ವಿಜ್ಞಾನ-ತಂತ್ರಜ್ಞಾನ

ಇನ್ನಷ್ಟು ದೊಡ್ಡದು

ಮೈಕ್ರೋಸಾಫ್ಟ್ ಡಿವೈಸಸ್ ತನ್ನ ಬಹುನಿರೀಕ್ಷಿತ ಆಂಡ್ರಾಯ್ಡ್ ಚಾಲಿತ ನೋಕಿಯಾ ಎಕ್ಸ್‌ಎಲ್ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಎಕ್ಸ್ ಸರಣಿಯ ಸ್ಮಾರ್ಟ್ ಫೋನ್‌ಗಳು ಈಗಾಗಲೇ ಲಭ್ಯವಿದ್ದು, ಇದರ ಬೆನ್ನಲ್ಲೇ ನೋಕಿಯಾ ಎಕ್ಸ್‌ಎಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಾಗಿದೆ.
ಅತ್ಯಂತ ವೈಶಿಷ್ಯ್ಟಗಳಿಂದ ಕೂಡಿರುವ ನೋಕಿಯಾ ಎಕ್ಸ್‌ಎಲ್ ಸ್ಮಾರ್ಟ್‌ಫೋನ್ ನೋಕಿಯಾ ವಿಶೇಷತೆಗಳ ಜತೆ ಮೈಕ್ರೋಸಾಫ್ಟ್ ಸೇವೆಗಳನ್ನು ಒದಗಿಸಲಾಗುವುದು ಎಂದು ನೋಕಿಯಾ ಮಾರುಕಟ್ಟೆ ಮುಖ್ಯಸ್ಥ ವಿರಳ್ ಓಜಾ ತಿಳಿಸಿದರು.
ಗ್ರಾಹಕರ ನಿರೀಕ್ಷೆಯಂತೆ 5 ಇಂಚಿನ ಹಿರಿದಾದ ಪರದೆ ಉತ್ತಮ ಅನುಭವ ನೀಡಲಿದೆ. ಉತ್ತಮ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು 16 ಗಂಟೆಗಳ ಟಾಕ್ ಟೈಮ್ ಮತ್ತು 41 ದಿನಗಳ ಸ್ಟ್ಯಾಂಡ್ ಬೈ  ನೀಡುತ್ತದೆ.
ಮೈಕ್ರೋಸಾಫ್ಟ್ ಡಿವೈಸಸ್‌ನ ನೋಕಿಯಾ ಎಕ್ಸ್‌ಎಲ್ ಸ್ಮಾರ್ಟ್‌ಫೋನ್ ಏರ್‌ಟೆಲ್ ನೆಟ್ ವರ್ಕ್‌ನೊಂದಿಗೆ ಕೈ ಜೋಡಿಸಿದ್ದು ಗ್ರಾಹಕರಿಗೆ ಉತ್ತಮ ಕೊಡುಗೆ ಲಭ್ಯವಾಗುವಂತೆ ಮಾಡಲಾಗಿದೆ. ಆರು ತಿಂಗಳ ಕಾಲ ಅನಿಮಿಯತ ಅಪ್ಲಿಕೇಶನ್ ಡೌನ್‌ಲೋಡ್ ಕೊಡುಗೆ ನೀಡಲಾಗಿದೆ.
ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಇದರ ವೆಚ್ಚ ರು. 11,489. ನೋಕಿಯಾ ಎಕ್ಸ್ ಪ್ಲಸ್ ಸ್ಮಾರ್ಟ್‌ಫೋನ್ ಕೂಡ ಮಾರುಕಟ್ಟೆಗೆ ಪರಿಚಯಿಸಿದ್ದು, ವೇಗದ ಮಲ್ಟಿಟಾಸ್ಕಿಂಗ್ ವೈಶಿಷ್ಟ್ಯಗಳೊಂದಿಗೆ ರು. 8399 ದರದಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?