ವಿಜ್ಞಾನ-ತಂತ್ರಜ್ಞಾನ

ಮೈಕ್ರೋಸಾಫ್ಟ್ ಜಾಣನಡೆ

ಆ್ಯಪಲ್ ಸಂಸ್ಥೆ ಗೂಗಲ್‌ನೊಂದಿಗೆ ಕಿತ್ತಾಟಕ್ಕೆ ಇಳಿದ್ದರೆ, ಇತ್ತ ವಿಂಡೋಸ್ ಸಂಸ್ಥೆ ಕೇವಲ ಒಂದು ಮನವಿ ಪತ್ರದ ಮೂಲಕ ಗೂಗಲ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ವಿಂಡೋಸ್ 8 ಆಪರೇಟಿಂಗ್ ಸಿಸ್ಟಂನಲ್ಲಿ ಆ್ಯಕ್ಟೀವ್ ಸಿಂಕ್ ಎಂಬ ಆಯ್ಕೆಯಿದೆ. ಇದರ ಮೂಲಕ ವಿಂಡೋಸ್ 8 ಬಳಕೆದಾರರು ಜಿಮೇಲ್‌ಗೆ ಬರುವ ಮೇಲ್‌ಗಳನ್ನು ಪಡೆಯಬಹುದಿತ್ತು. ಆದರೆ ಈ ಆ್ಯಕ್ಟೀವ್ ಸಿಂಕ್ ಬೆಂಬಲವನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ಹೇಳಿತ್ತು. ಹಾಗೆಯೇ ವಿಂಡೋಸ್ 8 ಗಾಗಿ ಪ್ರತ್ಯೇಕ ಜಿಮೇಲ್ ಅಪ್ಲಿಕೇಶನ್ ಕೂಡ ನಿರ್ಮಿಸುವುದಿಲ್ಲ ಎಂದು ಗೂಗಲ್ ಹೇಳಿತ್ತು. ಇದು ವಿಂಡೋಸ್ 8 ಕಂಪ್ಯೂಟರ್ ಮತ್ತು ಮೊಬೈಲ್ ಹೊಂದಿರುವ ಜಿಮೇಲ್ ಗ್ರಾಹಕರಿಗೆ ಆತಂಕ ಸೃಷ್ಟಿಸಿತ್ತು. ಪ್ರತ್ಯೇಕ ಜಿಮೇಲ್ ಅಪ್ಲಿಕೇಶನ್ ಲಭ್ಯವಿರುವುದರಿಂದ ಆ್ಯಪಲ್ ಗ್ರಾಹಕರಿಗೆ ಇದರಿಂದ ಯಾವ ತೊಂದರೆಯೂ ಇರಲಿಲ್ಲ.
ಆದರೆ ಆ್ಯಕ್ಟೀವ್ ಸಿಂಕ್ ವ್ಯವಸ್ಥೆಯನ್ನು ಕೊಂಚ ದಿನ ಮುಂದುವರಿಸುವಂತೆ ಮೈಕ್ರೋಸಾಫ್ಟ್ ಸಂಸ್ಥೆ ಗೂಗಲ್‌ಗೆ ಪತ್ರ ಬರೆದಿತ್ತು. ಈ ಪತ್ರವನ್ನು ಗೌರವಿಸುವುದಾಗಿ ಹೇಳಿರುವ ಗೂಗಲ್, ಆ್ಯಕ್ಟೀವ್ ಸಿಂಕ್‌ಗೆ ನೀಡುವ ಬೆಂಬಲವನ್ನು ಸ್ವಲ್ಪ ಸಮಯದವರೆಗೆ ಮುಂದುವರಿಸುವುದಾಗಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ