ನಗುವಿಗೂ ಒಂದು ಕಾರಣ
ಖುಷಿಯ ನಗೆ, ರೇಗಿಸುವ ನಗೆ... ಇದೆನಪ್ಪಾ ಎಂದು ಅಚ್ಚರಿಯೇ? ಹೌದು, ವಿಜ್ಞಾನಿಗಳು ನಗೆಯನ್ನೂ ವಿಂಗಡಿಸಿದ್ದಾರೆ. ಮಾನವನ ಮೆದುಳಿನ ಬಗ್ಗೆ ಅಧ್ಯಯನ ನಡೆಸಿದ ನಂತರ ಅವರು ನಗೆಯಲ್ಲೂ ವಿವಿಧ ಭಾಗಗಳಿವೆ ಎಂದಿದ್ದಾರೆ. ನಮ್ಮ ನಗೆಗೆ ಮೆದುಳು ಹೇಗೆ ರಿಯಾಕ್ಟ್ ಮಾಡುತ್ತೆ ಎಂಬುದನ್ನೂ ಅವರು ವಿವರಿಸಿದ್ದಾರೆ. ಖುಷಿಯಲ್ಲಿದ್ದಾಗ ನಾವು ನಗುವುದು ಮತ್ತು ಇನ್ನೊಬ್ಬರನ್ನು ರೇಗಿಸಿ ಬರುವ ನಗೆಗೂ ವ್ಯತ್ಯಾಸವಿದೆ ಎಂದಿದ್ದಾರೆ. ನಗೆಗೂ, ಮೆದುಳಿಗೂ ತೀರಾ ಹತ್ತಿರದ ಸಂಬಂಧವಿದ್ದು, ನಗುವಾಗ ಮೆದುಳಿನ ಪ್ಯಾಟ್ರನ್ ಬದಲಾಗಿಬಿಡುತ್ತೆ ಎಂದು ಹೇಳಿದ್ದಾರೆ. ಹೋಗಲಿ ಬಿಡಿ, ನಗೆಯಲ್ಲಿ ಎಷ್ಟು ವ್ಯತ್ಯಾಸವಿದ್ದರೇನು? ವಿಜ್ಞಾನಿಗಳು ಇನ್ನೂ ಮುಂದುವರಿದು ಹೋಗಿ, ನೀವು ಎಷ್ಟು ಬೇಕಾದರೂ ನಕ್ಕುಬಿಡಿ, ಇದರಿಂದ ನಿಮ್ಮ ಆರೋಗ್ಯ ಚೆನ್ನಾಗಿ ಸುಧಾರಿಸುತ್ತೆ ಎಂದು ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.