ಬುದ್ಧಿವಂತರ ತಲೆ ದಪ್ಪ ಇರುತ್ತಾ?
ಹೌದು! ಅಚ್ಚರಿ ಎನಿಸಿದರೂ ಸತ್ಯ. ಇದನ್ನು ವಿಜ್ಞಾನಿಗಳು ಐನ್ಸ್ಟೀನ್ ಮೆದುಳನ್ನು ಅಧ್ಯಯನಿಸಿ ಹೇಳಿದ್ದಾರೆ. ಇತರರಿಗೂ...
ಹೌದು! ಅಚ್ಚರಿ ಎನಿಸಿದರೂ ಸತ್ಯ. ಇದನ್ನು ವಿಜ್ಞಾನಿಗಳು ಐನ್ಸ್ಟೀನ್ ಮೆದುಳನ್ನು ಅಧ್ಯಯನಿಸಿ ಹೇಳಿದ್ದಾರೆ. ಇತರರಿಗೂ, ಐನ್ಸ್ಟೀನ್ ಅವರ ಮೆದುಳಿಗೂ ಒಂದಷ್ಟು ವ್ಯತ್ಯಾಸವಿದೆಯಂತೆ. ಅಂದರೆ ದಪ್ಪವಿದೆಯಂತೆ. ಹಾಗಾಗಿ ಬುದ್ದಿವಂತರ ಮೆದುಳು ದಪ್ಪ ಇರುತ್ತೆ ಅಂತಾರೆ ವಿಜ್ಞಾನಿಗಳು.
ಆದರೆ, ಇಲ್ಲಿ ಇನ್ನೊಂದು ವಿಜ್ಞಾನಿ ಗುಂಪಿನ ವಾದವಿದೆ. ಡಾಲ್ಫಿನ್ ಮತ್ತು ವೇಲ್ಸ್ ಮೆದುಳು ಅವುಗಳ ಸೈಜಿನಂತೆಯೇ ಇರುತ್ತದೆಯಂತೆ. ಅಂದರೆ ದಪ್ಪ ಇರುತ್ತದೆಯಂತೆ. ಹೀಗಾಗಿಯೇ ಅವು ತುಂಬಾನೆ ಇಂಟೆಲಿಜೆಂಟ್ ಅಂತಾರೆ ಇವರು. ಆದರೆ ಕಾಗೆ ಮೆದುಳು ತುಂಬಾನೆ ಚಿಕ್ಕದಾಗಿರುತ್ತದೆ. ಇದೂ ಅಸಾಮಾನ್ಯ ಬುದ್ಧಿವಂತಿಕೆ ಹೊಂದಿರುತ್ತದೆಯಲ್ಲಾ ಎನ್ನುವುದು ಈ ಗುಂಪಿನ ಪ್ರಶ್ನೆ. ಹೀಗಾಗಿ ದಪ್ಪ ಮೆದುಳಿನವರು ಕೆಲವೊಮ್ಮೆಯಷ್ಟೇ ತೀರಾ ಬುದ್ಧಿವಂತರಿರಬಹುದು ಎನ್ನುವುದು ಇವರ ವಾದ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.