ವಿಶ್ವದ ಎರಡು ಖ್ಯಾತ ಸರ್ಚ್ ಎಂಜಿನ್‌ಗಳಿಗೆ ಬಹಿಷ್ಕಾರ ಹಾಕಲು ಜರ್ಮನ್ ಮುಂದಾಗಿದೆ. ಈ ಬಗ್ಗೆ ಸರ್ಕಾರಿ ಆದೇಶವಾಗದಿದ್ದರೂ ಸಾರ್ವಜನಿಕರು ಬಹಿಷ್ಕಾರಕ್ಕೆ ಮುಂದಾಗುತ್ತಿದ್ದಾರೆ. ಗೂಗಲ್ ಹಾಗೂ ಯಾಹೂ ಸರ್ವರ್‌ಗಳ ಮೂಲಕ ಅಮೆರಿಕದ ಬೇಹುಗಾರಿಕೆ ಏಜೆಂಟ್‌ಗಳು ಜರ್ಮನ್‌ನ ಮಾಹಿತಿ ಸೋರಿಕೆ ಮಾಡುತ್ತಿವೆ ಎಂದು ಅಲ್ಲಿನ ಪತ್ರಕರ್ತರು ಆರೋಪಿಸುತ್ತಿದ್ದಾರೆ. ಮುಂದಿನ 2 ತಿಂಗಳು ಯಾಹೂ ಹಾಗೂ ಗೂಗಲ್‌ನ ಯಾವುದೆ ಅಪ್ಲಿಕೇಶನ್, ಮೇಲ್ ಅಥವಾ ಸರ್ಚ್ ಎಂಜಿನ್‌ಗಳನ್ನು ಬಳಸಬೇಡಿ ಎಂದು ಪತ್ರಕರ್ತರು ಸಲಹೆ ನೀಡಿದ್ದಾರೆ.