ಸೆಕ್ಸ್ ಅಡಿಕ್ಷನ್ ರೋಗವಲ್ಲ!
ಸೆಕ್ಸ್ ಅಡಿಕ್ಷನ್ ಒಂದು ರೋಗ ಎಂಬ ವಾದಕ್ಕೆ ಈಗ ಸೋಲಾಗಿದೆ. ವಿಜ್ಞಾನಿಗಳ ಪ್ರಕಾರ, ಇದು ರೋಗವೇ ಅಲ್ಲವಂತೆ. ಈ ಸಂಬಂಧ ಸಂಶೋಧನೆ ನಡೆಸುತ್ತಿರುವ ಅಮೆರಿಕದ ಸೈಕಿಯಾಟ್ರಿಕ್ ಅಸೋಸಿಯೇಷನ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಆದರೆ ಡ್ರಗ್ಸ್ ತೆಗೆದುಕೊಂಡೋ ಅಥವಾ ಇನ್ನಾವುದೋ ಕಾರಣಕ್ಕೆ ಈ ಚಟಕ್ಕೆ ಬಿದ್ದಿದ್ದರೆ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾದೀತು ಎಂದು ಈ ಸಂಸ್ಥೆ ಹೇಳಿದೆ.
ಇದನ್ನು ಯಾವಾಗ ರೋಗ ಎಂದು ಪರಿಗಣಿಸಬೇಕು ಎಂಬ ಬಗ್ಗೆಯೂ ಅದು ಹೇಳಿದೆ. ಪೋರ್ನೋಗ್ರಫಿ ಸೈಟ್ಗಳನ್ನೇ ನೋಡುತ್ತಾ ಮನೆಯಲ್ಲೇ ಕುಳಿತು ಕೆಲಸ ಕಳೆದುಕೊಂಡಾಗ ಮಾತ್ರ ಗಂಭೀರವಾಗಿ ಪರಿಗಣಿಸಿ, ಮಾನಸಿಕವಾಗಿ ಚಿಕಿತ್ಸೆ ಕೊಡಿಸಬೇಕಾದ ಪ್ರಮೇಯ ಬರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಎಲ್ಲವೂ ಸರಿ ಇದ್ದು, ಪೋರ್ನೋಗ್ರಫಿ ಸೈಟ್ಗಳನ್ನು ನೋಡುವ ಹವ್ಯಾಸ ಬೆಳೆಸಿಕೊಂಡವರಿಗೆ ಹೇಗೆ ಮೆಂಟಲಿ ಡಿಸಾರ್ಡರ್ ಆಗಿದೆ ಎಂದು ತಿಳಿಯುವುದು ಎಂದು ಅವರು ಪ್ರಶ್ನಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.