ವಿಜ್ಞಾನ-ತಂತ್ರಜ್ಞಾನ

ಯುಟ್ಯೂಬ್‌ಗೆ ಆ್ಯಪಲ್ ಕಿಕ್!

ಮೊಬೈಲ್‌ಗಳ ರಾಜ ಎನಿಸಿಕೊಂಡಿದ್ದ ಆ್ಯಪಲ್ ಕಂಪನಿ ಸದಾ ಕಿತ್ತಾಟದಲ್ಲೇ ನಿರತವಾಗಿದೆ. ಸ್ಯಾಮ್‌ಸಂಗ್‌ನೊಂದಿಗಿನ ಅದರ ಜಗಳ ಜಗತ್ತಿಗೇ ಗೊತ್ತು. ಗೂಗಲ್ ಸಂಸ್ಥೆಯನ್ನು ಕೂಡ ಆ್ಯಪಲ್ ತನ್ನ ವೈರಿ ಎಂದೇ ಪರಿಗಣಿಸಿದೆ.
ಈ ಹಿಂದೆ ಗೂಗಲ್ ಮ್ಯಾಪನ್ನು ಫೋನ್ ಮತ್ತು ಆ್ಯಪಲ್ ಅಪ್ಲಿಕೇಶನ್ ಸ್ಟೋರ್‌ನಿಂದ ಹೊರಗಿಡಲಾಗಿತ್ತು. ಆ್ಯಪಲ್ ಮ್ಯಾಪ್ ಅಟ್ಟರ್‌ಫ್ಲಾಪ್ ಆಗಿತ್ತು. ಅಂತಿಮವಾಗಿ ಸಂಸ್ಥೆಯ ಸಿಇಒ ಅವರೇ ಗೂಗಲ್ ಅಥವಾ ನೋಕಿಯಾ ಮ್ಯಾಪ್ ಬಳಸಿ ಎಂದು ಬಹಿರಂಗ ಹೇಳಿಕೆ ಕೊಡಬೇಕಾಯಿತು.
ಈಗ ಆ್ಯಪಲ್ ಕಣ್ಣು ಗೂಗಲ್ ಮಾಲೀಕತ್ವದ ಯುಟ್ಯೂಬ್ ಮೇಲೆ. ಆ್ಯಪಲ್ ಸ್ಟೋರ್‌ನಿಂದ ಯುಟ್ಯೂಬ್ ಸದ್ಯದಲ್ಲೇ ಹೊರಬೀಳಲಿದೆ ಎಂಬ ಸುದ್ದಿ ಹಬ್ಬಿದೆ. ವೈರಿ ಕಂಪನಿಯ ಅಪ್ಲಿಕೇಶನ್‌ಗಳನ್ನು ಹೊರಗಿಡಲು ಈ ನಿರ್ಧಾರ. ಮ್ಯಾಪ್ ಅಪ್ಲಿಕೇಶನ್ ವಿಷಯದಲ್ಲಾದಂತೆ ಆ್ಯಪಲ್ ಸಂಸ್ಥೆ ಗ್ರಾಹಕರು, ಅಭಿಮಾನಿಗಳಿಂದ ಟೀಕೆಗೆ ಗುರಿಯಾಗುವ ಸಾಧ್ಯತೆಯಿದೆ. ಯಾಕೆಂದರೆ ಯುಟ್ಯೂಬ್‌ಗೆ ಸರಿಸಮನಾಗಿ ನಿಲ್ಲಬಲ್ಲಂಥಹ ಇನ್ನೊಂದು ಅಪ್ಲಿಕೇಶನ್ ಆ್ಯಪಲ್ ಸ್ಟೋರ್‌ನಲ್ಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!