ವಿಜ್ಞಾನ-ತಂತ್ರಜ್ಞಾನ

ಮೂಲ ಮಾನವ

ಮಾನವನ ಕಥೆಯೇ ವಿಚಿತ್ರ. ಇಲ್ಲಿವರೆಗೂ ಬಗೆಹರಿಯದ ಕಥೆ ಇದು. ಎಷ್ಟೋ ಸಂಶೋಧಕರು, ವಿಜ್ಞಾನಿಗಳು ಮಾನವ ಮೂಲದ ಬಗ್ಗೆ ಪತ್ತೆ ಹಚ್ಚುತ್ತಲೇ ಇದ್ದಾರೆ. ಆದರೂ ಈ ವರ್ಷದಲ್ಲೇ ಮಾನವ ಉಗಮವಾದ ಅಥವಾ ಉದ್ಭವಿಸಿದ ಎಂಬ ಬಗ್ಗೆ ನಿಖರವಾಗಿ ಹೇಳಲು ಆಗುತ್ತಲೇ ಇಲ್ಲ.
ಈ ಹಿನ್ನೆಲೆಯಲ್ಲಿಯೇ ನ್ಯಾಷನಲ್ ಜಿಯೋಗ್ರಾಫಿಕ್ಸ್ ಈ ಬಗ್ಗೆ ಸಂಶೋಧನೆ ಕೈಗೊಂಡಿತ್ತು. ಡಿಎನ್‌ಎ ಆಧರಿಸಿ ಮಾನವನ ಮೂಲ ಪತ್ತೆ ಹಚ್ಚುವುದು ಈ ಸಂಶೋಧನೆಯ ಪ್ರಮುಖ ಉದ್ದೇಶವಾಗಿತ್ತು. ಅದರಂತೆ ಮಾನವನ ಸಂತತಿ, ವಂಶಾವಳಿಗಳನ್ನಿಟ್ಟುಕೊಂಡು ಸಂಶೋಧನೆಗಿಳಿದಿತ್ತು.
ಈ ಸಂಶೋಧನೆ ಆರಂಭವಾಗಿದ್ದು 2005ರಲ್ಲಿ. ಇಡೀ ಸಂಶೋಧನೆಯ ಚಿತ್ರಣ ನೀಡಲು ಸಾಧ್ಯವಾಗದಿದ್ದರೂ ಅದರ ಸಾರಾಂಶವನ್ನಿಟ್ಟುಕೊಂಡು ಮಾನವ ಮೂಲದ ಬಗ್ಗೆ ಒಂದು ಚಿಕ್ಕ ಚಿತ್ರಣ ನೀಡಲು ಇಲ್ಲಿ ಪ್ರಯತ್ನಿಸಲಾಗಿದೆ.
ವಿಶೇಷವೆಂದರೆ ಈ ಸಂಶೋಧನೆಗಾಗಿ ವಿಜ್ಞಾನಿಗಳು 1,50,000 ಡಿಎನ್‌ಎ ಪರೀಕ್ಷೆ ಮಾಡಿದ್ದಾರೆ. ಇದನ್ನು ಇಟ್ಟುಕೊಂಡು ಮಾನವ ಎಲ್ಲಿ ಉಗಮವಾದ ಎಂಬ ಬಗ್ಗೆ ಉತ್ತರ ನೀಡಲು ಪ್ರಯತ್ನಿಸಿದ್ದಾರೆ.
ಈ ಸಂಶೋಧನೆ ಪ್ರಕಾರ ಮೊದಲು ಮಾನವನ ಉಗಮವಾಗಿದ್ದು ಆಫ್ರಿಕದಲ್ಲಂತೆ. ಅದೂ 60,000 ಅಥವಾ 70,000 ವರ್ಷಗಳ ಹಿಂದೆ. ಭೂಮಿ ತಣ್ಣಗಾಗುವ ಪ್ರಕ್ರಿಯೆ ಮುಗಿದ ಬಳಿಕ ಮಾನವನ ಉಗಮವಾಗಿರಬಹುದು ಎಂಬುದು ವಿಜ್ಞಾನಿಗಳ ಅಂದಾಜು. ಹ್ಯಾಪ್ಲೋಗ್ರಾಫ್ ವಂಶವೃಕ್ಷವನ್ನು ಆಧರಿಸಿ ಆಫ್ರಿಕದಿಂದ ಮಾನವ ಬೇರೆ ಎಲ್ಲೆಲ್ಲಿಗೆ ಹೋಗಿರಬಹುದು ಎಂಬುದನ್ನು ಹೇಳುವುದಕ್ಕೂ ಇಲ್ಲಿ ಪ್ರಯತ್ನಿಸಲಾಗಿದೆ. ಇದಕ್ಕಾಗಿ ಸಾವಿರ ವರ್ಷಗಳ ಸಂತತಿಗಳನ್ನು ಗುರುತಾಗಿ ಇಟ್ಟುಕೊಳ್ಳಲಾಗಿದೆ.
70 ಸಾವಿರ ವರ್ಷಗಳ ಹಿಂದೆಯೇ ಮಾನವನ ಉಗಮವಾಯಿತು ಎಂಬುದನ್ನೇ ಇಟ್ಟುಕೊಂಡು ಮುಂದಕ್ಕೆ ಹೋದಾಗ ಕಂಡಿದ್ದು ಅಚ್ಚರಿಯ ಸತ್ಯ. ನಮಗೆಲ್ಲ ಗೊತ್ತಿರುವ ಹಾಗೆ ಈಗ ಮಹಿಳೆಯಲ್ಲಿರುವುದು ಎರಡು ವಂಶಸ್ಥ ಸಂತತಿ. ಅದೆಂದರೆ ಎಲ್ 0 ಮತ್ತು ಎಲ್ 1,2,3,4,5,6. ಅಂತಿಮವಾಗಿ ಇದು ಎಲ್ 3ಕ್ಕೆ ಏರಿಕೆಯಾಯಿತು. ಹಿಂದೆ ಕೂಡ ಇದೇ ರೀತಿ ಎಂಬುದು ಡಿಎನ್‌ಎ ಕಂಡುಕೊಂಡ ಸತ್ಯ.
ಪೂರ್ವಜರು
ಮಾನವನ ಉಗಮವಾದ ಮೇಲೆ ಆತ ಒಂದೇ ಕಡೆ ನಿಲ್ಲಲಿಲ್ಲ ಎಂಬುದು ಬೇರೆ ಮಾತು. ಹ್ಯಾಪ್ಲೋಗ್ರಾಫ್ ಅನ್ನೇ ಅಧ್ಯಯನಿಸಿ ಹೇಳುವುದಾದರೆ ಆತ ಕೆಲಸಕ್ಕಾಗಿಯೋ ಅಥವಾ ಇನ್ನಾವ ಕಾರಣಕ್ಕಾಗಿಯೋ ಒಂದೆಡೆಯಿಂದ ಬೇರೆಡೆಗೆ ವಲಸೆ ಹೋಗಲು ಆರಂಭಿಸಿದ. ಇದು ನೂರಾರು ವರ್ಷಗಳ ಹಿಂದೆಯೇ ಆರಂಭವಾಯಿತು. ನಮ್ಮ ಹಿಂದಿನ ಆರು ಪೀಳಿಗೆಯನ್ನೇ ಲೆಕ್ಕಕ್ಕಿಟ್ಟುಕೊಂಡರೆ ಒಂದು ದೇಶದ ಜನಕ್ಕೂ ಇನ್ನೊಂದು ದೇಶದ ಜನಕ್ಕೂ ಒಂದಲ್ಲಾ ಒಂದು ರೀತಿಯಲ್ಲಿ ಸಾಮ್ಯತೆ, ಸಂಬಂಧವಿರುವುದು ಕಂಡುಬರುತ್ತದೆ.
ಒಟ್ಟಾರೆಯಾಗಿ ನ್ಯಾಷನಲ್ ಜಿಯೋಗ್ರಾಫಿಕ್‌ನ ವಿಶ್ಲೇಷಣೆಯನ್ನೇ ತೆಗೆದುಕೊಂಡರೆ, 9 ಪ್ರಾದೇಶಿಕ ಗುಂಪುಗಳಾಗಿ ವಿಭಜಿಸಿ ಹೇಳಬಹುದು. ನೇಟಿವ್ ಅಮೆರಿಕನ್, ನಾರ್ಥ್‌ಈಸ್ಟ್ ಏಷಿಯನ್, ಸೌತ್ ವೆಸ್ಟ್ ಏಷಿಯನ್, ಸೌತ್‌ಈಸ್ಟ್ ಏಷಿಯನ್, ನಾರ್ಥನ್ ಯುರೋಪಿಯನ್, ಮೆಡಿಟೇರಿನಿಯನ್, ಓಷಿಯಾನಿಕ್, ಸದರ್ನ್ ಆಫ್ರಿಕ ಮತ್ತು ಸಬ್ ಸಹರಾನ್ ಆಫ್ರಿಕನ್ ಎಂದು ಹೇಳಬಹುದು.
ಮಾನವವಂಶಿ ಬಗ್ಗೆ ಇರುವ ಜಿಜ್ಞಾಸೆಯೆಂದರೆ ನಾವೆಲ್ಲಾ ಯಾವ ಡಿಎನ್‌ಎಗೆ ಸೇರಿದ್ದೇವೆ ಎಂಬುದಾಗಿದೆ. ಇದನ್ನು ನಿರ್ಧರಿಸುವುದು ನಿಯಾಂಡರ್ಥಲ್ ಮತ್ತು ಡೆನಿಸೋವನ್ ಎಂಬುದು. ನಮಗೆ ನಿಯಾಂಡರ್ಥಲ್ ಗೊತ್ತು. ಇಂದಿಗೂ ಗುಹೆಗಳಲ್ಲಿ ವಾಸಿಸುತ್ತಿರುವ ಮಾನವರ ಬಗ್ಗೆ ಗೊತ್ತಾಗುತ್ತಲೇ ಇದೆ. 2008ರಲ್ಲಿ ಸೈಬೀರಿಯಾ ದೇಶದ ಗುಹೆಯೊಂದರಲ್ಲಿ ಸಿಕ್ಕ ಪಿಂಕ್ ಬಣ್ಣದ ಮೂಳೆ ಮತ್ತು ಹಲ್ಲನ್ನು ಡಿಎನ್‌ಎ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಅಲ್ಲಿವರೆಗೆ ನಾವು ನಿಯಾಂಡರ್ಥಲ್ ಬಗ್ಗೆಯಷ್ಟೇ ಕೇಳಿದ್ದೇವು. ಆದರೆ 400,000 ವರ್ಷಗಳ ನಂತರ ಇನ್ನೊಂದು ಸಂತತಿಯೂ ಇದೆ ಎಂಬುದು ಗೊತ್ತಾಯಿತು. ಈ ಪಳಿಯುಳಿಕೆಗಳ ಡಿಎನ್‌ಎ ಬೇರೆಯಾದ್ದರಿಂದ ಇದಕ್ಕೆ ಡೆನಿಸೋವನ್ ಎಂದು ಹೆಸರಿಡಲಾಯಿತು.
ಸಂಶೋಧಕರ ಪ್ರಕಾರ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನ ನಿಯಾಂಡರ್ಥಲ್‌ನ ಏಷಿಯನ್ ಬ್ರಾಂಚ್‌ನ ಜನರಿರಬೇಕು, ಇವರು ಆಫ್ರಿಕದಿಂದ ಬೇರೆಯಾಗಿ ಹೋಗಿದ್ದಾರೆ. ಇದರ ಆಧಾರದ ಮೇಲೆಯೇ ಇಂದು ನಾವೆಲ್ಲಾ ಯಾವ ಭಾಗಕ್ಕೆ ಸೇರಿದವರು ಮತ್ತು ಯಾವ ಸಂತತಿಗೆ ಸೇರಿದವರು ಎಂಬ ಬಗ್ಗೆ ವಿಶ್ಲೇಷಿಸಲಾಗುತ್ತಿದೆ. ಈ ಸಂಶೋಧನೆಯ ಮೇಲ್ವಿಚಾರಕ ವೆಲ್ಸ್ ಹೇಳುವ ಪ್ರಕಾರ, ಅವರದ್ದು ಶೇ.2ರಷ್ಟು ನಿಯಾಂಡರ್ಥಲ್ ಮತ್ತು ಶೇ.1.9ರಷ್ಟು ಡೆನಿಸೋವನ್ ಸಂತತಿಯಾಗಿದೆಯಂತೆ.
ಏನೇ ಆಗಲಿ, ಇದು ಸರಳವಾಗಿ ಅರ್ಥವಾಗಿ ವಿಷಯವಲ್ಲ ಎಂದಿರುವ ವೆಲ್ಸ್ ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು ಎನ್ನುತ್ತಾರೆ. ಆ ಬಳಿಕವಷ್ಟೇ ನಾವು ಎಲ್ಲಿಯವರು, ಎಲ್ಲಿಂದ ವಲಸೆ ಬಂದಿದ್ದೇವೆ ಅಥವಾ ನಮ್ಮ ಪೂರ್ವಜರು ಯಾರು ಎಂಬ ಬಗ್ಗೆ ಗೊತ್ತಾಗುತ್ತದೆ ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!