ಕಾಣ್ತಿದೆ ಬೆಲ್ಟು!
ಭೂಮಿಯ ಸುತ್ತ ಮತ್ತೊಂದು ವ್ಯಾನ್ ಅಲೆನ್ ಬೆಲ್ಟ್ ಇರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದುವರೆಗೆ ಭೂಮಿಯ ಸುತ್ತ ಕೇವಲ ಎರಡೇ ಬೆಲ್ಟ್ಗಳಿವೆ ಎಂದು ಹೇಳಲಾಗಿತ್ತು. ಇವೆರಡನ್ನು 1958ರಲ್ಲಿ ವಿಜ್ಞಾನಿಗಳು ಪತ್ತೆ ಮಾಡಿದ್ದರು.
ಇದೀಗ ಮೂರನೇ ಬೆಲ್ಟ್ ಕೂಡ ಇದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಈ ಬೆಲ್ಟು ಭೂ ವಾತಾವರಣ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಮಾನವರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಬಗ್ಗೆಯೂ ಸಂಶೋಧನೆ ಶುರುವಾಗಿದೆ. ವಿಜ್ಞಾನಿಗಳು ಸಾಮಾನ್ಯವಾಗಿ ಇವನ್ನು 'ಕಿಲ್ಲರ್ ಇಲೆಕ್ಟ್ರಾನ್ಗಳು' ಎಂದು ಕರೆಯುತ್ತಾರೆ. ಇವು ಭೂಮಿಯ ಸುತ್ತ ಇದ್ದು ಮಿಠಾಯಿ ಆಕಾರದಲ್ಲಿರುತ್ತವೆ. ನಾಸಾದ ಬಾಹ್ಯಾಕಾಶ ವಿಭಾಗ ಈ ಬಗ್ಗೆ ಸಂಶೋಧನೆ ಕೈಗೊಂಡಿದ್ದು, ಹವಾಮಾನದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಈ ರೇಡಿಯೇಶನ್ ಬೆಲ್ಟ್ ಬಗ್ಗೆ ಅಧ್ಯಯನ ಪೂರ್ಣವಾದ ಬಳಿಕ ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.