ಜಪಾನಿ ಮೀನುಗಳ ಅಮೆರಿಕ ಯಾನ!
ನಾವು ಕೆಲ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಭೂಕಂಪದಿಂದ ಕುಸಿತವಾದ ಮನೆಯಿಂದ ವಾರದ ಬಳಿಕ ಜೀವಂತವಾಗಿ ಸಿಕ್ಕ ಬೆಕ್ಕು, ನಾಯಿ ಅಥವಾ ಮನುಷ್ಯರು... ಹೀಗೆ ಹಲವಾರು ಕಥೆ ಕೇಳಿರುತ್ತೇವೆ. ಆದರೆ ಇದೊಂದು ವಿಚಿತ್ರ ಪ್ರಕರಣ. ಜಪಾನ್‌ನಲ್ಲಿ ಸಂಭವಿಸಿದ ಸುನಾಮಿ ವೇಳೆಯಲ್ಲಿ ಬೋಟ್‌ವೊಂದರಲ್ಲಿ ಸಿಕ್ಕಿ ಹಾಕಿಕೊಂಡ 5 ಮೀನುಗಳ ಗುಂಪೊಂದು ಅಮೆರಿಕದಲ್ಲಿ ಕಾಣಸಿಕ್ಕಿದೆ! ವಾಷಿಂಗ್ಟನ್‌ನ ಬೀಚ್‌ನಲ್ಲಿ ಈ ಮೀನುಗಳು ಸಿಕ್ಕಿದ್ದು ವಿಜ್ಞಾನಿಗಳಿಗೇ ಅಚ್ಚರಿ ಹುಟ್ಟಿಸಿದೆ. ಈ 2 ವರ್ಷದಲ್ಲಿ ಈ ಮೀನುಗಳು ಫೆಸಿಫಿಕ್ ಸಾಗರದಲ್ಲಿ ಸುಮಾರು 5 ಸಾವಿರ ಮೈಲಿಗಳ ಪ್ರಯಾಣ ಮಾಡಿ ಅಮೆರಿಕದ ದಡಕ್ಕೆ ಬಂದು ತಲುಪಿವೆ. 2011ರಲ್ಲಿ ಜಪಾನ್‌ನ ಫುಕೋಶಿಮಾದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿ ದಾಳಿಗೆ ಸಿಕ್ಕ ಈ ಮೀನುಗಳು ಬೋಟ್‌ವೊಂದರಲ್ಲಿ ಸಿಕ್ಕಿಕೊಂಡಿದ್ದವು. ಈ ಮೀನುಗಳಿದ್ದ ಬೋಟ್ ಕೂಡ ಸಾಗರದ ಅಬ್ಬರಕ್ಕೆ ಸಿಲುಕಿ ಅನಾಥವಾಗಿತ್ತು. ಫುಕುಶಿಮಾದಿಂದ ವಾಷಿಂಗ್ಟನ್‌ವರೆಗೆ ಬಂದಿರುವ ಈ ಮೀನುಗಳು ಬೀಕ್ ಎಂಬ ವರ್ಗಕ್ಕೆ ಸೇರಿದ್ದಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 'ಸಾಯಿ ಶೋ ಮರು' ಎಂಬ ಹೆಸರಿನ ಬೋಟ್‌ನಲ್ಲಿ ಈ ಮೀನುಗಳ ಗುಂಪು ಸಿಕ್ಕಿದ್ದು, ಜಪಾನ್‌ನ ಸಾಗರದಲ್ಲಿ ಸಿಗುವ ಮೀನುಗಳಿವು ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಮೀನುಗಳು 6 ಇಂಚು ಉದ್ದವಿದ್ದು, ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣ ಹೊಂದಿವೆಯಂತೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.