ವಿಜ್ಞಾನ-ತಂತ್ರಜ್ಞಾನ

ಇರುವೆ ಅರಿವು

ಮನೆಯ ಮೂಲೆಯಲ್ಲೆಲ್ಲೋ ಸರತಿ ಸಾಲಿನಲ್ಲಿ ಸಾಗುತ್ತಿರುವ, ತಮಗಿಂತ ದೊಡ್ಡ ಹೊರೆ ಹೊತ್ತುಕೊಂಡು ದಿಣ್ಣೆಗಳತ್ತ...

ಮನೆಯ ಮೂಲೆಯಲ್ಲೆಲ್ಲೋ ಸರತಿ ಸಾಲಿನಲ್ಲಿ ಸಾಗುತ್ತಿರುವ, ತಮಗಿಂತ ದೊಡ್ಡ ಹೊರೆ ಹೊತ್ತುಕೊಂಡು ದಿಣ್ಣೆಗಳತ್ತ ಮೆರವಣಿಗೆ ಹೊರಟಿರುವ, ಏನೋ ಸಾಧನೆ ಮಾಡುವಂತೆ ಮರ ಹತ್ತುತ್ತಿರುವ ಇರುವೆಗಳನ್ನು ನೋಡಿದರೆ ಏನನಿಸುತ್ತದೆ ಎಂಬ ಪ್ರಶ್ನೆ ಯಾರನ್ನಾದರೂ ಕೇಳಿ ನೋಡಿ.
'ಅವುಗಳ ಶಿಸ್ತನ್ನು ನೋಡಿ ನಾವೂ ಕಲೀಬೇಕು' ಎಂಬ ಉತ್ತರ ಬರುತ್ತದೆ ಅಷ್ಟೆ. ಆದರೆ, ನೋಡಲು ಅಷ್ಟು ಚಿಕ್ಕದಾಗಿರುವ ಪ್ರಾಣಿ ನಾವಂದುಕೊಂಡಷ್ಟು ಕೇವಲವಲ್ಲ. ಭೂತಾಯಿಯು ಒಮ್ಮೆ ಕಂಪಿಸಿದರೆ ನಮ್ಮಂಥ ಎಷ್ಟೋ ಮನುಷ್ಯರು ಪ್ರಾಣ ಕಳೆದುಕೊಳ್ಳುತ್ತಾರೆ, ನಾವು ನಿರ್ಮಿಸಿರುವ ಕಾಂಕ್ರೀಟ್ ಕಾಡುಗಳು ನೆಲಸಮವಾಗುತ್ತವೆ. ಆದರೆ, ಭೂಮಿ ಕಂಪಿಸುವ ಮೊದಲೇ ಈ ಪುಟ್ಟ ಇರುವೆಗಳು ಅದನ್ನು ಗ್ರಹಿಸುತ್ತವೆ ಎಂದರೆ ನೀವು ನಂಬುತ್ತೀರಾ?
ಭೂಕಂಪವಾಗೋ ಮೊದಲೇ...
ನಂಬಲೇಬೇಕು. ಜರ್ಮನಿಯಲ್ಲಿ ಕೆಂಪಿರುವೆಗಳನ್ನು ಬಳಸಿ ನಡೆಸಿದ ಅಧ್ಯಯನದಿಂದ ಈ ವಿಷಯ ತಿಳಿದುಬಂದಿದೆ. ಡ್ಯೂಸ್‌ಬರ್ಗ್- ಎಸ್ಸೆನ್ ವಿವಿಯ ಸಂಶೋಧಕರು ಇರುವೆಗಳ ಭೂಕಂಪ ಗ್ರಹಣ ಸಾಮರ್ಥ್ಯವನ್ನು ಕಂಡುಹಿಡಿದಿದ್ದಾರೆ. ಭೂತಾಯಿಯು ಇನ್ನೇನು ಕಂಪಿಸುತ್ತಾಳೆ ಎಂಬುದು ಅರಿವಿಗೆ ಬಂದೊಡನೆ ಈ ಕೆಂಪಿರುವೆಗಳ ವರ್ತನೆಯಲ್ಲೇ ಬದಲಾವಣೆಯಾಗುತ್ತಂತೆ.

ಏನು ಮಾಡುತ್ತವೆ?
ರಿಕ್ಟರ್ ಮಾಪಕದಲ್ಲಿ 2.0ಗಿಂತ ಹೆಚ್ಚು ತೀವ್ರತೆಯ ಭೂಕಂಪ ಸಂಭವಿಸುವ ಮುನ್ನವೇ ಈ ಇರುವೆಗಳಿಗೆ ವಿಷಯ ಅರಿವಾಗುತ್ತದೆ. ಇಂಥದ್ದೇ ಪ್ರದೇಶದಲ್ಲಿ ಭೂಮಿ ಬಿರುಕು ಬಿಡಲಿದೆ ಎಂದು ಗೊತ್ತಾದೊಡನೆ ಅವುಗಳು ಸಕ್ರಿಯ ಸ್ತರಗಳತ್ತ ಚಲಿಸಲಾರಂಭಿಸುತ್ತವೆ. ಯಾವಾಗಲೂ ತಮ್ಮ ದೈನಂದಿನ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿ ದಿಬ್ಬಗಳಿಗೆ ಸಾಗುವ ಇರುವೆಗಳು ಭೂಕಂಪ ಸಂಭವಿಸುವ ಮುನ್ನ ವಿಚಿತ್ರವಾಗಿ ವರ್ತಿಸುತ್ತವೆ. ಎಲ್ಲವೂ ಅಲರ್ಟ್ ಆಗಿರುತ್ತವೆ. ರಾತ್ರಿ ವೇಳೆ ತಮ್ಮ ದಿಬ್ಬಗಳಿಂದ ಹೊರಗೇ ಇರುತ್ತವೆ.

ಹೇಗೆ ಸಾಧ್ಯ?
ಅನಿಲಗಳ ಹೊರಸೂಸುವಿಕೆಯಲ್ಲಾಗುವ ಬದಲಾವಣೆಗಳು ಹಾಗೂ ಭೂಮಿಯ ಕಾಂತಕ್ಷೇತ್ರದಲ್ಲಿನ ರೂಪಾಂತರವನ್ನು ಗ್ರಹಿಸಲು ಇರುವೆಗಳಿಗೆ ಸಾಧ್ಯ. ಈ ಮೂಲಕ ಅವುಗಳು ಭೂಕಂಪವನ್ನು ಮೊದಲೇ ಊಹಿಸಬಲ್ಲವು. ಆದರೆ, ಮಾನವನಿಗೆ ಅತ್ಯಲ್ಪ ಎನ್ನುವ 2.0 ಗಿಂತಲೂ ಕಡಿಮೆ ಪ್ರಮಾಣದ ಕಂಪನವು ಅವುಗಳ ಅರಿವಿಗೆ ಬರುವುದಿಲ್ಲ. 2.0ಗಿಂತ ಹೆಚ್ಚಿನದನ್ನು ಗ್ರಹಿಸುವ ಸಾಮರ್ಥ್ಯ ಅವುಗಳಿಗಿವೆ ಎನ್ನುತ್ತಾರೆ ಸಂಶೋಧಕ ಗ್ಯಾಬ್ರಿಯಲ್ ಬರ್ಬೆರಿಕ್. ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಪ್ರಾಣಿಗಳಿಗೆ ಮೊದಲ ಸಿಗ್ನಲ್
ಪ್ರಾಕೃತಿಕ ವಿಕೋಪಗಳು ಸಂಭವಿಸುವ ಮುನ್ನ ಪ್ರಾಣಿಗಳಿಗೆ ಆ ಬಗ್ಗೆ ಅರಿವಾಗುತ್ತದೆ ಎಂಬ ವಾದ ಈ ಹಿಂದಿನಿಂದಲೂ ಕೇಳಿಬಂದಿವೆ. ಪ್ರಾಕೃತಿಕ ವಿಕೋಪವು ಒಂದು ಪ್ರದೇಶವನ್ನು ಸಂಪೂರ್ಣ ನಾಶಮಾಡುವ ಮೊದಲೇ ಅಲ್ಲಿದ್ದ ಇಲಿಗಳು, ಹಾವುಗಳು ಸೇರಿದಂತೆ ಅನೇಕ ಪ್ರಾಣಿಗಳು ಅಲ್ಲಿಂದ ಕಾಲ್ಕಿತ್ತಿದ್ದವು ಎಂದು ಕ್ರಿ.ಪೂ. 373ರಲ್ಲೇ ಇತಿಹಾಸಕಾರರು ದಾಖಲಿಸಿದ್ದಾರೆ. ಇನ್ನೇನು ಕೆಲವೇ ನಿಮಿಷಗಳಲ್ಲಿ ಭೂಮಿ ಕಂಪಿಸುತ್ತದೆ ಎಂದಿದ್ದರೆ ಕ್ಯಾಟ್‌ಫಿಶ್ ಆಕ್ರಮಣಕಾರಿಯಾಗಿ ಅತ್ತಿತ್ತ ಚಲಿಸಲಾರಂಭಿಸುತ್ತದೆ, ಕೋಳಿಗಳು ಮೊಟ್ಟೆ ಇಡುವುದಿಲ್ಲ, ಜೇನ್ನೊಣಗಳು ತಮ್ಮ ಜೇನುಗೂಡನ್ನು ಬಿಟ್ಟು ಪರಾರಿಯಾಗುತ್ತವೆ, ಬೆಕ್ಕು, ನಾಯಿಗಳು ವಿಚಿತ್ರವಾಗಿ ವರ್ತಿಸಲಾರಂಭಿಸುತ್ತವೆ, ಕಾರಣವಿಲ್ಲದೇ ಬೊಗಳಲು, ಕೂಗಲು ಆರಂಭಿಸುತ್ತವೆ ಎನ್ನುವುದಕ್ಕೆ ಹಲವು ಸಾಕ್ಷಿಗಳೂ ದೊರೆತಿವೆ. ಒಟ್ಟಾರೆಯಾಗಿ ಭೂಮಿಯಿಂದ ಬಿಡುಗಡೆಯಾಗುವ ಅನಿಲ ಹಾಗೂ ಗಾಳಿಯಲ್ಲಿನ ಎಲೆಕ್ಟ್ರಿಕಲ್ ಬದಲಾವಣೆಯನ್ನು ಗ್ರಹಿಸುವ ಶಕ್ತಿ ಪ್ರಾಣಿಗಳಿಗಿರುತ್ತವೆ. ಹಾಗಾಗಿಯೇ ಅವುಗಳಿಗೆ ಪ್ರಾಕೃತಿಕ ವಿಕೋಪದ ಅರಿವಾಗುತ್ತದಂತೆ.

- ದಿಯಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ