ವಿಜ್ಞಾನ-ತಂತ್ರಜ್ಞಾನ

ಗಾಳಿ ಸಂದೇಶ!

ಸಂದೇಶ... ಮೇಘ ಸಂದೇಶ... ಪ್ರೇಮ ಸಂದೇಶ...
1970ರ ದಶಕದಲ್ಲೇ ಕನ್ನಡದ ಖ್ಯಾತ ಗಾಯಕಿ ಸುಶೀಲಾ ಅವರು ಈ ಹಾಡನ್ನು ಹೇಳಿದ್ದರು. ಮೋಡಗಳ ಮೂಲಕವೇ ಪ್ರೇಮ ಸಂದೇಶಗಳನ್ನು ಕಳಿಸುವ ಕಲ್ಪನೆ ಮಾಡಿದ್ದರು. ಈಗ ಜರ್ಮನಿಯ ವಿಜ್ಞಾನಿಯೊಬ್ಬರು ಗಾಳಿಯಲ್ಲಿಯೇ ಸಂದೇಶಗಳನ್ನು ಬರೆದು ಕಳುಹಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
ಗಾಳಿಯಲ್ಲಿ ನೀವು ಗೀಚಿದ ಅಕ್ಷರಗಳು ಇ-ಮೇಲ್ ಅಥವಾ ಚಾಟ್ ಬಾಕ್ಸ್‌ನಲ್ಲಿನ ಸಂದೇಶವಾಗಿ ಮಾರ್ಪಡಬಲ್ಲದು. ಈ ತಂತ್ರಾಂಶವು ಸುಮಾರು 8 ಸಾವಿರ ಅಕ್ಷರಗಳನ್ನು ಗುರುತಿಸಬಲ್ಲದು. ಹಾಗಾಗಿ ಇನ್ನು ಕಲ್ಪನೆಗಾಗಿಯೂ ಗಾಳಿಯಲ್ಲಿಯೂ ಗೀಚುವಂತಿಲ್ಲ!
ಜರ್ಮನಿಯ ಕ್ರಿಸ್ಟೋಫ್ ಆಮ್ ಎಂಬ ವಿಜ್ಞಾನಿ ಕಂಡುಹಿಡಿದಿರುವ ಗ್ಲೌಸ್ ಟಚ್ ಸ್ಕ್ರೀನ್ ಯುಗದಿಂದ 'ಏರ್ ಸ್ಕ್ರೀನ್‌' ಯುಗಕ್ಕೆ ಕೊಂಡೊಯ್ಯುವ ಸೂಚನೆ ನೀಡಿದೆ. ಗ್ಲೌಸ್‌ನಲ್ಲಿನ ಸೆನ್ಸಾರ್ ತಂತ್ರಜ್ಞಾನವು ಈ ಅಕ್ಷರಗಳನ್ನು ಗುರುತು ಹಿಡಿಯಲಿದೆ.
ಗ್ಲೌಸ್ ಧರಿಸಿದ ವ್ಯಕ್ತಿಯು ಗಾಳಿಯಲ್ಲಿ ಏನಾದರು ಬರೆದರೆ ಅದು ಕೋಡಿಂಗ್ ತಂತ್ರಜ್ಞಾನದ ಮೂಲಕ ಡಿವೈಸ್‌ಗೆ ಬರುತ್ತದೆ. ಅಲ್ಲಿ ಬಳಕೆದಾರರು ಸೂಚಿಸಿದ ವಾಹಕದ ಮೂಲಕ ಸಂದೇಶ ರವಾನೆಯಾಗುತ್ತದೆ. ಈ ತಂತ್ರಜ್ಞಾನವು ಸದ್ಯಕ್ಕೆ ಹ್ಯಾಂಡ್ ಗ್ಲೌಸ್‌ಗೆ ಸೀಮಿತವಾಗಿದೆ. ಇದನ್ನು ಸ್ಮಾರ್ಟ್‌ಫೋನ್‌ನಲ್ಲಿಯೂ ಬಳಸುವ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.
ಸ್ಮಾರ್ಟ್‌ಫೋನ್‌ನಲ್ಲಿ ಇದೇ ಸೆನ್ಸಾರ್ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಸ್ಮಾರ್ಟ್‌ಫೋನ್ ಡಿವೈಸ್ ಸಂಖ್ಯೆ ಹೆಚ್ಚಾದಾಗ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ