ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕೇಳಲ್ಪಡುವ ಪದ ಸ್ಸಾರಿ, ಡೋಂಟ್ ನೋ ಕನ್ನಡ. ಅಂದ್ರೆ ಕನ್ನಡ ಗೊತ್ತಿಲ್ಲ..ಹಾಗಾದರೆ ಕನ್ನಡ ಗೊತ್ತಿಲ್ಲದೇ ಇರುವವರಿಗೆ ಕನ್ನಡ ಕಲಿಸುವುದು ಹೇಗೆ?
ಅದಕ್ಕೂ ಇದೆ ಸುಲಭ ಉಪಾಯ kannadagottilla.com.
ಕನ್ನಡ ಕಲಿಯಬೇಕೆಂದು ಬಯಸುವವರು ಈ ವೆಬ್ ಸೈಟ್ನಲ್ಲಿ ಹೆಸರು ನೋಂದಾಯಿಸಬೇಕು. ಒಂದು ಬಾರಿ ನೋಂದಾಯಿತರಾದವರಿಗೆ ತಂಡದ ನಿರ್ವಾಹಕರು ಇಮೇಲ್ ಐಡಿ ಕಳುಹಿಸುತ್ತಾರೆ. ಈ ಮೂಲಕ ಅವರು ಗ್ರೂಪ್ ನ ಸದಸ್ಯರಾಗಬಹುದು. ಹೀಗೆ ಸದಸ್ಯರಾದವರನ್ನು ಒಂದು ವಾಟ್ಸಾಪ್ ಗ್ರೂಪ್ ನಲ್ಲಿ ಸದಸ್ಯರನ್ನಾಗಿ ಮಾಡಲಾಗುತ್ತದೆ. ಒಂದೊಂದು ಗುಂಪಿನಲ್ಲಿ 20 ರಿಂದ 30 ಸದಸ್ಯರಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಗುಂಪು ಇದೆ. ಹೀಗೆ ವಾಟ್ಸಾಪ್ ಮೂಲಕ ಕನ್ನಡವನ್ನು ಕಲಿಸಿಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ http://kannadagottilla.com ಗೆ ಭೇಟಿ ನೀಡಿ