ವಿಜ್ಞಾನ-ತಂತ್ರಜ್ಞಾನ

ಟೆಕ್ಸ್ಟ್ ನೆಕ್!

ಮೊಬೈಲ್, ಟ್ಯಾಬ್ಲೆಟ್ ಅಥವಾ ಎಂಪಿ-3 ಪ್ಲೇಯರ್‌ಗಳನ್ನು ಅತಿಯಾಗಿ ಬಳಸುವ ಚಾಳಿಯದ್ದರೆ ಎಚ್ಚರದಿಂದಿರಿ.
ಇವುಗಳ ಅತಿಯಾದ ಬಳಕೆಯಿದ ಟೆಕ್ಸ್ಟ್ ನೆಕ್ ಎಂಬ ರೋಗ (ಕತ್ತು ನೋವು) ಬರಬಹುದು. ಸಂದೇಶ ಕಳುಹಿಸುವುದರಲ್ಲಿ, ಹಾಡು ಕೇಳುವುದರಲ್ಲಿ ಅಥವಾ ಟ್ಯಾಬ್ಲೆಟ್‌ನಲ್ಲಿ ಅತಿಯಾಗಿ ಚಾಟ್ ಮಾಡುವ ಚಟವಿದ್ದರೆ ಬದಲಿಸಿಕೊಳ್ಳಿ, ಇಲ್ಲವಾದಲ್ಲಿ ಅಲ್ಪ ವಿರಾಮ ನೀಡಿ ಮುಂದುವರಿಸಿ. ಇದರಿಂದ ಕತ್ತು, ಭುಜ ಹಾಗೂ ಬೆನ್ನು ಹುರಿಯ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಇದರಿಂದ ಭವಿಷ್ಯದಲ್ಲಿ ವಿಪರೀತ ಕತ್ತು ನೋವಿನಿಂದ ಬಳಲುವ ಅಪಾಯವಿದೆ. ಫ್ಲೋರಿಡಾದ ವೈದ್ಯರೊಬ್ಬರು ಇದನ್ನು 'ಟೆಕ್ಸ್ಟ್ ನೆಕ್‌' ಎಂದು ವ್ಯಾಖ್ಯಾನಿಸಿದ್ದಾರೆ. ಮೊಬೈಲ್, ಟ್ಯಾಬ್ಲೆಟ್ ಅಥವಾ ಎಂಪಿ-3 ಪ್ಲೇಯರ್‌ಗಳಲ್ಲಿ ಮುಳುಗಿಕೊಂಡಾಗ ನಮ್ಮ ಕತ್ತು ಅಸಹಜವಾಗಿರುತ್ತದೆ. ಇದರಿಂದ ನಮ್ಮ ಗಮನಕ್ಕೇ ಬಾರದೇ ದೇಹದ ಇತರೆ ಭಾಗಗಳ ಮೇಲೆ ಒತ್ತಡ ಬೀಳುತ್ತದೆ. ಆಗಾಗ ಇದಕ್ಕೆ ಬಿಡುವು ನೀಡಿ ಕತ್ತಿಗೆ ವಿಶ್ರಾಂತಿ ನೀಡುವುದು ಉತ್ತಮ.
ಈ ಅಭ್ಯಾಸವನ್ನು ಬದಲಿಸಿಕೊಳ್ಳದಿದ್ದರೆ ನೀವು ಎಂದೆಂದಿಗೂ 'ತಲೆ ಬಗ್ಗಿಸಿಯೇ' ನಡೆಯಬೇಕಾಗುತ್ತದೆ, ಹುಷಾರ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!