ವಿಜ್ಞಾನ-ತಂತ್ರಜ್ಞಾನ

ಮುಂದೆಲ್ಲ ಆನ್‌ಲೈನ್ ಆಳ್ವಿಕೆ...

ಭವಿಷ್ಯದ ಮಾರುಕಟ್ಟೆಯನ್ನು ಆನ್‌ಲೈನ್ ಶಾಪಿಂಗ್ ಆಳಲಿದೆ. ಮಾಲ್ ಅಥವಾ ಕಂಪನಿ ಶೋರೂಮ್‌ಗಳು ಕೇವಲ ವಿಂಡೋ ಶಾಪಿಂಗ್‌ಗೆ ಮೀಸಲಾಗಲಿವೆ!

ಆನ್‌ಲೈನ್ ಮಾರುಕಟ್ಟೆಯ ಬೆಳವಣಿಗೆ ಹಾಗೂ ಎಲೆಕ್ಟ್ರಾನಿಕ್ ಮತ್ತು ಟೈಕ್ಸ್‌ಟೈಲ್ ಕ್ಷೇತ್ರದ ಅಭಿವೃದ್ಧಿಯೂ ಇಂಥ ಸೂಚನೆ ನೀಡುತ್ತಿದೆ. ಇದಕ್ಕೆ ತಕ್ಕಂತೆ ಆನ್‌ಲೈನ್ ಶಾಪಿಂಗ್ ಮಾಲ್‌ಗಳೆಂಬ ಖ್ಯಾತಿ ಹೊಂದಿರುವ ವೆಬ್‌ಸೈಟ್‌ಗಳು ತಮ್ಮ ವ್ಯಾಪಾರ ನೀತಿಯನ್ನು ಬಳಸಿಕೊಳ್ಳಬೇಕಾಗುತ್ತದೆ- ಹೀಗಂತ ಹೇಳಿಕೊಂಡಿದ್ದು ಹೋಮ್‌ಶಾಪ್-18ನ ವ್ಯವಹಾರ ಮುಖ್ಯಸ್ಥ ನರಸಿಂಹ ಜಯಕುಮಾರ್.

ಭಾರತದಲ್ಲಿ ಪ್ರಸ್ತುತ ರು. 47 ಸಾವಿರ ಕೋಟಿ ಆನ್‌ಲೈನ್ ವ್ಯವಹಾರ ನಡೆಯುತ್ತಿದೆ. ಇದು 2015ರ ವೇಳೆಗೆ ರು. 63 ಸಾವಿರ ಕೋಟಿ ದಾಟಲಿದೆ. ಹೋಮ್‌ಶಾಪ್-18 ಅಂತರ್ಜಾಲವೊಂದಕ್ಕೆ ಪ್ರತಿ ತಿಂಗಳು ಸುಮಾರು 60 ಲಕ್ಷ ಹಿಟ್ಸ್‌ಗಳು ಬರುತ್ತಿವೆ. ಆದರೆ ಭಾರತದಂಥ ದೇಶದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸುವಾಗ ಭೌಗೋಳಿಕ ಸಮಸ್ಯೆ ಎದುರಾಗಬಹುದು. ಸಂಸ್ಥೆಯು ಗ್ರಾಮೀಣ ಪ್ರದೇಶಗಳಿಗೂ ಡೋರ್ ಡೆಲಿವರಿ ನೀಡುವತ್ತ ಗಮನ ನೀಡುತ್ತಿದ್ದು, ಆದರೆ ಸಾರಿಗೆ ಸಂಪರ್ಕ ದೊಡ್ಡ ಸವಾಲಾಗಲಿದೆ ಎಂದು ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ಮೊದಲೆಲ್ಲ ಆನ್‌ಲೈನ್ ಶಾಪಿಂಗ್ ಎನ್ನುವುದು ಕೇವಲ ಚಿತ್ರಗಳನ್ನು ನೋಡಿಕೊಂಡು ವೈಶಿಷ್ಟ್ಯಗಳನ್ನು ಓದಿ ಖರೀದಿಸುವುದಕ್ಕೆ ಸೀಮಿತವಾಗಿತ್ತು. ಆದ್ದರಿಂದ ವಿಂಡೋ ಶಾಪಿಂಗ್ ಮಾಡಿ ಗ್ರಾಹಕರು ಇಲ್ಲಿ ಖರೀದಿಸುತ್ತಿದ್ದರು. ಗ್ರಾಹಕರಿಗೆ ಇನ್ನು ಹೆಚ್ಚಿನ ನೆರವು ನೀಡುವ ಉದ್ದೇಶದಿಂದ ವೆಬ್‌ಸೈಟಿನಲ್ಲೇ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ಇದರ ಜತೆಗೆ ಹೋಮ್‌ಶಾಪ್-18 ಟಿವಿಯನ್ನು ನಡೆಸಲಾಗುತ್ತಿದ್ದು, ಗ್ರಾಹಕರು ನೇರವಾಗಿ ಫೋನಿನ ಮೂಲಕವೇ ಖರೀದಿಗೆ ಮುಂದಾಗಬಹುದು ಎಂದು ನರಸಿಂಹ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

Indian Stock Market: ಕೊನೆಗೂ ಪುಟಿದಿದ್ದ ಭಾರತೀಯ ಷೇರು ಮಾರುಕಟ್ಟೆ, ಸೆನ್ಸೆಕ್ಸ್ ದಾಖಲೆಯ ಏರಿಕೆ

T20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ವಿಶ್ವ ದಾಖಲೆ ಬರೆದ ಪಾಕ್ ಕ್ಯಾಪ್ಟನ್!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?