ಸಿನಿಮಾ ಆಯ್ತು, ಈಗ 3ಡಿ ಮನೆ!
ಇದು 3ಡಿ ಜಮಾನ. 3ಡಿ ಪುಸ್ತಕ, 3ಡಿ ಸಿನೆಮಾ, 3ಡಿ ಟೀವಿ ಆಯ್ತು, ಈಗ 3ಡಿ ಮನೆಯೊಂದು ಲಂಡನ್ನಲ್ಲಿ ನಿರ್ಮಾಣವಾಗಲಿದೆ. ಹೌದು. ಹಾಲೆಂಡ್ನ ಆರ್ಕಿಟೆಕ್ಟ್ ಜಾನಿಯಾಪ್ ರೂಯಿಸ್ಸೆನಾರ್ಸ್ ಎಂಬಾತ ಇಂಥ ಅಪರೂಪದ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಮನೆಗೆ 35 ಕೋಟಿ ವೆಚ್ಚ ತಗಲಬಹುದು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಈಗಾಗಲೇ ಜಾನಿಯಾಪ್ ಅವರು 3ಡಿ ಪ್ರಿಂಟಿಂಗ್ ತಜ್ಞ ಎನ್ರಿಕೋದಿನಿ ಅವರ ಜತೆ ಕೆಲಸ ಮಾಡುತ್ತಿದ್ದಾರೆ. ಎನ್ರಿಕೋದಿನಿ ಬಳಿ ಇರುವ 3ಡಿ ಪ್ರಿಂಟರ್ ಮಾರ್ಬಲ್ನಂಥ ವಸ್ತುವನ್ನು ಸೃಷ್ಟಿಸಲು ಮರಳು ಹಾಗೂ ವಿಶೇಷ ಬೈಂಡಿಂಗ್ ಏಜೆಂಟ್ ಅನ್ನು ಬಳಸುತ್ತದೆ. ಇದು ಸಿಮೆಂಟ್ಗಿಂತ ಹೆಚ್ಚು ಬಲಿಷ್ಠವಾಗಿರಲಿದೆಯಂತೆ. ಸಾಂಪ್ರದಾಯಿಕ ಮನೆ ನಿರ್ಮಾಣಕ್ಕೆ ಹೋಲಿಸಿದರೆ 3ಡಿ ಮನೆ ನಿರ್ಮಾಣ ವಿಭಿನ್ನವಾಗಿರಲಿದೆ. ಈ ರೀತಿಯ ಮನೆಗಳಿಗೆ ಸಿಮೆಂಟ್ ಬಳಕೆಯೂ ಕಡಿಮೆ ಅಲ್ಲದೆ, ಸಮಯದ ಉಳಿತಾಯವೂ ಆಗಲಿದೆ. ಅಂದ ಹಾಗೆ, ಜಾನಿಯಾಪ್ ಅವರ ಕನಸಿನ 'ಭೂದೃಶ್ಯ'ದ 3ಡಿ ಮನೆ 2014ರಲ್ಲಿ ಸಿದ್ಧವಾಗಲಿದೆಯಂತೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.