ವಿಜ್ಞಾನ-ತಂತ್ರಜ್ಞಾನ

ಚಾಟ್ ಚಟಾಕಿ

ಅಂದು ಡಾಕಿಯಾ ಡಾಕ್ ಲಾಯಾ....
ಇಂದು ಸ್ಮಾರ್ಟ್ಫೋನ್ ಸಂದೇಶ್ ಲಾಯಾ.....
ಸ್ಮಾರ್ಟ್ಫೋನ್ಗಳಲ್ಲಿನ ಅಫ್ಲಿಕೇಷನ್ಗಳ ಮೂಲಕ ಯಾರನ್ನೇ ಕ್ಷಣಕಾಲದಲ್ಲಿ ಸಂಪರ್ಕಿಸಲು ಸಾಧ್ಯವಿದೆ. ನಿಮಗೆ ಗೊತ್ತಿಲ್ಲದ, ಗೊತ್ತಿದ್ದು ಮರೆತಿರುವ, ಮರೆಯಲು ಸಾಧ್ಯವಾಗದ ಹೀಗೆ ಎಲ್ಲ ಪಟ್ಟಿಗಳ ಸ್ನೇಹಿತರನ್ನು ಪಡೆಯಲು ಹತ್ತಾರು ಅಪ್ಲಿಕೇಷನ್ಗಳಿವೆ. ಕೆಲವು ಪಕ್ಕಾ ಚಾಟ್ ರೂಮ್ಗಳಾಗಿದ್ದರೇ, ಮತ್ತೆ ಕೆಲವು ಸಣ್ಣ ಸಾಮಾಜಿಕ ತಾಣಗಳೇ ಆಗಿವೆ.
ಫೇಸ್ಬುಕ್ ಮೆಸೆಂಜರ್, ಗೂಗಲ್ ಟಾಕ್, ಸ್ಕೈಪ್ಗಳಿಗೆ ಸೀಮಿತವಾಗಿದ್ದ ಈ ಚಾಟ್ರೂಮ್ಗಳು ಇಂದು ಅಣಬೆಗಳಂತೆ ತಲೆ ಎತ್ತುತ್ತಿವೆ. ಕೆಲಸವಿಲ್ಲದಿರುವಾಗ ಇವೆಲ್ಲವೂ ಟೈಂಪಾಸ್ ಆಗಿ ದೊರೆಯಬಹುದು. ಆದರೆ ಎಚ್ಚರ ತಪ್ಪಿದರೆ ಕಷ್ಟಕ್ಕೆ ಸಿಲುಕಬೇಕಾದೀತು. ಏಕೆಂದರೆ ಕೆಲವು ಅಪ್ಲಿಕೇಷನ್ಗಳು ಅಷ್ಟು ಸುರಕ್ಷಿತವಾಗಿಲ್ಲ.
ಈಗಾಗಲೇ ನೀವೆಲ್ಲ ಉಪಯೋಗಿಸುತ್ತಿರುವ ಸ್ಕೈಪ್, ಮೆಸೆಂಜರ್ ಅಥವಾ ಹಳೆಯ ಜಮಾನಾದ ಗೂಗಲ್ ಟಾಕ್ ಹೊರತುಪಡಿಸಿ ಕೆಲ ಅಪ್ಲಿಕೇಷನ್ಗಳ ಬಗ್ಗೆ ಇಂದು ಮಾಹಿತಿ ನೀಡಿದ್ದೇವೆ. ತುಸು ಎಚ್ಚರದಿಂದ ಬಳಸಿದರೇ ಖುಷಿಯಾಗಬಹುದು.

ಶೇಕ್ ಬಿಫೋರ್ ಯೂಸ್!
ಚೀನಾ ಮೂಲದ ಸಾಫ್ಟ್ವೇರ್ ಕಂಪನಿಯು 2011ರಲ್ಲಿ ಬಿಡುಗಡೆ ಮಾಡಿದ್ದ 'ವಿ ಚಾಟ್' ಎಂಬ ಅಪ್ಲಿಕೇಷನ್ನ್ನು 3 ತಿಂಗಳ ಹಿಂದೆ ರೀಲಾಂಚ್ ಮಾಡಿದೆ. ಅದರಲ್ಲೂ ಕಳೆದ ಒಂದು ತಿಂಗಳಿಂದ ವ್ಯಾಪಕ ಪ್ರಚಾರ ಪಡೆಯುತ್ತಿರುವ ಈ ಅಪ್ಲಿಕೇಷನ್ ಪ್ರಸ್ತುತ ಎಲ್ಲ ಸ್ಮಾರ್ಟ್ಫೋನ್ ಅಪ್ಲಿಕೇಷನ್ ಮಾರುಕಟ್ಟೆಗಳ ಟಾಪ್-1 ಸ್ಥಾನದಲ್ಲಿದೆ.
ಈಗ ಲಭ್ಯವಿರುವ ಆಪರೇಟಿಂಗ್ ಸಿಸ್ಟಮ್ ಹಾಗೂ ಅಪ್ಲಿಕೇಷನ್ ಮಾರುಕಟ್ಟೆಯಲ್ಲಿ ತುಂಬಾ ಪ್ರಖ್ಯಾತ, ಆಕರ್ಷಕ ಹಾಗೂ ರಿಸ್ಕಿ ಚಾಟ್ ಅಥವಾ ಸೋಷಿಯಲ್ ರೂಮ್ ಎಂದು 'ವಿ ಚಾಟ್' ಅನ್ನು ಕರೆಯಬಹುದು. ಪ್ರಾಥಮಿಕವಾಗಿ ಇದೊಂದು ವಾಟ್ಸ್ ಅಪ್ ಹಾಗೂ ಫೇಸ್ಬುಕ್ ಮೆಸೆಂಜರ್ ರೂಪದ ಚಾಟ್ ರೂಮ್ ಆಗಿದ್ದರೂ ಒಂದೆರಡು ವಿಶೇಷಣಗಳೊಂದಿಗೆ ಸಾಮಾಜಿಕ ತಾಣದ ರೂಪವನ್ನು ಪಡೆದಿದೆ.
ಶೇಕ್ ಮತ್ತು ಲುಕ್ ಅರೌಂಡ್ ಎಂಬ ಎರಡು ಸೌಲಭ್ಯವನ್ನು ನೀಡಲಾಗಿದೆ. ನಿಮ್ಮ ಸ್ಮಾರ್ಟ್ಫೋನ್ ಅನ್ನು ಅಲುಗಾಡಿಸಿ ಒಂದು ಕ್ಷಣ ಕಾದರೆ, ನಿಮ್ಮ ಸುತ್ತಲಿನ ಪ್ರದೇಶದಲ್ಲಿ 'ವಿ ಚಾಟ್' ಅಪ್ಲಿಕೇಷನ್ ಬಳಸುತ್ತಿರುವವರ ದೊಡ್ಡ ಪಟ್ಟಿಯೇ ನಿಮ್ಮೆದುರು ತೆರೆದುಕೊಳ್ಳುತ್ತದೆ. ಆದರೆ ಅವರ ಫೋನ್ ಕೂಡ ಅಲುಗಾಡುತ್ತಿರಬೇಕು!
ಮತ್ತೊಂದೆಡೆ ಲುಕ್ ಅರೌಂಡ್ ಎಂಬ ಅವಕಾಶ ನೀಡಲಾಗಿದೆ. ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಸುತ್ತಲಿರುವ ನೂರಾರು ವಿ ಚಾಟ್ ಬಳಕೆದಾರರ ಪಟ್ಟಿ ನಿಮಗೆ ದೊರೆಯುತ್ತದೆ. ನಿಮಗೆ ಇಷ್ಟವಾದ, ಪರಿಚಯವಿರುವ ಗ್ರಾಹಕರಿಗೆ 'ಫ್ರೆಂಡ್ ರಿಕ್ವೆಸ್ಟ್' ಅಥವಾ 'ಚಾಟ್ ರಿಕ್ವೆಸ್ಟ್' ಕಳುಹಿಸಬಹುದು. ಆದರೆ ಅದಕ್ಕೆ 'ಸೆಂಡ್ ಗ್ರೀಟಿಂಗ್ಸ್' ಎಂಬ ಆಪ್ಷನ್ ಬಳಸಬೇಕು. ನಿಮ್ಮ ಮನವಿಗೆ ಒಪ್ಪಿಗೆ ಸೂಚಿಸಿ ಚಾಟ್ ಮಾಡಿದರೇ ಅವರು ನಿಮ್ಮ ಗೆಳೆಯರ ಬಳಗಕ್ಕೆ ಸೇರಿಕೊಳ್ಳುತ್ತಾರೆ.
ಈ ಅಪ್ಲಿಕೇಷನ್ ಹೇಗೆ ಆಕರ್ಷಕವಾಗಿದೆಯೋ ತುಸು ಡೆಂಜರಸ್ ಕೂಡ.
ಹೀಗೊಮ್ಮೆ ಕಲ್ಪಿಸಿಕೊಳ್ಳಿ. 'ಇಷ್ಟು ದಿನ ಕನವರಿಸುತ್ತಿದ್ದ ಕನಸಿನ ಕನ್ಯೆ ನಿಮ್ಮ ಪಕ್ಕದಲ್ಲಿಯೇ ಹಾದುಹೋದಳು. ಆದರೆ ಅವಳನ್ನು ಮಾತನಾಡಿಸುವಷ್ಟರಲ್ಲಿ ಟ್ರಾಫಿಕ್ನಲ್ಲಿ ಕಣ್ಮರೆಯಾಗಿಬಿಟ್ಟಳು. ಆಗ ಸುಮ್ಮನೇ ಕೈ ಹಿಸುಕಿಕೊಳ್ಳುವ ಬದಲು, ವಿ ಚಾಟ್ ಪುಟ ತೆರೆದು ಲುಕ್ ಅರೌಂಡ್ ಅಥವಾ ಶೇಕ್ ಆಪ್ಷನ್ ಬಳಸಿ, ಒಂದೊಮ್ಮೆ ಆಕೆಯೂ ವಿ ಚಾಟ್ ಬಳಸುತ್ತಿದ್ದರೆ ಸಂಪರ್ಕಿಸಲು ಸಾಧ್ಯವಿದೆ. ಆದರೆ ನಿಮ್ಮ ಹಾಗೆಯೇ ಮತ್ತೊಬ್ಬನೂ ಕಾಳು ಹಾಕುತ್ತಿದ್ದರೆ ಅವನಿಗೂ ಸಂಪರ್ಕಿಸಲು ಅವಕಾಶವಿರುತ್ತದೆ'!
ಆದ್ದರಿಂದ ಗೊತ್ತು ಪರಿಚಯವಿಲ್ಲದವರಿಂದ ದೂರವಿರಲು ಲೊಕೇಷನ್ ಡಾಟಾವನ್ನು ಆಗಾಗ ಅಳಿಸಿಹಾಕುವುದು ಉತ್ತಮ. ಆಗ ಲುಕ್ ಅರೌಂಡ್ ಅಥವಾ ಶೇಕ್ ಆಪ್ಷನ್ನಲ್ಲಿ ನಿಮ್ಮ ಹೆಸರು ಕಾಣುವುದಿಲ್ಲ. ಮತ್ತೊಂದು ವಿಷಯವೆಂದರೆ ಫೇಸ್ಬುಕ್ನಂತೆ ಇಲ್ಲಿ ನಿಮ್ಮದೇ ಕವರ್ ಪೇಜ್ ಹಾಗೂ ಫೋಟೋಗಳನ್ನು ಅಪ್ಲೋಡ್ ಮಾಡಲು ಅವಕಾಶವಿದೆ.

ಗ್ರೂಪ್ ಚಾಟ್ ರೂಮ್
ಪ್ರಾರಂಭಿಕ ಹಂತಗಳಲ್ಲಿ ಸ್ಕೈಪ್ ಹಾಗೂ ಗೂಗಲ್ ಟಾಕ್ನಲ್ಲಿ ಮಾತ್ರ ಈ ಅವಕಾಶ ನೀಡಲಾಗಿತ್ತು. ಈಗ ಬಹುತೇಕ ಎಲ್ಲ ಅಪ್ಲಿಕೇಷನ್ಗಳಲ್ಲಿಯೂ ಇದನ್ನು ನೀಡಲಾಗುತ್ತಿದೆ. ವಿ ಚಾಟ್ ಹಾಗೂ ಕಿಕ್ ಮೆಸೆಂಜರ್ನಲ್ಲಿಯ ಗ್ರೂಪ್ ಚಾಟ್ ಉತ್ತಮವಾಗಿದೆ. ಆದರೆ ಕಿಕ್ ಮೆಸೆಂಜರ್ಗೂ ವಾಟ್ಸ್ ಅಪ್ಗೂ ಅಂಥ ಯಾವುದೇ ಬದಲಾವಣೆ ಕಾಣುವುದಿಲ್ಲ. ಹೊಸತನ ಹುಡುಕುವವರಿಗೆ ಇದು ಅಷ್ಟೊಂದು ಕಿಕ್ ನೀಡುವುದಿಲ್ಲ. ಫೇಸ್ಬುಕ್ನಲ್ಲಿ ಕಳೆದವಾರ ಗ್ರೂಪ್ ಚಾಟ್ನ ಅವಕಾಶ ನೀಡಲಾಗಿದೆ. ಆದರೆ ವಿಡಿಯೋ ಅಥವಾ ಆಡಿಯೋ ಕಾಲ್ಗೆ ಇನ್ನು ಎಫ್ಬಿ ಮೆಸೆಂಜರ್ನಲ್ಲಿ ಅವಕಾಶ ನೀಡಿಲ್ಲ. ವಿಡಿಯೋ ಹಾಗೂ ಆಡಿಯೋ ಕಾಲ್ಗಳಿಗೂ ವಿ ಚಾಟ್ ಉತ್ತಮವಾಗಿದೆ.

ಸ್ಮೈಲಿ ಸ್ಟಿಕರ್ಸ್
ವಾಟ್ಸ್ ಅಪ್ನಲ್ಲಿನ ಸ್ಮೈಲಿ ಸ್ಟಿಕರ್ಸ್ಗಳ ಕಾರಣದಿಂದಲೇ ಹುಡುಗಿಯರಿಗೆ ಅದು ಅಚ್ಚುಮೆಚ್ಚಿನ ಅಪ್ಲಿಕೇಷನ್ ಆಗಿತ್ತು. ಎಫ್ಬಿ ಮೆಸೆಂಜರ್ನಲ್ಲಿ ಆ ಪ್ರಮಾಣದ ಸ್ಮೈಲಿಗಳಿಲ್ಲ ಎಂಬ ಕಾರಣಕ್ಕೆ ಕೆಲವರು ದೂರವಾಗಿದ್ದರು. ಆ ನಷ್ಟ ತುಂಬಲು ಮುಂದಾಗಿರುವ ಮೆಸೆಂಜರ್ ಈಗ ಸ್ಮೈಲಿ ಸ್ಟಿಕರ್ಸ್ಗಳನ್ನು ತಂದಿದೆ. ವಾಟ್ಸ್ ಅಪ್ನಲ್ಲಿರುವ ಪ್ರಮಾಣದಲ್ಲಿ ಸ್ಟಿಕರ್ಸ್ಗಳಿರದಿದ್ದರೂ ತುಸು ಮುದ್ದಾಗಿವೆ.

- ರಾಧೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ': AAP ಆರೋಪಗಳನ್ನು ತಳ್ಳಿಹಾಕಿದ ರಾಘವ್ ಚಡ್ಡಾ

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

ಇರಾನ್, ಅಮೆರಿಕದ ಎರಡು ಬಲಿಷ್ಠ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ್ದು ಹೇಗೆ?, ಇಲ್ಲಿದೆ ಸ್ಫೋಟಕ ವಿಚಾರ!

ಮೈತ್ರಿಯಲ್ಲಿ ಬಿರುಕು, ಸಾಲ ವಾಪಸ್ ಕೇಳಿದ UAE; ತಿಂಗಳಾಂತ್ಯಕ್ಕೆ 3.5 ಬಿಲಿಯನ್ ಡಾಲರ್ ಪಾವತಿಸಬೇಕಿದೆ ಪಾಕ್!

IPL 2026, DC vs MI: ಹಾರ್ದಿಕ್ ಪಾಂಡ್ಯ ಔಟ್, ಸೂರ್ಯಕುಮಾರ್ ಯಾದವ್‌ಗೆ ಮುಂಬೈ ನಾಯಕತ್ವ; ಡೆಲ್ಲಿ ಬೌಲಿಂಗ್ ಆಯ್ಕೆ!

SCROLL FOR NEXT