ವಿಜ್ಞಾನ-ತಂತ್ರಜ್ಞಾನ

ಮುದ್ದು ಮೋಟೋ

ಒಂದು ವರ್ಷದ ಹಿಂದಷ್ಟೇ ಅಮೆರಿಕದಲ್ಲಿ ಸ್ಥಾಪಿಸಲಾಗಿದ್ದ ಮೋಟೊರೊಲಾ ಮೊಬೈಲ್ ಉತ್ಪಾದನಾ ಫ್ಯಾಕ್ಟರಿಯನ್ನು ಮುಚ್ಚಲು ನಿರ್ಧರಿಸಿದ ಸುದ್ದಿಯ ಹಿಂದೆಯೇ ಭಾರತದಲ್ಲಿ ಮೊಟೊ ಜಿ ಮತ್ತು ಇ ಫೋನ್‌ಗಳು ಭಾರೀ ಬೇಡಿಕೆಯಲ್ಲಿರುವ ಸಿಹಿ ಸುದ್ದಿ ಕಂಪನಿಗೆ ಲಭಿಸಿದೆ.
ಮೊಟೊ ಜಿ ಮೊಬೈಲ್ ಬಿಡುಗಡೆಯಾದ ಸ್ವಲ್ಪ ಸಮಯದಲ್ಲೇ ಮೊಟೊ ಇ (7000) ಮೊಬೈಲ್ ಬಿಡುಗಡೆ ಮಾಡಿತ್ತು. ಫ್ಲಿಪ್‌ಕಾರ್ಟ್ ಈ ಮೊಬೈಲ್‌ನ ಅಧಿಕೃತ ಮಾರಾಟಗಾರನಾಗಿದ್ದು, ಸೆಟ್ ಪದೇ ಪದೇ ಔಟ್ ಆಫ್ ಸ್ಟಾಕ್ ಆಗುತ್ತಿದೆ. ಬಿಡುಗಡೆಯಾದ ಒಂದು ದಿನದಲ್ಲೇ ಔಟ್ ಆಫ್ ಸ್ಟಾಕ್ ಆಗಿದ್ದ ಫೋನ್‌ಗೆ ಫ್ಲಿಪ್‌ಕಾರ್ಟ್ ಈಗ 3ನೇ ಬಾರಿಗೆ ಔಟ್ ಆಫ್ ಸ್ಟಾಕ್ ಎಂಬ ಬೋರ್ಡು ತೂಗಿಹಾಕಿದೆ.
ಕೇವಲ 7000ಕ್ಕೆ ಉತ್ತಮ ರೆಸಲ್ಯೂಷನ್ ಸ್ಕ್ರೀನ್ (960ಶ್ರೀ540) ಹಾಗೂ ಗೊರಿಲ್ಲಾ 3 ಗ್ಲಾಸ್ ಹೊಂದಿದೆ. ಈ ದರದ ಆಸುಪಾಸಿನಲ್ಲಿರುವ ಮೊಬೈಲ್‌ಗಳಿಗಿಂತ ಇದರ ಸ್ಕ್ರೀನ್ ಉತ್ತಮವಾಗಿದೆ. ಜತೆಗೆ 1980 ಎಂಎಎಚ್ ಬ್ಯಾಟರಿ ಹೊಂದಿದೆ.
ಉಳಿದ ಮೊಟೊ ಮೊಬೈಲ್‌ಗಳಿಗೂ ಮೊಟೊ ಇಗೂ ಇರುವ ವ್ಯತ್ಯಾಸವೆಂದರೆ ಮೊಟೊ ಇ ಎಸ್‌ಡಿಕಾರ್ಡ್ ಅಳವಡಿಸುವ ಸೌಲಭ್ಯವಿದೆ. ಇದರ ಜತೆಗೆ ಕಂಪನಿ ಮುಂಬರುವ ಸಾಫ್ಟ್‌ವೇರ್ ಕೂಡ ಈ ಮೊಬೈಲ್‌ಗೆ ಒದಗಿಸುವುದಾಗಿ ಹೇಳಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಗೆ ಕಾರಣವಾಗಿರಬಹುದು. ಸದ್ಯ ಮಾರುಕಟ್ಟೆಯಲ್ಲಿರುವ ಮೊಬೈಲ್‌ಗಳಲ್ಲಿ ಇಷ್ಟು ಕಡಿಮೆ ದರಕ್ಕೆ ಇಷ್ಟು ಉತ್ತಮವಾದ ಇನ್ನೊಂದು ಮೊಬೈಲ್ ಲಭ್ಯವಿಲ್ಲ ಎಂದೇ ಹೇಳಬಹುದು.
ಆದರೆ ಅಮೆರಿಕದಲ್ಲಿ  ಸ್ಥಾಪಿಸಿದ ಫ್ಯಾಕ್ಟರಿ ಮಾತ್ರ ಲಾಭಕರವಲ್ಲ ಎಂಬ ಕಾರಣಕ್ಕೆ ಮುಚ್ಚಿಕೊಳ್ಳುತ್ತಿದೆ. ಅಮೆರಿಕದಲ್ಲಿ ಉದ್ಯೋಗಿಗಳು ದುಬಾರಿಯಾದ ಕಾರಣ ಮತ್ತು ಮೋಟೊರೊಲಾ ಮೊಬೈಲ್‌ಗಳು ನಿರೀಕ್ಷಿತ ಜನಸ್ಪಂದನ ಪಡೆಯದ ಹಿನ್ನೆಲೆಯಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿರುವ ತಯಾರಿಕಾ ಘಟಕ ಮುಚ್ಚಲು ಕಂಪನಿ ನಿರ್ಧರಿಸಿದೆ. ಮೊಟೊರೊಲಾ ಕಂಪನಿಯ ಫೋನ್‌ಗಳು ಏಷ್ಯಾದಲ್ಲಿ ಸಿದ್ಧಗೊಳ್ಳುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ