರೆ.

ರೈತರ ಸಂಕಷ್ಟಕ್ಕೆ ಕನಿಷ್ಠ ಬೆಲೆಯೂ ಇಲ್ಲ: ಇಂಡಿ ಮತ್ತು ಚಡಚಣ ತಾಲೂಕಿನ ರೈತರು ಮಳೆಯಿಲ್ಲದೆ, ಬೆಳೆ ಒಣಗಿ, ಕುಡಿಯುವ ನೀರಿಗೂ ತತ್ಕರಿಸಿ ಕಣ್ಣೀರು ಹಾಕುತ್ತಿದ್ದರೆ ನಿಮ್ಮ ಸರ್ಕಾರಕ್ಕೆ ಕಣ್ಣೂ ಕಾಣುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ.

ಸ್ವಪಕ್ಷೀಯರ ಮಾತನ್ನೇ ಕೇಳದ ದಬ್ಬಾಳಿಕೆ: "ನಮ್ಮ ಮಾತಿಗೆ ಹಾಗೂ ಭಾವನೆಗಳಿಗೆ ಈ ಸರ್ಕಾರದಲ್ಲಿ ಬೆಲೆಯೇ ಇಲ್ಲ, ಪ್ರಭಾವಿಗಳಿಗೆ ಮಾತ್ರ ಕೆಲಸವಾಗುತ್ತಿದೆ" ಎಂದು ನಿಮ್ಮದೇ ಶಾಸಕರು ಸದನದಲ್ಲೇ ನಿಮ್ಮ ಆಡಳಿತಕ್ಕೆ 'ಛೀ ಮಾರಿ' ಹಾಕಿ ರಾಜೀನಾಮೆ ಪತ್ರ ಬಿಸಾಕುತ್ತಿದ್ದಾರೆ.

ಬೊಕ್ಕಸದಲ್ಲಿದ್ದ ದುಡ್ಡನ್ನೆಲ್ಲಾ ಕಮಿಷನ್ ದಂಧೆಯಲ್ಲಿ ಲೂಟಿ ಮಾಡಿ, ರಾಜ್ಯದ ರೈತರಿಗೆ ಬರ ಪರಿಹಾರ ನೀಡಲೂ ನಿಮ್ಮ ಹತ್ತಿರ ನಯಾಪೈಸೆ ಹಣವಿಲ್ಲ. ಜನಸಾಮಾನ್ಯರ ಕಣ್ಣೀರು ಮಾತ್ರವಲ್ಲ, ನಿಮ್ಮದೇ ಪಕ್ಷದ ಶಾಸಕರ ಕಣ್ಣೀರು ಕೂಡ ನಿಮಗೆ ಕಾಣುತ್ತಿಲ್ಲ. ಜನರ ಹಿತ ಕಾಯಲು ಯೋಗ್ಯತೆಯಿಲ್ಲದ, ಸ್ವಪಕ್ಷದ ಶಾಸಕರ ವಿಶ್ವಾಸವನ್ನೇ ಉಳಿಸಿಕೊಳ್ಳಲಾಗದ ಈ ನಾಲಾಯಕ್ ಸರ್ಕಾರಕ್ಕೆ ಅಧಿಕಾರದಲ್ಲಿರಲು ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ಅವರೇ, ಇನ್ಯಾವ ಮುಖವಿಟ್ಟುಕೊಂಡು ಆ ಕುರ್ಚಿಯಲ್ಲಿ ಕುಳಿತ್ತಿದ್ದೀರಿ? ತಕ್ಷಣವೇ ಇಂಡಿ ಸೇರಿದಂತೆ ಬಿಟ್ಟುಹೋದ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಪರಿಹಾರ ನೀಡಿ, ಇಲ್ಲದಿದ್ದರೆ ನಿಮ್ಮನ್ನ ನಿಮ್ಮ ಪಕ್ಷದ ಶಾಸಕರೇ ಕುರ್ಚಿಯಿಂದ ಕೆಳಗಿಳಿಸಲಿದ್ದಾರೆಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗ್ರೇಟರ್ ನೋಯ್ಡಾದಲ್ಲಿ ಪ್ರವಾಸಿ ಬಸ್‌ಗೆ ಬೆಂಕಿ: 9ಮಂದಿ ಸಜೀವ ದಹನ; ಜಿಗಿದು ಪ್ರಾಣ ಉಳಿಸಿಕೊಂಡ ಜನ

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿಯಾಗುತ್ತಿದ್ದಂತೆ Xi Jinping ಶಾಂತಿ ಮಂತ್ರ; US-China ನಡುವೆ ಶುರುವಾಯ್ತಾ ಹೊಸ ಸ್ನೇಹ ಪರ್ವ?

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ; ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!

ಬರಗಾಲ ಕುರಿತು ಮುಗಿಯದ ಚರ್ಚೆ: ರಾಜ್ಯ ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್ ಪತ್ರ: ಬರ ನಿರ್ವಹಣೆಗಾಗಿ ಶೇ. 50ರಷ್ಟು ಮಧ್ಯಂತರ ಪರಿಹಾರ ಬಿಡುಗಡೆಗೆ ಒತ್ತಾಯ!