ವಿಜ್ಞಾನ-ತಂತ್ರಜ್ಞಾನ

ಬುಕ್ ಮಾರ್ಕ್

'ಇಂತಹದೊಂದು ಸಮರ್ಥ ಸಂಪರ್ಕ ಮಾಧ್ಯಮ ಬರಲಿದೆ. ಜನರ ಜೀವನದಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ ಎಂಬುದು ಗೊತ್ತಿರಲಿಲ್ಲ' ಎಂಬುದ ಕೆಲವರ ಅಭಿಪ್ರಾಯ. ಇದು ಸುದ್ದಿ, ಮನರಂಜನೆ ಮತ್ತು ಶಿಕ್ಷಣದಲ್ಲಿ ಕ್ರಾಂತಿಯನ್ನು ಉಂಟು ಮಾಡಲಿದೆ ಎಂದು ಭಾವಿಸಿರಲಿಲ್ಲ ಎಂದು ಇನ್ನೂ ಕೆಲವರು ಹೇಳುತ್ತಾರೆ. ಖ್ಯಾತ ಕವಿ ಮತ್ತು ನಾಟಕಕಾರ ಟಿ.ಎಸ್. ಎಲಿಯೆಟ್ ಅಭಿಪ್ರಾಯವೇ ಬೇರೆ: 'ಇದು ಲಕ್ಷಾಂತರ ಜನರಿಗೆ ಏಕಕಾಲದಲ್ಲಿ ಒಂದೇ ನಗೆಹನಿಯನ್ನು ಒಂದೇ ಕಾಲದಲ್ಲಿ ಕೇಳಲು ಅವಕಾಶ ಮಾಡಿಕೊಡುತ್ತದೆ.  ಇಷ್ಟಾದರೂ ನಾವು ಒಂಟಿಯಾಗಿಯೇ ಉಳಿಯುವ ಸಾಧನ' ಎಂದು ಬಣ್ಣಿಸುತ್ತಾನೆ.
ಅಂದಹಾಗೆ ಇವರೆಲ್ಲ ಇದನ್ನು ಹೇಳಿದ್ದು ಫೇಸ್‌ಬುಕ್ ಬಗೆಗಲ್ಲ. ಅದು ಟಿವಿಯ ಬಗ್ಗೆ, 1960ರಲ್ಲಿ! ವಿಚಿತ್ರ ಅಂದರೆ, ಈ ಮಾತುಗಳನ್ನು ಸಂದರ್ಭದಿಂದ ಹೊರತುಪಡಿಸಿ ನೋಡಿದರೆ, ಫೇಸ್‌ಬುಕ್ ಬಗೆಗೇ ಹೇಳಿದ್ದೆಂದು ತಿಳಿಯಲು ಸಾಧ್ಯವಿದೆ. ಫೇಸ್‌ಬುಕ್ ಇಂದು ಯುವಜನರ ಬದುಕಿನ ಅವಿಭಾಜ್ಯ ಅಂಗವೆಂಬಂತಾಗಿದೆ. ಸಹಜ, ಅರ್ಥವತ್ತಾದ ಹಾಗೂ ಕೆಲವೊಮ್ಮೆ ಪ್ರತಿಷ್ಠೆಯ ವಿಷಯವೂ ಆಗಿರುವ ಫೇಸ್‌ಬುಕ್ ಜನರ ಒಂಟಿತನವನ್ನು ಹೋಗಲಾಡಿಸುವ, ಸ್ನೇಹಿತರನ್ನು ಒದಗಿಸಿ ತನ್ಮೂಲಕ ಅತ್ಮವಿಶ್ವಾಸ ಬೆಳೆಸುವ ಉಪಕರಣವೂ ಆಗಿದೆ. ಆದರೆ ಈ ಜನಪ್ರಿಯ, ಜನಸ್ನೇಹಿ ಹಾಗೂ ಜನೋಪಯೋಗಿ ಉಪಕರಣ, ನಿಮ್ಮನ್ನು ದುಃಖಪೀಡಿತರನ್ನಾಗಿಸಿ, ಮಂಕಾಗುವಂತೆಯೂ ಮಾಡಬಲ್ಲದು ಎಂಬ ವಿಷಯ ಇದೀಗ ಬಯಲಾಗಿದೆ.
ಸಂಪರ್ಕ ಸಾಧ್ಯತೆ ಜನರನ್ನು ಸಂತೋಷವಾಗಿರಿಸುತ್ತದೆ ಎನ್ನಲು ಬಾರದು. ವಾಸ್ತವವಾಗಿ ಇದು ಅವರ ತೃಪ್ತಿಯನ್ನು ಹೆಚ್ಚಿಸುತ್ತದೆ ಎಂದೇನಿಲ್ಲ. ಅದು, ಜೀವನದ ಬಗ್ಗೆ ನಾವು ಹೊಂದಿರುವ ಸಮಾಧಾನವನ್ನು ಕಡಿಮೆ ಮಾಡಬಲ್ಲದು ಎಂದು ಕೆಲವು ಸಂಶೋಧಕರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಪರಿಣಾಮಗಳ ಬಗ್ಗೆ ಈವರೆಗೆ ಹೆಚ್ಚೇನೂ ಅಧ್ಯಯನಗಳು ನಡೆದಿರಲಿಲ್ಲ. ಇವುಗಳ ಲಾಭಗಳ ಬಗ್ಗೆಯೂ ಅಷ್ಟಾಗಿ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. 2009ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯ ಅಸ್ಟಿನ್‌ನಲ್ಲಿ ಒಂದು ಸಂಶೋಧನೆ ನಡೆಸಿದೆ. ಫೇಸ್‌ಬುಕ್ ಬಳಸುವ 2,500 ವಿದ್ಯಾರ್ಥಿಗಳನ್ನು ಬಳಸಿಕೊಂಡು ಈ ಅಧ್ಯಯನ ನಡೆಸಲಾಯಿತು. ಫೇಸ್‌ಬುಕ್‌ನ ಲಾಭಗಳ ಕುರಿತು ಬಹಳ ಸಣ್ಣ ಸಕಾರಾತ್ಮಕ ಭಾವನೆ ಇರುವುದು ಪತ್ತೆಯಾಯಿತು. ಇದರ ನಂತರ ಮಿಷಿಗನ್ ಹಾಗೂ ಬೆಲ್ಜಿಯಂನ ಲ್ಯೂವೆನ್ ವಿವಿಗಳ ಮಾನಸಿಕ ತಜ್ಞರು ಮತ್ತೊಂದು ಅಧ್ಯಯನ ನಡೆಸಿದರು. ಇವರು ಮತ್ತಷ್ಟು ಹೆಚ್ಚು ವ್ಯಾಪ್ತಿಯಲ್ಲಿ ಸಂಶೋಧನೆ ನಡೆಸಿದಾಗ ಆಸಕ್ತಿಕರ ವಿಷಯಗಳು ಬಯಲಾದವು.
ಫೇಸ್‌ಬುಕ್‌ನ ಬಳಕೆಯಿಂದ ನಿಮ್ಮ ಜೀವನದಲ್ಲಿನ ತೃಪ್ತಿ ಸಂಬಂಧಿತ ಅಂಶಗಳಲ್ಲಿ ಅಗಿರುವ ಬದಲಾವಣೆಗಳೇನು ಎಂದು ಪ್ರಶ್ನಿಸಲಾಗಿತ್ತು. ದಿನಕ್ಕೆ ಐದು ಬಾರಿ ಫೇಸ್‌ಬುಕ್ ಬಳಸುವ ಈ ಮಂದಿಯನ್ನು ಎರಡು ವಾರ ಗಮನಿಸಲಾಯಿತು. ಈ ಮಂದಿಯ ಭಾವನಾತ್ಮಕ ಸ್ಥಿತಿಯ ಬಗ್ಗೆ ಪ್ರಶ್ನಿಸಲಾಯಿತು. ಈಗ ನಿಮಗೆ ಹೇಗೆನಿಸುತ್ತಿದೆ? ಇದೀಗ ನಿಮಗೆ ಎಷ್ಟರಮಟ್ಟಿಗೆ ಒಂಟಿತನ ಕಾಡುತ್ತಿದೆ? ನಾವು ಪ್ರಶ್ನೆ ಕೇಳಿದಾಗಿನಿಂದ ಈತನಕ ನೀವು ಎಷ್ಟು ಬಾರಿ ಫೇಸ್‌ಬುಕ್ ಬಳಸಿದ್ದೀರಿ? ಈ ಪ್ರಶ್ನೆಗಳು, ಫೇಸ್‌ಬುಕ್ ಬಳಸುವ ವ್ಯಕ್ತಿಯೊಬ್ಬನ ಯೋಗಕ್ಷೇವುದ ಬಗೆಗಿನ ಒಳನೋಟವನ್ನು ಸಂಶೋಧಕರಿಗೆ ಒದಗಿಸಿಕೊಟ್ಟಿವೆ.
ಸತತ ಎರಡು ವಾರ ಹೆಚ್ಚುಹೆಚ್ಚಾಗಿ ಫೇಸ್‌ಬುಕ್ ಬಳಸಿದವರ ಜೀವನದಲ್ಲಿನ ತೃಪ್ತಿಯ ಮಟ್ಟ ಕುಸಿಯುತ್ತಾ ಸಾಗಿದ್ದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಫೇಸ್‌ಬುಕ್ ಬಳಸಿದವರ ಯೋಗಕ್ಷೇವುದ ಸ್ಥಿತಿ ಸುಧಾರಿಸುವ ಬದಲು ಕುಸಿಯುತ್ತಾ ಸಾಗಿದೆ ಎಂದು ಅಧ್ಯಯನಕಾರರು ಪತ್ತೆ ಹಚ್ಚಿದ್ದಾರೆ.
ಹಾಗಾದರೆ ಇದಕ್ಕೆ ಕಾರಣಗಳೇನು?
ಹಾಗೆ ನೋಡಿದರೆ ಫೇಸ್‌ಬುಕ್, ಸಾಮಾಜಿಕ ಸಂಪರ್ಕದ ಮಾನವನ ಮೂಲ ಅಗತ್ಯವನ್ನು ಪೂರೈಸುವ ಒಂದು ಉತ್ತಮ ಸಂಪನ್ಮೂಲವಾಗಿದೆ. ಆದರೆ ಸಮಯ ಕಳೆದಂತೆ ಫೇಸ್‌ಬುಕ್ ಜನರಲ್ಲಿ ಸಂತಸದ ಭಾವನೆ ಮೂಡಿಸುವಲ್ಲಿ ವಿಫಲವಾಗಿದೆ.
ಫೇಸ್‌ಬುಕ್ ಬಳಕೆದಾರರ ತೃಪ್ತಿಯ ಮಟ್ಟವನ್ನು ಹೆಚ್ಚಿಸಬೇಕು. ಆದರೆ ಇದಕ್ಕೆ ವ್ಯತಿರಿಕ್ತವಾಗುತ್ತಿದೆ. ಇದಕ್ಕೆ ಬಹುತೇಕ ಕಾರಣ ಅಸಮಾಧಾನ ಮತ್ತು ಅಸೂಯೆ. ಫೇಸ್‌ಬುಕ್‌ನಲ್ಲಿ ನಾವು ನೀಡಿದ ನಮ್ಮ ವಿವರಗಳು ಉತ್ಪ್ರೇಕ್ಷಿತವಾಗಿರುತ್ತವೆ. ಇತರ ಮಿತ್ರರ ಪ್ರೊಫೈಲ್ ಹಾಗೂ ಸ್ಟೇಟಸ್‌ಗಳು ನಮ್ಮ ಮಾನಸಿಕ ಸ್ಥೈರ್ಯವನ್ನು ಅಲುಗಾಡಿಸುತ್ತವೆ. ಅವರ ಗೆಳೆಯರ ಸಂಖ್ಯೆ, ಲೈಕ್ಸ್, ಉದ್ಯೋಗದಲ್ಲಿ ಯಶಸ್ಸು, ಸುಖಕರ ರಜೆ, ಮಕ್ಕಳ ಸಾಧನೆ, ಆಸ್ತಿ, ವಾಹನ ಖರೀದಿಗಳ ಸ್ಟೇಟಸ್‌ಗಳು ನಮ್ಮನ್ನು ಕುಗ್ಗಿಹೋಗುವಂತೆ ಮಾಡುತ್ತದಂತೆ. ಉಳಿದವರೆಲ್ಲರೂ ಚೆನ್ನಾಗಿದ್ದಾರೆ, ನಾವೇ ಚೆನ್ನಾಗಿಲ್ಲ ಎಂಬ ಭಾವನೆಯನ್ನು ನಮ್ಮಲ್ಲಿ ಉಂಟಾಗಿಸುತ್ತದೆ. ಫೇಸ್‌ಬುಕ್‌ನಲ್ಲಿನ ಸ್ನೇಹಿತರು ತಮ್ಮ ವೈಫಲ್ಯಗಳ ಬದಲು ಯಶಸ್ಸಿನ ಅಂಶಗಳ ಬಗ್ಗೆಯೇ ಹೇಳಿಕೊಳ್ಳುವುದು ಹೆಚ್ಚು.
ಕಳೆದ ದಶಕದಲ್ಲಿ ಜಗತ್ತಿನಾದ್ಯಂತ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 130 ಕೋಟಿ ದಾಟಿದೆ. ಈ ಪೈಕಿ ಅರ್ಧದಷ್ಟು ಮಂದಿ ದಿನದ ಯಾವುದೇ ಹೊತ್ತಿನಲ್ಲಿ ಫೇಸ್‌ಬುಕ್ ನೋಡುತ್ತಿರುತ್ತಾರೆ. ಬಳಕೆದಾರನೊಬ್ಬ ದಿನಕ್ಕೆ ಸರಾಸರಿ 18 ನಿಮಿಷ ಅದರಲ್ಲಿ ಕಳೆಯುತ್ತಾನೆ. ಫೇಸ್‌ಬುಕ್ ಖಂಡಾಂತರಗಳ ಜನರನ್ನು ಬೆಸೆಯುತ್ತದೆ ನಿಜ. ಆದರೆ ಎಲ್ಲ ಒಳ್ಳೆಯ ಸಂಗತಿಗಳಲ್ಲಿ ಇರುವಂತೆ ಇಲ್ಲೂ ಕೆಲ ಉತ್ತಮವಲ್ಲದ ಅಂಶಗಳು ಇವೆ ಎಂಬುದು ಸಂಶೋಧಕರ ಪ್ರತಿಪಾದನೆ.

ಅತೃಪ್ತಿಗೆ ಕಾರಣಗಳು

  • ನಿಮ್ಮ ಗೆಳೆಯರ ಸ್ಟೇಟಸ್ ನಿಮ್ಮದಕ್ಕಿಂತ ಉತ್ತಮವಾಗಿದ್ದಾಗ.
  • ನಿಮ್ಮ ಗೆಳೆಯರು ನಿಮಗಿಂತ ಹೆಚ್ಚು ಲೈಕ್ ಪಡೆದಾಗ.
  • ನಿಮ್ಮ ಗೆಳೆಯರು ನಿಮಗಿಂತ ಹೆಚ್ಚು ಫ್ರೆಂಡ್ಸ್ ಅನ್ನು ಹೊಂದಿದ್ದಾಗ.
  • ನಿಮ್ಮ ಗೆಳೆಯರ ಜೀವನದ ಯಶಸ್ಸಿನ ಮಟ್ಟ ನಿಮ್ಮದಕ್ಕಿಂತ ಉತ್ತಮವಾಗಿದ್ದಾಗ.
-  ಪ್ರೇಮರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!