ವಿಜ್ಞಾನ-ತಂತ್ರಜ್ಞಾನ

ಜಮಾನಾ ಬದಲ್ ಗಯಾ

ಟು ಇನ್ ವನ್, ತ್ರೀ ಇನ್ ವನ್‌ಗಳ ಕಾಲ ಯಾವತ್ತೋ ಮುಗೀತು. ಮತಾಂತರ ವಿವಾದ, ಕುಲಾಂತರಿ ತಳಿಗಳ ನಡುವೆ ಕಂಪ್ಯೂಟರ್‌ಗಳಲ್ಲೂ ರೂಪಾಂತರಿಗಳ ಕಾಲ.

ಟು ಇನ್ ವನ್, ತ್ರೀ ಇನ್ ವನ್‌ಗಳ ಕಾಲ ಯಾವತ್ತೋ ಮುಗೀತು. ಈಗ ಆಲ್ ಇನ್ ವನ್‌ಗಳ ಕಾಲ. ಮತಾಂತರ ವಿವಾದ, ಕುಲಾಂತರಿ ತಳಿಗಳ ನಡುವೆ ಕಂಪ್ಯೂಟರ್‌ಗಳಲ್ಲೂ ರೂಪಾಂತರಿಗಳ ಕಾಲ.
ಅವು ಡೆಸ್ಕ್‌ಟಾಪಾ? ಹೌದು. ಲ್ಯಾಪ್‌ಟಾಪಾ? ಹೌದು. ಟ್ಯಾಬ್ಲೆಟ್ಟಾ? ಅದೂ ಹೌದು. ಟೇಬಲ್ ಮೇಲೆ ಸ್ಟ್ಯಾಂಡ್ ಅಳವಡಿಸಿಟ್ಟರೆ ಡೆಸ್ಕ್‌ಟಾಪ್. ತೊಡೆ ಮೇಲಿಟ್ಟುಕೊಂಡರೆ ಲ್ಯಾಪ್‌ಟಾಪ್. ಕೈಯಲ್ಲಿ ಹಿಡಿದುಕೊಂಡರೆ ಟ್ಯಾಬ್ಲೆಟ್! ಇದರಲ್ಲಿ ಡೆಸ್ಕ್‌ಟಾಪ್‌ನ ಗಾತ್ರವಿದೆ. ಲ್ಯಾಪ್‌ಟಾಪ್‌ನ ಮೊಬಿಲಿಟಿ (ಬೇಕಾದಲ್ಲಿ ತೆಗೆದುಕೊಂಡು ಹೋಗುವ) ಅನುಕೂಲವಿದೆ. ಟ್ಯಾಬ್ಲೆಟ್‌ನಂತೆ ಟಚ್ ಸೌಲಭ್ಯವೂ ಇದೆ.
ಡೆಸ್ಕ್‌ಟಾಪ್‌ಗಳಂತೆ ವಿದ್ಯುತ್ ಸಂಪರ್ಕದೊಂದಿಗೂ ಬಳಸಬಹುದು. ಇಲ್ಲವೇ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ರೀತಿಯಲ್ಲಿ ಬ್ಯಾಟರಿ ಮೂಲಕವೂ ಬಳಸಬಹುದು. ಇದರಲ್ಲಿರುವ ಬ್ಯಾಟರಿ 2-3 ತಾಸು ಬಾಳಿಕೆ ಬರುತ್ತದೆ ಅಷ್ಟೇ.
ಸೋನಿ, ಲೆನೊವೊ ಸಂಸ್ಥೆಗಳು ಇಂತಹ ರೂಪಾಂತರಿ ಮಾಡೆಲ್ ಕಂಪ್ಯೂಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ನೋಡೇಬಿಡೋಣ ಅಂತ ಅಂಗಡಿ ಹುಡುಕಿ ಹೊರಟುಬಿಡಬೇಡಿ. ಯಾಕೆಂದರೆ ಇವಿನ್ನೂ ಭಾರತದ ಮಾರುಕಟ್ಟೆಗೆ ಬಂದಿಲ್ಲ. ಡೆಲ್ ಮತ್ತು ಸ್ಯಾಮಸಂಗ್ ಸಂಸ್ಥೆಗಳು ಟ್ಯಾಬ್ಲೆಟ್ ಆಗಿ ಬದಲಾಗುವಂಥಹ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಆಸಸ್ ಕಂಪನಿ ಇವರೆಲ್ಲಗಿಂತ ಒಂದು ಹೆಜ್ಜೆ ಮುಂದೆ ಹೋಗಿ, ಡೆಸ್ಕ್‌ಟಾಪ್ ಸ್ಟ್ಯಾಂಡ್‌ಗೆ ಅಳವಡಿಸಿದಾಗ ವಿಂಡೋಸ್ 8 ಮೂಲಕ ಕೆಲಸ ಮಾಡುವ ಹಾಗೂ ಸ್ಟ್ಯಾಂಡ್‌ನಿಂದ ತೆಗೆದು ಟ್ಯಾಬ್ಲೆಟ್ ರೀತಿಯಲ್ಲಿ ಬಳಸುವಾಗ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುವಂತಹ ರೂಪಾಂತರಿ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.
ಆ್ಯಕ್ಸೆಂಚರ್ ಕಂಪನಿ ನಡೆಸಿರುವ ಸಮೀಕ್ಷೆಯಲ್ಲಿ ಜನ ಈ ರೀತಿಯ ರೂಪಾಂತರಿ ಅಥವಾ ಬಹೂಪಯೋಗಿ ಸಾಧನಗಳನ್ನೇ ಹೆಚ್ಚು ಇಷ್ಟಪಡುತ್ತಾರೆ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಸರಿಯಾಗಿ ವಿಶ್ವದಾದ್ಯಂತ ಡೆಸ್ಕ್‌ಟಾಪ್‌ಗಳ ಮಾರುಕಟ್ಟೆ ಕುಸಿದಿದೆ. ಇದೇ ಸಂದರ್ಭದಲ್ಲಿ ಟ್ಯಾಬ್ಲೆಟ್ ಮಾರುಕಟ್ಟೆ ಭರ್ಜರಿ ವಿಸ್ತರಿಸಿದೆ. ಹೀಗಾಗಿ ಡೆಸ್ಕ್‌ಟಾಪ್‌ಗಳ ವ್ಯಾಪಾರ ಕುಸಿತಕ್ಕೆ ಟ್ಯಾಬ್ಲೆಟ್‌ಗಳೇ ಕಾರಣ ಎಂದೂ ಕಂಪನಿಗಳು ಅಂದಾಜಿಸುತ್ತಿವೆ. ಆದ್ದರಿಂದ ಮಾರುಕಟ್ಟೆ ವಿಸ್ತರಿಸಬೇಕು ಎಂದರೆ ರೂಪಾಂತರಿಗಳೇ ಏಕೈಕ ದಾರಿ ಎಂದು ಕಂಪ್ಯೂಟರ್ ಉತ್ಪಾದಕ ಕಂಪನಿಗಳು ತೀರ್ಮಾನಿಸಿವೆ. ಹೀಗಾಗಿ ಇನ್ನೇನಿದ್ದರೂ ಇನ್ನು ರೂಪಾಂತರಿಗಳ ಯುಗ.
ಒಂದೇ ಒಂದು ಸಂಗತಿಯೆಂದರೆ ಅವುಗಳ ನೆನಪಿನ ಶಕ್ತಿ ಅಥವಾ ಮಾಹಿತಿ ಸಂಗ್ರಹಣಾ ಸಾಮರ್ಥ್ಯ ಕಡಿಮೆ. ಆದರೆ ಎಕ್ಸಟರ್ನಲ್ ಹಾರ್ಡ್‌ಡ್ರೈವ್‌ಗಳನ್ನು ಅಳವಡಿಸಿಕೊಳ್ಳಬಹುದು. ಇದರ ಬಿಡುಗಡೆಯ ನಂತರ ಇದಕ್ಕಿಂತ ದೊಡ್ಡ ಟಚ್‌ಸ್ಕ್ರೀನ್ ಹೊಂದಿರುವ (39 ಇಂಚು) 'ಗಾಮಾ' ಎಂಬ ರೂಪಾಂತರಿಯನ್ನು ಬಿಡಲೂ ಲೆನೊವೊ ಸಿದ್ಧತೆ ನಡೆಸಿದೆ.

ಲೆನೊವೊ ಹಾರಿಜಾನ್
ಕಂಪ್ಯೂಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ಟಚ್ ಸ್ಕ್ರೀನ್ ಡೆಸ್ಕ್‌ಟಾಪ್‌ಗಳ ಆಕರ್ಷಕ ಮಾದರಿಯನ್ನು ಇತರರಿಗಿಂತ ಮೊದಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಲೆನೊವೊ ಸಂಸ್ಥೆ, ಲೆನೊವೊ ಹಾರಿಜಾನ್ ಎಂಬ ಟಚ್‌ಸ್ಕ್ರೀನ್ ರೂಪಾಂತರಿಯನ್ನು ಬಿಡುಗಡೆ ಮಾಡಿದೆ. ಎಷ್ಟರಮಟ್ಟಿಗೆ ಎಂದರೆ ಇದನ್ನು ನೆಲದ ಮೇಲಿಟ್ಟುಕೊಂಡು ನೀವು ಆಟವಾಡಬಹುದು ಎಂಬಷ್ಟರಮಟ್ಟಿಗೆ! ಇದಕ್ಕಾಗಿಯೇ ಸಂಸ್ಥೆ ಇ-ಡಯಸ್ ಮತ್ತು 4 ಜಾಯ್‌ಸ್ಟಿಕ್‌ಗಳನ್ನು ಇದರ ಜತೆ ನೀಡುತ್ತಿದೆ!

ಸೋನಿ ಟ್ಯಾಪ್ 20
ಸೋನಿ ತನ್ನ ಟ್ಯಾಪ್ 20 ಕಂಪ್ಯೂಟರನ್ನು ಅಮೆರಿಕ ಮಾರುಕಟ್ಟೆಗೆ ಪರಿಚಯಿಸಿದೆ. ಹೆಸರೇ ಸೂಚಿಸುವಂತೆ ಸ್ಕ್ರೀನ್ ಗಾತ್ರ 20 ಇಂಚು. ಇಂಟೆಲ್ ಐ3ನಿಂದ ಐ7ವರೆಗಿನ ಪ್ರೊಸೆಸರ್ ಜತೆಗೆ ಬೇರೆ ಬೇರೆ ಮಾದರಿಗಳಲ್ಲಿ ಕಂಪ್ಯೂಟರ್ ಲಭ್ಯವಿದೆ. ಟಚ್‌ಸ್ಕ್ರೀನ್ ಗಾತ್ರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.
ಇದರಲ್ಲಿ 5000 ಎಂಎಎಚ್ ಬ್ಯಾಟರಿ ಕೂಡ ಇದೆ. ಇದರ ಸಹಾಯದಿಂದ ವಿದ್ಯುತ್ ಸಂಪರ್ಕ ಇಲ್ಲದೆಯೂ 2 ತಾಸು ಕಾಲ ಇದನ್ನು ಬಳಸಲು ಸಾಧ್ಯವಾಗುತ್ತದೆ.

ಆಸಸ್ ಟ್ರಾನ್ಸ್‌ಫಾರ್ಮರ್
ಇದೇ ಮೊದಲ ಬಾರಿಗೆ ಆವಿಷ್ಕಾರದಲ್ಲಿ ಆಸಸ್ ಸಂಸ್ಥೆ ಉಳಿದ ಸಂಸ್ಥೆಗಳನ್ನು ಹಿಂದಿಕ್ಕಿ, ಅಚ್ಚರಿಯ ಉತ್ಪನ್ನವೊಂದನ್ನು ಮಾರುಕಟ್ಟೆಗೆ ಪರಿಚಯಸಲು ಸಿದ್ಧವಾಗಿದೆ. 18 ಇಂಚು ಟಚ್‌ಸ್ಕ್ರೀನ್ ಹೊಂದಿರುವ ಈ ಸಾಧನ, ಡೆಸ್ಕ್‌ಟಾಪ್ ಸ್ಟ್ಯಾಂಡ್‌ಗೆ ಅಳವಡಿಸಲಾಗಿರುವ ಡಾಕ್‌ಗೆ ಈ ಸ್ಕ್ರೀನನ್ನು ಅಳವಡಿಸಿದರೆ, ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಮೂಲಕ ಕೆಲಸ ಮಾಡುತ್ತದೆ. ಡಾಕ್‌ನಿಂದ ತೆಗೆದು ಸ್ಕ್ರೀನನ್ನು ಕೇವಲ ಟ್ಯಾಬ್ಲೆಟ್ ರೀತಿಯಲ್ಲಿ ಬಳಸುವಾಗ ಆಂಡ್ರಾಯ್ಡ್ ಮೂಲಕ ಕಾರ್ಯನಿರ್ವಹಿಸುವ ಸಾಮರ್ಥ್ಯವೂ ಇದಕ್ಕಿದೆ.
ಟ್ಯಾಬ್ಲೆಟ್ ಕಾರ್ಯನಿರ್ವಹಣೆಗೆ ಟೆಗ್ರಾ 3 ಪ್ರೊಸೆಸರ್ ಅಳವಡಿಸಿದ್ದರೆ, ವಿಂಡೋಸ್ 8 ನಿರ್ವಹಣೆಗೆ ಇಂಟೆಲ್ ಐ5-7 ಪ್ರೊಸೆಸರ್ ಅಳವಡಿಸಲಾಗಿದೆ. ಟ್ಯಾಬ್ಲೆಟ್‌ಗೆ 16 ಜಿಬಿ ಸಂಗ್ರಹಣಾ ಸಾಮರ್ಥ್ಯವಿದ್ದು, ಕಂಪ್ಯೂಟರ್‌ಗೆ 1ಟಿಬಿ ಸಂಗ್ರಹಣಾ ಸಾಮರ್ಥ್ಯವಿದೆ.

-ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!