ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

ಡಯಟ್ ಮಾಡಿದ್ರೆ ದಡ್ಡರಾಗ್ತೀರಿ!

Vishwanath S
Updated On : 10 Jul 2013, 7:21 am

ಡಯಟ್ ಮಾಡಿದ್ರೆ ಸಣ್ಣ ಆಗ್ತಾರೆ ಅಂತ ಕೇಳಿದ್ದೀರಿ. ಆದರೆ ದಡ್ಡರಾಗ್ತಾರೆ ಅಂದ್ರೆ ನಂಬುತ್ತೀರಾ?
ಹೌದು, ಕೆಲ ಸಂಶೋಧಕರು ಡಯಟ್ ಮಾಡೋದ್ರಿಂದ ದಡ್ಡರಾಗ್ತಾರೆ ಎಂದು ಹೇಳಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ಗುಂಪೊಂದು ಈ ಬಗ್ಗೆ ಗಂಭೀರವಾಗಿ ಸಂಶೋಧನೆ ಮಾಡುತ್ತಿದೆ. ಕೆಲವು ಇಲಿಗಳಿಗೆ 6 ವಾರ ಬರೀ ಜೇನುತುಪ್ಪದ ರೀತಿಯ ಪದಾರ್ಥ ಕೊಟ್ಟು ಡಯಟ್‌ನಲ್ಲಿ ಇಟ್ಟಿದ್ದರಂತೆ. ಈ ಸಂದರ್ಭದಲ್ಲಿ ಆ ಇಲಿಗಳು ಏನು ಹೇಳಿದರೂ ಗ್ರಹಿಸುವಲ್ಲಿ, ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದವಂತೆ. ಜೊತೆಗೆ ಮೊದಲಿದ್ದ ಚುರುಕುತನವೂ ಇರಲಿಲ್ಲವಂತೆ. ಹೀಗಾಗಿ ಡಯಟ್ ಜನರನ್ನು ದಡ್ಡರನ್ನಾಗಿ ಮಾಡಿಬಿಡಬಹುದು ಎಂಬ ಭಯದಿಂದಲೇ ಈ ಸಂಶೋಧನೆ ನಡೆಸಲಾಗಿದೆಯಂತೆ. ಜೇನುತುಪ್ಪದ ರೀತಿಯ ಪದಾರ್ಥ ಒಂದು ರೀತಿಯಲ್ಲಿ ದೇಹಕ್ಕೆ ಸಮಸ್ಯೆ ಎಂದು ಈ ತಜ್ಞರೇ ಅಭಿಪ್ರಾಯಪಟ್ಟಿದ್ದಾರೆ. ಅಂದರೆ ಇದು ಗ್ಲುಕೋಸ್ ರೀತಿಯಲ್ಲಿ ಕೆಲಸ ಮಾಡಲ್ಲವಂತೆ. ಸಕ್ಕರೆಯಲ್ಲಿ ಸಿಗುವ ಗ್ಲುಕೋಸ್‌ಗೂ, ಇದು ಸಿಹಿಯಾಗಿದ್ದರೂ ಇದರಲ್ಲಿ ಸಿಗುವ ಸಿಹಿ ಅಂಶಕ್ಕೂ ವ್ಯತ್ಯಾಸ ಇದೆಯಂತೆ. ಜೊತೆಗೆ ಇದು ಇನ್ಸುಲಿನ್ ಮೇಲೆ ಅಡ್ಡಪರಿಣಾಮ ಉಂಟು ಮಾಡುವುದಲ್ಲದೇ, ಮೆದುಳಿನ ರಾಸಾಯನಿಕಗಳ ಮೇಲೂ ಕೆಟ್ಟ ಪರಿಣಾಮವುಂಟು ಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಹೀಗಾಗಿ ಡಯಟ್ ಎಂದು ತಿನ್ನುವುದನ್ನು ಬಿಡುವುದಕ್ಕಿಂತ, ತರಕಾರಿ, ಹಣ್ಣುಗಳನ್ನು ತಿನ್ನುವ ಮೂಲಕ ಆರೋಗ್ಯವಂತರಾಗಿರಬಹುದು ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments