ವಿಶ್ವದ ಕಾಲು ಭಾಗ ಯುವಜನತೆ ದಿನದ 6 ಗಂಟೆಯನ್ನು ಆನ್‌ಲೈನ್‌ನಲ್ಲಿ ಕಳೆಯುತ್ತಿದ್ದಾರಂತೆ.
ಪ್ರತಿಷ್ಠಿತ ಮ್ಯಾಕೆಫೆ ಸಂಸ್ಥೆಯು ವಿಶ್ವದಾದ್ಯಂತ ನಡೆಸಿದ ಸಮೀಕ್ಷೆ ಬಳಿಕ ಈ ಅಂಶವನ್ನು ಬಹಿರಂಗಪಡಿಸಿದೆ. ಮತ್ತೊಂದು ಗಮನಾರ್ಹ ಅಂಶವೆಂದರೆ ಅಪ್ಪ-ಅಮ್ಮನನ್ನು ಹೇಗೆ ನಂಬಿಸಬೇಕು ಎಂಬ ನೈಪುಣ್ಯವನ್ನು ಮಕ್ಕಳು ಕಲಿತಿದ್ದಾರೆ. ಅಂತರ್ಜಾಲದಲ್ಲಿ ತಮ್ಮ ಇಷ್ಟದ ತಾಣವನ್ನು ಸರ್ಚ್ ಮಾಡುತ್ತಿದ್ದಾಗ ಪಾಲಕರು ಪ್ರವೇಶಿಸಿದರೆ ಮಕ್ಕಳು ತಮ್ಮ ಅನ್‌ಸೇಫ್ ಕಾರ್ಯಗಳಿಗೆ ತಡೆ ನೀಡಿ ಪಾಪದವರಂತೆ ಪೋಸ್ ನೀಡುತ್ತಾರೆ. ವಿಚಿತ್ರವೆಂದರೆ ಶೇ.80ರಷ್ಟು ಪಾಲಕರಿಗೆ ಇದನ್ನು ಪರೀಕ್ಷಿಸುವ ಪರಿ ಅಥವಾ ವೆಬ್ ನಿರ್ವಹಿಸುವ ರೀತಿಯೇ ಗೊತ್ತಿಲ್ಲ.
ಸಮೀಕ್ಷೆಯ ಪ್ರಮಖ ಅಂಶಗಳು
- ಶೇ.25ರಷ್ಟು ಯುವಕರು ದಿನದ 5-6 ಗಂಟೆ ಆನ್‌ಲೈನ್‌ನಲ್ಲಿರುತ್ತಾರೆ. ಆದರೆ ಅವರ ಪಾಲಕರು ಕೇವಲ 2 ಗಂಟೆ ಎಂದು ತಿಳಿದಿದ್ದಾರೆ.
- ಪಾಲಕರಿಗೆ ತಿಳಿಯದಂತೆ ತಮ್ಮ ವೈಯಕ್ತಿಕ ವಿವರಗಳನ್ನು ಮಕ್ಕಳು ಸಾಮಾಜಿಕ ತಾಣದಲ್ಲಿ ಹಾಕುತ್ತಿದ್ದಾರೆ.
- ಶೇ.12 ರಷ್ಟು ಪಾಲಕರಿಗೆ ಮಾತ್ರ ಮಕ್ಕಳ ಆನ್‌ಲೈನ್ ಸಂಬಂಧಗಳ ಬಗ್ಗೆ ಮಾಹಿತಿಯಿದೆ.
- ಶೇ.95ರಷ್ಟು ಯುವಕರು ಸಾಮಾಜಿಕ ತಾಣದಲ್ಲಿ ಅಕೌಂಟ್ ಹೊಂದಿದ್ದಾರೆ. ಅದರಲ್ಲಿ ಶೇ.86ರಷ್ಟು ಯುವಕರು ಫೇಸ್‌ಬುಕ್ ಖಾತೆ ಹೊಂದಿದ್ದಾರೆ.
- ಶೇ.57ಕ್ಕೂ ಅಧಿಕ ಯುವಕರು(13-23 ವರ್ಷ) ವೆಬ್‌ನಲ್ಲಿ ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ವೆಬ್‌ಸೈಟ್ ನೋಡುತ್ತಾರೆ.
- ಶೇ.53ರಷ್ಟು ಯುವಕರು ಸಾಮಾಜಿಕ ತಾಣ ಹಾಗೂ ಯೂ ಟ್ಯೂಬ್ ಮೂಲಕ ನೈಜ ಅಪರಾಧಗಳಿಗೆ ಸಂಬಂಧಿಸಿದ ಅದರಲ್ಲೂ ರಕ್ತ ಸಿಕ್ತ ಅಪರಾಧಗಳ ವಿಡಿಯೋ ನೋಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics