ಮಿಟಾಪಾಜಿ ಪಾತ್ರ
ಕೆಂಪುರಕ್ತ ಕಣಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ಮಹತ್ವದ ಯಶಸ್ಸು ಗಳಿಸಿದ್ದಾರೆ. ಕೆಂಪುರಕ್ತ ಕಣಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎನ್ನುವುದನ್ನು ಕಂಡುಕೊಂಡಿದ್ದಾರೆ. ಇದು ರಕ್ತಕ್ಕೆ ಸಂಬಂಧಿಸಿದ ಅನಿಮಿಯಾದಂಥ ರೋಗಗಳ ಕಾರಣ ಹುಡುಕಲಿಕ್ಕಷ್ಟೇ ನೆರವಾಗುವುದಿಲ್ಲ. ಬದಲಾಗಿ ಲ್ಯಾಬ್ನಲ್ಲೇ ರಕ್ತದ ಕೋಶಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಮಹತ್ವದ ನೆರವು ನೀಡುತ್ತದೆ. ಕೆಂಪುರಕ್ತ ಕೋಶಗಳು ಆಮ್ಲಜನಕವನ್ನು ಇಡೀ ದೇಹಕ್ಕೆ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಕ್ತಕಣಗಳ ಉತ್ಪಾದನೆಯಲ್ಲಿ ಮಿಟಾಪಾಜಿಯ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲ. ಈಗ ಮಿಟಾಪಾಜಿಯ ಪಾತ್ರ ಒಂದೊಂದೇ ಅರ್ಥವಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.