ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ. ನಾವು ಒಂದು ವರ್ಷಗಳ ಮುಂಚಿತವಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಕೆಲಸ ಮಾಡಲಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆ ಸಂಬಂಧ ಸಚಿವರು ಹಾಗೂ ಪಕ್ಷದ ಶಾಸಕರ ಸಭೆ ಬಳಿಕ ಕೆಪಿಸಿಸಿ ಕಚೇರಿ ಬಳಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು. ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಈಗ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದೇ ಚುನಾವಣೆ ಕುರಿತು ಶಾಸಕರೊಂದಿಗೆ ಸಭೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ. ಎಲ್ಲಾ ಮಂತ್ರಿಗಳು ಹಾಗೂ ಶಾಸಕರು ಜವಾಬ್ದಾರಿ ವಹಿಸಿಕೊಂಡು ಚುನಾವಣೆ ಮಾಡಲಿದ್ದಾರೆ" ಎಂದು ತಿಳಿಸಿದರು.
ದೆಹಲಿ ಪ್ರಯಾಣದ ಬಗ್ಗೆ ಕೇಳಿದಾಗ, "ಭೇಟಿಗೆ ಸಮಯವಕಾಶ ಕೇಳಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಸಮಯ ನೀಡಿದ ಬಳಿಕ ಸರ್ವಪಕ್ಷ ಸಭೆ ಕರೆದುಕೊಂಡು ಹೋಗಲಾಗುವುದು" ಎಂದು ತಿಳಿಸಿದರು. ಯಶವಂತರಾಯಗೌಡ ಪಾಟೀಲ್ ಅವರು ಬೇರೆ ಕಾರಣಕ್ಕೆ ರಾಜೀನಾಮೆ ನೀಡುತ್ತಿಲ್ಲ. ಈಶ್ವರಪ್ಪ ಅವರು 15 ರಾಜೀನಾಮೆಗಳ ಬಗ್ಗೆ ಹೇಳಿದರಲ್ಲ, ಅಂತಹ ರಾಜೀನಾಮೆ ಅಲ್ಲ.
ರೈತರ ಬದುಕಿಗಾಗಿ ನೀಡಲು ಮುಂದಾದ ರಾಜೀನಾಮೆ. ನಾಗೇಂದ್ರ ರಾಜೀನಾಮೆ ವಿಚಾರ ಬೇರೆ. ನಾಗೇಂದ್ರ ಅವರ ರಾಜೀನಾಮೆಯನ್ನು ನಾನೇ ತೆಗೆದುಕೊಂಡಿದ್ದೇನೆ. ಈಶ್ವರಪ್ಪ ಅವರು ಹೇಳಿದ್ದು, ಕೊಟ್ಟು ತೆಗೆದುಕೊಳ್ಳುವ ರಾಜೀನಾಮೆ. ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ಬಗ್ಗೆ ವಿರೋಧ ಪಕ್ಷಗಳು ಗಾಬರಿಯಾಗುವುದು ಬೇಡ. ವಿರೋಧ ಪಕ್ಷದವರಾದ ನೀವುಗಳು ಭಾವನಾತ್ಮಕವಾಗಿ ರಾಜೀನಾಮೆ ನೀಡಿದರೂ ನಾವು ಆತುರದಲ್ಲಿ ಅದನ್ನು ಅಂಗೀಕಾರ ಮಾಡುವುದಿಲ್ಲ.
ಜನ ನಿಮ್ಮನ್ನು 5 ವರ್ಷಕ್ಕೆ ಆಯ್ಕೆ ಮಾಡಿದ್ದು, ನೀವು ಇಲ್ಲಿ ಇದ್ದು, ಜನರ ಧ್ವನಿಯಾಗಿ ಕೆಲಸ ಮಾಡಬೇಕು. ನಾನು 224 ಕ್ಷೇತ್ರಗಳಿಗೆ ಸಿಎಂ ಆಗಿದ್ದು, ಇದು 224 ಕ್ಷೇತ್ರಗಳ ಸರ್ಕಾರ. ಹೀಗಾಗಿ ನೀವು ಬರದ ವಿಚಾರವಾಗಿ ಮುಕ್ತವಾಗಿ ಚರ್ಚೆ ಮಾಡಿ ಎಂದರು.
ಸದ್ಯ ಭೀಕರ ಬರಗಾಲ ಎದುರಾಗಿದ್ದು, ನಾನು ರಾಜ್ಯದ ವಿವಿಧ ಭಾಗಗಳಿಗೆ ಹೋಗಿ, ನನಗಿದ್ದ ಸಮಯದಲ್ಲಿ ಸಾಧ್ಯವಾದಷ್ಟು ಪ್ರದೇಶದಲ್ಲಿ ಪರಿಶೀಲನೆ ಮಾಡಿದ್ದೇನೆ. ನಾನು ಮೊದಲು ಗದಗ ಜಿಲ್ಲೆಗೆ ಹೋಗಿ ಪರಿಶೀಲನೆ ಮಾಡಿದ್ದೆ. ಯಶವಂತರಾಯಗೌಡ ಪಾಟೀಲ್ ಅವರ ವಿಚಾರ ಪ್ರಸ್ತಾಪಿಸಲಾಗಿದೆ. ನಾನು ಯಶವಂತರಾಯಗೌಡ ಪಾಟೀಲ್ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಎಲ್ಲಾ ಕ್ಷೇತ್ರಗಳಲ್ಲಿ ಜನರು ಸಾಲ ಮಾಡಿ ಬೆಳೆ ಹಾಕಿದ್ದಾರೆ. ಈ ರೈತರಿಗೆ ಪರಿಹಾರ ನೀಡಬೇಕು” ಎಂದರು.
“ಕೇಂದ್ರ ಸರ್ಕಾರ ಬರ ಈ ಬಗ್ಗೆ ತೀರ್ಮಾನ ಮಾಡಬೇಕಿದೆ. ನಾವು ಇಲ್ಲಿಂದ ಏನೇ ವರದಿ ಕಳುಹಿಸಿದರೂ ಅದು ತಲುಪುವುದು ಕೇಂದ್ರಕ್ಕೆ . ನೀವು ಸ್ಪೀಕರ್ ಎನ್ನುವ ಕಾರಣಕ್ಕೆ ನಿಮ್ಮ ಕ್ಷೇತ್ರವನ್ನು ಬರ ಪ್ರದೇಶ ಎಂದು ಘೋಷಣೆ ಮಾಡುವ ಅಧಿಕಾರ ಇಲ್ಲ. ಬರ ಘೋಷಣೆ ಮಾಡಬೇಕು ಎಂದರೆ ಅದಕ್ಕೆ ಅದರದೇ ಆದ ಮಾನದಂಡಗಳಿವೆ. 21 ದಿನಗಳ ಕಾಲ ಮಳೆ ಬೀಳಬಾರದು. ಇಂತಿಷ್ಟು ಪ್ರಮಾಣದ ಮಳೆ ಕೊರತೆ ಇರಬೇಕು ಎಂಬ ಮಾರ್ಗಸೂಚಿಗಳಿವೆ. ನಮ್ಮ ಶಾಸಕರು ಸೇರಿದಂತೆ ಅನೇಕರು ನಮ್ಮ ತಾಲ್ಲೂಕನ್ನು ಬರ ಪಟ್ಟಿಗೆ ಸೇರಿಸಿ ಎಂದು ಮನವಿ ಪತ್ರ ನೀಡಿದ್ದಾರೆ. ನಾನು ಯಾವ ಕ್ಷೇತ್ರವನ್ನು ಸೇರಿಸಿಲ್ಲ. ಎಲ್ಲಾ ಜವಾಬ್ದಾರಿಯನ್ನು ಪರಮೇಶ್ವರ್ ಅವರಿಗೆ ವಹಿಸಿದ್ದೇನೆ” ಎಂದರು.
“ಈ ಮಧ್ಯೆ ಎಲ್ಲರ ಒತ್ತಡದ ಮೇರೆಗೆ ಮೋಡ ಬಿತ್ತನೆ ಪ್ರಯತ್ನಕ್ಕೂ ಮುಂದಾಗಿದ್ದೇವೆ. ಕೆಲವು ಭಾಗದಲ್ಲಿ ಯಶಸ್ವಿಯಾದರೆ, ಮತ್ತೆ ಕೆಲವು ಭಾಗದಲ್ಲಿ ಯಶಸ್ವಿಯಾಗಿಲ್ಲ. ಮೋಡಗಳು ಬಂದರೆ ನಾವು ಬಿತ್ತನೆ ಮಾಡಲು ಸಾಧ್ಯ. ಹೆಚ್ ಕೆ ಪಾಟೀಲರಂತಹ ಹಿರಿಯ ನಾಯಕರ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಒತ್ತಡ ಇರಬೇಕಾದರೆ, ನಮ್ಮ ಯಶವಂತರಾಯಗೌಡ ಪಾಟೀಲ್ ಅವರು ಬೇಸರಗೊಂಡಿರುವುದರಲ್ಲಿ ತಪ್ಪಿಲ್ಲ” ಎಂದರು.