ವಿಜ್ಞಾನ-ತಂತ್ರಜ್ಞಾನ

ಪಾಸ್‌ವರ್ಡ್ ಕದ್ದ ಗೂಗಲ್!

ಕೆಲ ಸಮಾಜಘಾತಕ ಶಕ್ತಿಗಳು ಅಕೌಂಟ್‌ಗಳನ್ನು ಹ್ಯಾಕ್ ಮಾಡುತ್ತಿರುವುದು ಹಳೆಯ ವಿಷಯ. ಈಗ ಗೂಗಲ್ ಸಂಸ್ಥೆಯೇ ನಿಮ್ಮ ಅಕೌಂಟ್‌ಗಳನ್ನು ಹ್ಯಾಕ್ ಮಾಡುತ್ತಿದೆ!
ಓಪನ್ ವೈ-ಫೈ ನೆಟ್‌ವರ್ಕ್‌ಗಳಲ್ಲಿ ಇಂತಹದೊಂದು ಅಡ್ಡದಂಧೆ ನಡೆಯುತ್ತಿದೆ, ಬಳಿಕ ಅಲ್ಲಿ ದೊರೆತ ಮಾಹಿತಿಯನ್ನು ನಾನಾ ಕಂಪನಿಗಳ ಜತೆ ಹಂಚಿಕೊಳ್ಳಲಾಗುತ್ತಿದೆ ಎಂಬ ಗುರುತರ ಆರೋಪಗಳು ಗೂಗಲ್ ಮೇಲೆ ಬರುತ್ತಿವೆ. ಸ್ಕಾಟ್ಲೆಂಡ್‌ನಲ್ಲಿ ಇದಕ್ಕೆ ಸಂಬಂಧಿಸಿ ಸಾಕಷ್ಟು ದೂರುಗಳು ದಾಖಲಾಗಿವೆ. ತನಿಖೆಗಳು ಚುರುಕುಗೊಂಡಿವೆ. ಗೂಗಲ್ ಮ್ಯಾಪ್ ರಚನೆಗಾಗಿ 'ಗೂಗಲ್ ಸ್ಟ್ರೀಟ್ ವ್ಯೂವ್‌' ಎಂಬ ಕಾರು ಬಳಸಲಾಗುತ್ತದೆ. ಇದರಲ್ಲಿ ಆ್ಯಂಟೆನಾಗಳನ್ನು ಬಳಸಲಾಗುತ್ತದೆ. ಒಂದೊಮ್ಮೆ ವೈ-ಫೈ ನೆಟ್‌ವರ್ಕ್‌ಗಳು ಆ ಸಂದರ್ಭದಲ್ಲಿ ದೊರೆತರೆ ಆ್ಯಂಟೆನಾಗಳು ಎಲ್ಲ ಮಾಹಿತಿಗಳನ್ನು ಸ್ಕ್ಯಾನ್ ಮಾಡುತ್ತವೆ. ಬಳಿಕ ಈ ಸಂದರ್ಭದಲ್ಲಿ ದೊರೆತ ಮಾಹಿತಿಗಳನ್ನು ಕೆಲ ಕಂಪನಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬ ಆರೋಪವಿದೆ. ಈ ಹಿಂದೆ ಅಮೆರಿಕದಲ್ಲೂ ಇಂತಹ ಆರೋಪ ಕೇಳಿಬಂದಿತ್ತು. ಖಾಸಗಿ ಕಂಪನಿಯೊಂದು ಆ್ಯಂಟೆನಾಗಳ ಮೂಲಕ ಈ ರೀತಿ ಮಾಡುತ್ತಿದೆ, ಓಪನ್ ವೈ-ಫೈ ನೆಟ್‌ವರ್ಕ್‌ಗಳ ಮೂಲಕ ಲಕ್ಷಾಂತರ ಜನರ ಅಕೌಂಟ್ ವಿವರ ಪಡೆಯುತ್ತಿದೆ ಎಂಬ ಆರೋಪ ಮಾಡಲಾಗಿತ್ತು. ಆ ಕಂಪನಿಯು ಈ ವಿಷಯವನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿತ್ತು. ಸ್ಟ್ರೀಟ್ ವ್ಯೂವ್ ಕಾರುಗಳು ಬಂದ ಸಂದರ್ಭದಲ್ಲಿ ನಮ್ಮ ಮನೆಯ ವೈ-ಫೈ ಆನ್ ಆಗಿರಬಹುದು. ಒಂದೊಮ್ಮೆ ಇದಕ್ಕೆ ಪಾಸ್‌ವರ್ಡ್ ರಕ್ಷಣೆಯಿರದಿದ್ದರೆ ಸುಲಭವಾಗಿ ನಮ್ಮ ಪರ್ಸನಲ್ ಕಂಪ್ಯೂಟರ್‌ಗಳ ಮಾಹಿತಿಗಳನ್ನು ಆ್ಯಂಟೆನಾಗಳು ಸ್ಕ್ಯಾನ್ ಮಾಡುತ್ತವೆಯಂತೆ. ಇದು ಭಾರತದಲ್ಲಿಯೂ ನಡೆಯುತ್ತಿದೆಯೇ ಗೊತ್ತಿಲ್ಲ. ಆದರೆ ವೈ-ಫೈ ನೆಟ್‌ವರ್ಕ್‌ಗಳಿಗೆ ಪಾಸ್‌ವರ್ಡ್ ಹಾಕುವುದನ್ನು ಮಾತ್ರ ಮರೆಯಬೇಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!